More

    ರಜೆಯಲ್ಲಿ ಹೋಂ ವರ್ಕ್ ಮಾಡಲ್ಲ! ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಧರಣಿ ಕುಳಿತ ವಿದ್ಯಾರ್ಥಿ

    ರಾಜಸ್ಥಾನ: ಆದಿತ್ಯವಾರಂದು ಹೋಂ​ ವರ್ಕ್​ ನೀಡದ್ದ ಶಾಲೆಯ ನಿರ್ಧಾರವನ್ನು ವಿರೋಧಿಸಿದ ವಿದ್ಯಾರ್ಥಿ ಪ್ರಾಂಜಲ್ ಎಂಬಾತ ವಿಭಿನ್ನವಾಗಿ ಪ್ರತಿಭಟಿಸಿ, ಜಿಲ್ಲಾಧಿಕಾರಿ ಕಚೇರಿ ಮುಂದೆ ಕುಳಿತು ಹೋಂ ವರ್ಕ್ ಮಾಡುತ್ತಾ ಆಕ್ರೋಶ ಹೊರಹಾಕಿದ್ದಾನೆ. ಪ್ರತಿಭಟಿಸಿದ ಪ್ರಾಂಜಲ್ ಕೇಂದ್ರೀಯ ವಿದ್ಯಾಲಯದಲ್ಲಿ 9ನೇ ತರಗತಿ ವಿದ್ಯಾರ್ಥಿ.

    ಇದನ್ನೂ ಓದಿ: ಇದೇ ನೋಡಿ ಅತ್ಯಂತ ಹೆಚ್ಚು ಬೆಲೆಬಾಳುವ ಮಶ್ರೂಮ್; ಬೆಲೆ ಕೇಳಿದ್ರೆ ನೀವೂ ಅಚ್ಚರಿ ಪಡ್ತೀರಾ!

    ಭಾನುವಾರದಂದೂ ಸಾಕಷ್ಟು ಶಾಲೆಗಳು ಹೋಂ ವರ್ಕ್ ನೀಡುವುದು ಮಕ್ಕಳ ಹಕ್ಕುಗಳ ಉಲ್ಲಂಘನೆ ಮಾಡಿದಂತಾಗುತ್ತದೆ. ಹೀಗಾಗಿ ಇದನ್ನು ವಿರೋಧಿಸಿ ಭಾನುವಾರ ಬೆಳಗ್ಗೆ 10 ರಿಂದ ಮಧ್ಯಾಹ್ನ 12 ಗಂಟೆವರೆಗೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಕುಳಿತು ಹೋಂವರ್ಕ್ ಮಾಡಲು ನಿರ್ಧರಿಸಿದ್ದೇನೆ. ಆರೋಗ್ಯಕರ ಜೀವನಕ್ಕೆ ರಜೆಯನ್ನು ಹೊಂದಿರುವುದು ಅತ್ಯಗತ್ಯ. ಹೀಗಿರುವಾಗ ರಜೆಯ ದಿನದಂದು ಹೋಂ ವರ್ಕ್ ನೀಡುವುದು ಸರಿಯಲ್ಲ ಎಂದು ವಿದ್ಯಾರ್ಥಿ ಪ್ರಾಂಜಲ್ ಹೇಳಿಕೊಂಡಿದ್ದಾನೆ.

    ವಿದ್ಯಾರ್ಥಿಗಳಿಗೆ ರಜೆ ಮುಖ್ಯ!

    ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ರಜಾದಿನಗಳು ಅತ್ಯಗತ್ಯ. ಮಕ್ಕಳಿಗೆ ರಜಾದಿನಗಳಲ್ಲಿ ಆಟವಾಡುತ್ತಾ, ತಮ್ಮ ಆಸಕ್ತಿಯ ವಿಷಯಕ್ಕೆ ಸಮಯ ವಿನಿಯೋಗಿಸುವುದು ಮಕ್ಕಳ ಬೆಳವಣಿಗೆ ಸಹಾಯವಾಗುತ್ತದೆ. ಆದರೆ ಕೆಲವು ಪಾಲಕರು ಮತ್ತು ಶಾಲೆಗಳು ರಜಾ ದಿನದಂದೂ ಓದುವಂತೆ ಒತ್ತಾಯಿಸುವುದರಿಂದ ಮಕ್ಕಳು ಒತ್ತಡಕ್ಕೆ ಒಳಗಾಗುತ್ತಾರೆ ಎಂದು ವಿದ್ಯಾರ್ಥಿ ಪ್ರಾಂಜಲ್ ತಾಯಿ ಅನಾಮಿಕಾ ಹೇಳಿಕೊಂಡಿದ್ದಾರೆ.‘

    ಇದನ್ನೂ ಓದಿ: ನಿಮ್ಮ ಮುಂದಿನ ಜನಾಂಗ ಕೊಲ್ಲೂರು ದೇವಸ್ಥಾನಕ್ಕೆ ಬರಬೇಕೆಂದರೆ ‘ದಿ ಕೇರಳ ಸ್ಟೋರಿ’ ಸಿನಿಮಾ ನೋಡಿ!

    ಮಕ್ಕಳಿಗೆ ಏನು ಬೇಕು ಎಂಬುದನ್ನು ಅರ್ಥೈಸಿಕೊಳ್ಳಬೇಕು!

    ಬಹುತೇಕ ಪಾಲಕರು ರಜೆಯಲ್ಲೂ ತಮ್ಮ ಮಕ್ಕಲು ಶಿಕ್ಷಣದ ವಿಚಾರವಾಗಿ ಪಠ್ಯಗಳನ್ನು ಓದುತ್ತಾ ಇರಬೇಕು ಎಂದು ಬಯಸುತ್ತಾರೆ. ರಜೆ ಇದ್ದರೂ ಓದುವಂತೆ ಕೆಲ ಪಾಲಕರು ಹಾಗೂ ಶಾಲೆಗಳು ಮಕ್ಕಳನ್ನು ಒತ್ತಾಯಿಸುತ್ತಾರೆ. ಇದರಿಂದ ವಿದ್ಯಾರ್ಥಿಗಳು ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಮಕ್ಕಳಿಗೆ ಏನು ಬೇಕು ಎಂದು ಅರ್ಥಮಾಡಿಕೊಳ್ಳಲು ಯಾರು ಬಯಸುವುದಿಲ್ಲ? ಈ ಕುರಿತು ಜಿಲ್ಲಾಧಿಕಾರಿ, ಎಸ್ಪಿ ಹಾಗೂ ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲರು ಸೇರಿದಂತೆ ಇತರ ಅಧಿಕಾರಿಗಳಿಗೆ ಪತ್ರ ಬರೆದಿದ್ದರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅನಾಮಿಕಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts