ಸಿನಿಮಾ

VIDEO | ಸಿದ್ದರಾಮಯ್ಯ ಸಿಎಂ ಆಗದಿದ್ದರೆ ಅರ್ಧ ಮೀಸೆ ಬೋಳಿಸ್ತೀನಿ, 1000 ರೂ. ಕೊಡ್ತೀನಿ ಎಂದ ಬಾಲಕ!

ಬಾಗಲಕೋಟೆ: ಸಿದ್ದರಾಮ್ಯಯ ಎರಡನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿ ಆಗಬೇಕು. ಇಲ್ಲದೇ ಹೋದಲ್ಲಿ ಅರ್ಧ ಮೀಸೆ ಬೋಳಿಸುತ್ತೇನೆ ಎಂದು ಬಾಲಕನೊಬ್ಬ ಹೇಳಿಕೊಂಡಿದ್ದಾನೆ. ಇದೀಗ ಬಾಲಕ ಆಡಿರುವ ಮಾತಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸ್ವಷ್ಟ ಬಹುಮತ ಸಾಧಿಸಿದ್ದರೂ, ಸಿಎಂ ಸ್ಥಾನಕ್ಕಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಡುವಿನ ಪೈಪೋಟಿ ನಡೆಯುತ್ತಿದೆ. ಇದು ಹೈಕಮಾಂಡ್​ಗೆ ಭಾರಿ ತಲೆನೋವಾಗಿ ಪರಿಣಮಿಸಿದೆ. ಹೆಚ್ಚಿನ ಶಾಸಕರ ಬೆಂಬಲವಿರುವ ಕಾರಣಕ್ಕೆ ಸಿದ್ದರಾಮಯ್ಯ ಅವರನ್ನು ಸಿಎಂ ಮಾಡಬೇಕು ಎಂಬ ಅಭಿಪ್ರಾಯದಿಂದ ಡಿ.ಕೆ.ಶಿವಕುಮಾರ್ ತೀವ್ರ ಅಸಮಾಧಾನಗೊಂಡಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

ಇದನ್ನೂ ಓದಿ: ಸಹೋದರಿಯರನ್ನು ವರಿಸಿದ ಯುವಕ; ಕಾರಣ ತಿಳಿದರೆ ವರ ನಿರ್ಧಾರಕ್ಕೆ ನೀವೂ ಮೆಚ್ಚುಗೆ ಸೂಚಿಸುತ್ತೀರಿ!

ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗಬೇಕು ಎಂದು ಅವರ ಅಭಿಮಾನಿಗಳು ಸೇರಿದಂತೆ, ಕೆಲ ಶಾಸಕರು ಒತ್ತಾಯಿಸುತ್ತಲೇ ಬಂದಿದ್ದಾರೆ. ಇದೆಲ್ಲದರ ನಡುವೆ ಬಾಲಕನೊಬ್ಬ “ಸಿದ್ದರಾಮಯ್ಯ ಸಿಎಂ ಆಗಬೇಕು, ಇಲ್ಲದಿದ್ದರೆ ಒಪ್ಪರೆ(ಒಂದು ಕಡೆಯ) ಮೀಸಿ ಬೋಳಿಸ್ತಿನಿ, 1000 ರೂಪಾಯಿ ಕೊಡ್ತೀನಿ” ಎಂದಿರುವ ವಿಡಿಯೋ ಜಾಲತಾಣಗಳಲ್ಲಿ ಹರಿದಾಡುತ್ತಿದೆ.‘

ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ತೊದಲಬಾಗಿ ಗ್ರಾಮದ ಆದಿತ್ಯ ದಳವಾಯಿ ಎಂಬ ಮೂರುವರೆ ವರ್ಷದ ಬಾಲಕ ಸಿದ್ದರಾಮಯ್ಯ ಸಿಎಂ ಆಗಬೇಕೆಂದು ಆಗ್ರಹಿಸಿದ್ದಾನೆ. ಸಿದ್ದರಾಮಯ್ಯ ಬಡ ಜನರಿಗೆ ಸಾಕಷ್ಟು ಸಹಾಯ ಮಾಡಿದ್ದಾನೆ. “ಬೂಟ್ ಕೊಟ್ಟಾನ, ಅಕ್ಕಿ ಕೊಟ್ಟಾನ, ಹಾಲು ಕೊಟ್ಟಾನ. ಹೀಗಾಗಿ ಸಿದ್ದರಾಮಯ್ಯನ ಮುಖ್ಯಮಂತ್ರಿ ಆಗ್ತಾನ” ಎಂದು ಬಾಲಕ ಹೇಳಿಕೊಂಡಿದ್ದಾನೆ.

Latest Posts

ಲೈಫ್‌ಸ್ಟೈಲ್