More

    ಇದೇ ನೋಡಿ ಅತ್ಯಂತ ಹೆಚ್ಚು ಬೆಲೆಬಾಳುವ ಮಶ್ರೂಮ್; ಬೆಲೆ ಕೇಳಿದ್ರೆ ನೀವೂ ಅಚ್ಚರಿ ಪಡ್ತೀರಾ!

    ಹಿಮಾಚಲ ಪ್ರದೇಶ: ವಿಶ್ವದಲ್ಲೇ ಅತ್ಯಂತ ಹೆಚ್ಚು ಬೇಡಿಕೆ ಇರುವ, ದುಬಾರಿ ಬೆಲೆಯ ಮಶ್ರೂಮ್​ಗಳು ಇದೀಗ ಉತ್ತರ ಭಾರತದ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿವೆ. ಹಿಮಾಚಲ ಪ್ರದೇಶದ ಹಿಮಭರಿತ ಇಳಿಜಾರುಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುವ ಫಂಗೈ ಬೆಳೆ ತನ್ನ ವಿನ್ಯಾಸ, ಪರಿಮಳ ಮತ್ತು ಹೆಚ್ಚು ಸಮಯ ಬಾಳುವಿಕೆಯಿಂದಾಗಿ ಪ್ರಸಿದ್ಧಿ ಹೊಂದಿದೆ.

    ಇದನ್ನೂ ಓದಿ: ವಿದ್ಯಾರ್ಥಿನಿ ಅಪಹರಣ! ತನಿಖೆ ನಡೆಸಿದ ಪೊಲೀಸರಿಗೆ ಕಾದಿತ್ತು ಶಾಕ್

    ಚಳಿಗಾಲದ ನಂತರದಲ್ಲಿ ಉಂಟಾದ ಮಳೆಯಿಂದಾಗಿ ಫಂಗೈ ಬೆಳೆ ಈ ಬಾರಿ ಉತ್ತರ ಭಾರತದ ಕೆಲವೆಡೆ ಈ ಬಾರಿ ಸಮೃದ್ಧವಾಗಿ ಬೆಳೆದಿದೆ. ಇವುಗಳಲ್ಲಿ ಸುಮಾರು 90 ಶೇ. ಬ್ರಿಟನ್, ಜರ್ಮನಿ, ಇಟಲಿ, ಫ್ರಾನ್ಸ್ ಮತ್ತು ನೆದರ್ಲ್ಯಾಂಡ್ಸ್ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಯುರೋಪಿಯನ್ ದೇಶದ ಸಸ್ಯಾಹಾರಿಗಳು ಪ್ರಾಣಿಗಳ ಪ್ರೋಟೀನ್​ಗಾಗಿ ಮೊರ್ಚೆಲ್ಲಾ ತಳಿ ಮುಶ್ರೂಮ್​ಗಳನ್ನು ಹೆಚ್ಚು ಸೇವಿಸುತ್ತಾರೆ. ಹೀಗಾಗಿ ಬೇಡಿಕೆ ಹೆಚ್ಚಿದೆ ಎಂದು ವ್ಯಾಪಾರಿಗಳು ಹೇಳಿಕೊಂಡಿದ್ದಾರೆ.

    ಪ್ರತಿ ಕಿ.ಗ್ರಾಂ ಗೆ 41,128 ರೂಪಾಯಿ!

    ಸ್ವಾಭಾವಿಕವಾಗಿ ಬೆಳೆಯುವ ಗುಚ್ಚಿ ಅಥವಾ ಮೊರ್ಚೆಲ್ಲಾ ಎಸ್ಕುಲೆಂಟಾ ಪ್ರಭೇದದ ಈ ಮಶ್ರೂಮ್​ಗಳು ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದೆ. ಒಂದು ಕೆ.ಜಿ ಒಣಗಿದ ಮಶ್ರೂಮ್​ಗೆ ದೇಶೀಯ ಮಾರುಕಟ್ಟೆಯಲ್ಲಿ ಗುಣಮಟ್ಟ ಮತ್ತು ಗಾತ್ರದ ಆಧಾರದ ಮೇಲೆ 8,000 ರಿಂದ 12,000 ರೂ.ವರೆಗೆ ಮಾರಾಟವಾಗುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಕಿ.ಗ್ರಾಂ ಗೆ 41,128 ರೂಪಾಯಿಗೆ ಮಶ್ರೂಮ್ ರಫ್ತಾಗುತ್ತಿದೆ.

    ಇದನ್ನೂ ಓದಿ: ಪಿಎಫ್​ಐ ಸಂಘಟನೆ ಜತೆಗೆ ಬಜರಂಗದಳ ಹೋಲಿಕೆ; ಖರ್ಗೆಗೆ ಸಮನ್ಸ್ ನೀಡಿದ ಕೋರ್ಟ್!

    ಹೆಚ್ಚಿದ ಬೇಡಿಕೆ

    ನೈಸರ್ಗಿಕ ಪರಿಸ್ಥಿತಿಯಲ್ಲಿ ಒಣಗಿದ ನಂತರ ಹೊಸ ಕೊಯ್ಲಿನ ಮಶ್ರೂಮ್​ನ್ನು 80-100 ಗ್ರಾಂ.ಗಳಾಗಿ ವಿಂಗಡಿಸಿ ದೇಶೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. ಮೇ ತಿಂಗಳಿನಿಂದ ಜೂನ್​ ಅಂತ್ಯದ ವರೆಗೆ ಮಶ್ರೂಮ್​ನ ಕೊಯ್ಲು ನಡೆಸಲಾತ್ತದೆ. ಹಿಮಾಚಲದ ತೋಟಗಳಲ್ಲಿ ಕೆಲಸ ಮಾಡುತ್ತಿರುವ ಹೆಚ್ಚಿನ ಸಂಖ್ಯೆಯ ನೇಪಾಳಿಗರು ಕಾಡಿನಲ್ಲಿ ಮುಶ್ರೂಮ್​ ಸಂಗ್ರಹಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಶಿಮ್ಲಾ, ಚಂಬಾ, ಕುಲು ಮತ್ತು ಮಂಡಿ ಜಿಲ್ಲೆಗಳ ಒಳಭಾಗದ ದಟ್ಟವಾದ ದೇವದಾರು ಕಾಡುಗಳಲ್ಲಿ ಮೊರ್ಚೆಲ್ಲಾ ತಳಿ ಮುಶ್ರೂಮ್​ಗಳನ್ನು ಬೆಳೆಯಲಾಗುತ್ತದೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts