More

    ಸಹೋದರಿಯರನ್ನು ವರಿಸಿದ ಯುವಕ; ಕಾರಣ ತಿಳಿದರೆ ವರ ನಿರ್ಧಾರಕ್ಕೆ ನೀವೂ ಮೆಚ್ಚುಗೆ ಸೂಚಿಸುತ್ತೀರಿ!

    ರಾಜಸ್ಥಾನ: ಯುವಕನೊಬ್ಬ ಸಹೋದರಿಯರನ್ನು ಮದುವೆಯಾಗಿರುವ ಕುತೂಹಲಕಾರಿ ಘಟನೆ ಟೋಂಕ್ ಜಿಲ್ಲೆಯ ಮೋರ್ಜಾಲಾದ ಕುಗ್ರಾಮವಾದ ಉನಿಯಾರಾದಲ್ಲಿ ನಡೆದಿದೆ. ಸದ್ಯ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದೀಗ ಈ ಮದುವೆಯ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದ್ದು, ಸಹೋದರಿಯರು ಒಬ್ಬನನ್ನೇ ವಿವಾಹಗಿರುವ ಬಗ್ಗೆ ಕುತೂಹಲ ಮೂಡಿಸಿದೆ.

    ಇದನ್ನೂ ಓದಿ: ನಿಮ್ಮ ಮುಂದಿನ ಜನಾಂಗ ಕೊಲ್ಲೂರು ದೇವಸ್ಥಾನಕ್ಕೆ ಬರಬೇಕೆಂದರೆ ‘ದಿ ಕೇರಳ ಸ್ಟೋರಿ’ ಸಿನಿಮಾ ನೋಡಿ!

    ಹರಿ ಓಂ ಮೀನಾ ಎಂಬಾತ ಸಿಂದಾಳ ನಿವಾಸಿ ಬಾಬುಲಾಲ್ ಮೀನಾ ಅವರ ಪುತ್ರಿಯರಾದ ಕಾಂತಾ ಹಾಗೂ ಸುಮನ್​​ಳನ್ನು ವಿವಾಹವಾಗಿದ್ದಾನೆ. ಸಹೋದರಿಯನ್ನು ವಿವಾಹವಾಗಿದ್ದು, ಸಂತೋಷದಿಂದ ಇದ್ದೇನೆ ಎಂದು ವರ ಹೇಳಿಕೊಂಡಿರುವುದು ವರದಿಯಾಗಿದೆ. ವರ ಹರಿ ಓಂ ಪದವಿ ಮುಗಿಸಿದ್ದಾನೆ. ವಧು ಕಾಂತಾ ಉರ್ದುವಿನಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ್ದು, ಆಕೆಯ ಸಹೋದರಿ ಎಂಟನೇ ತರಗತಿವರೆಗೆ ವ್ಯಾಸಾಂಗ ಮಾಡಿದ್ದಾಳೆ.

    ಇದನ್ನೂ ಓದಿ: ಇದೇ ನೋಡಿ ಅತ್ಯಂತ ಹೆಚ್ಚು ಬೆಲೆಬಾಳುವ ಮಶ್ರೂಮ್; ಬೆಲೆ ಕೇಳಿದ್ರೆ ನೀವೂ ಅಚ್ಚರಿ ಪಡ್ತೀರಾ!

    ಕಾಂತಾ ಎಂಬ ಯುವತಿಯನ್ನು ವಿವಾಹವಾಗುವ ಬಗ್ಗೆ ಹರಿ ಓಂ ಮೀನಾ ಕಟುಂಬಸ್ಥರಿಂದ ಮೊದಲ ಬಾರಿಗೆ ಪ್ರಸ್ತಾಪ ಬಂದಿದೆ. ಈ ವೇಳೆ ವಧು, ವರನಿಗೆ ಷರತ್ತು ಹಾಕಿದ್ದಾಳೆ. ನನ್ನ ಸಹೋದರಿ ಮಾನಸಿಕ ಅಸ್ವಸ್ಥಳಾಗಿದ್ದು, ನನ್ನೊಂದಿಗೆ ಸದಾ ಇರುತ್ತಾಳೆ. ಹೀಗಾಗಿ ಆಕೆಯನ್ನೂ ಮದುವೆ ಆಗಬೇಕು ಎಂದಿದ್ದಾಳೆ. ಇದಕ್ಕೆ ವರ ಹಾಗೂ ಆತನ ಕುಟುಂಬಸ್ಥರು ಸಮ್ಮತಿ ಸೂಚಿಸಿದ ಬಳಿಕ ಕಳೆದ ಮೇ 5 ರಂದು ವಿಧಿವಿಧಾನದ ಪ್ರಕಾರ ವಿವಾಹ ಕಾರ್ಯಕ್ರಮ ನಡೆದಿದೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts