More

    ಮುಸ್ಲಿಂ ಸಮುದಾಯಕ್ಕೆ ಡಿಸಿಎಂ, ಗೃಹಖಾತೆ ನೀಡಬೇಕು; ಕರ್ನಾಟಕ ಮುಸ್ಲಿಂ ಸಂಘದಿಂದ ಒತ್ತಾಯ

    ವಿಜಯನಗರ: ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸ್ವಷ್ಟ ಬಹುಮತ ಸಾಧಿಸಿದ್ದರೂ, ಸಿಎಂ ಸ್ಥಾನಕ್ಕಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಡುವಿನ ಪೈಪೋಟಿ ಹೈಕಮಾಂಡ್​ಗೆ ಭಾರಿ ತಲೆನೋವು ತಂದಿಟ್ಟಿದೆ. ಹೆಚ್ಚಿನ ಶಾಸಕರ ಬೆಂಬಲವಿರುವ ಕಾರಣಕ್ಕೆ ಸಿದ್ದರಾಮಯ್ಯ ಅವರನ್ನು ಸಿಎಂ ಮಾಡಬೇಕು ಎಂಬ ಅಭಿಪ್ರಾಯದಿಂದ ಡಿ.ಕೆ.ಶಿವಕುಮಾರ್ ತೀವ್ರ ಅಸಮಾಧಾನಗೊಂಡಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

    ಇದನ್ನೂ ಓದಿ: ಸಹೋದರಿಯರನ್ನು ವರಿಸಿದ ಯುವಕ; ಕಾರಣ ತಿಳಿದರೆ ವರ ನಿರ್ಧಾರಕ್ಕೆ ನೀವೂ ಮೆಚ್ಚುಗೆ ಸೂಚಿಸುತ್ತೀರಿ!

    ಸದ್ಯ ಕರ್ನಾಟಕದ ಜನತೆ ರಾಜ್ಯದ ನೂತನ ಸಿಎಂ ಯಾರು ಎಂಬ ಬಗ್ಗೆ ಕುತೂಹಲಿಗರಾಗಿದ್ದಾರೆ. ಇದೆಲ್ಲದರ ನಡುವೆ ಗೃಹ ಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಸ್ಥಾನಕ್ಕಾಗಿ ಮುಸ್ಲಿಂ ಸಮುದಾಯ ಬೇಡಿಕೆ ಇಟ್ಟಿದೆ. ಮುಸ್ಲಿಂ ಸಮುದಾಯಕ್ಕೆ ಡಿಸಿಎಂ ಸ್ಥಾನ ಮತ್ತು ಗೃಹಖಾತೆ ನೀಡಲು ಕರ್ನಾಟಕ ಮುಸ್ಲಿಂ ಸಂಘ ಒತ್ತಾಯಿಸಿದೆ.

    ಗೃಹಮಂತ್ರಿ ಸ್ಥಾನ ನೀಡಿ!

    ಹೊಸಪೇಟೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಕರ್ನಾಟಕ ಮುಸ್ಲಿಂ ಸಂಘದ ರಾಜ್ಯಾಧ್ಯಕ್ಷ ಬಷೀರ್ ಅಹಮ್ಮದ್ ಮಾತನಾಡುತ್ತಾ, ಕಾಂಗ್ರೆಸ್​ನ ಹಿರಿಯ ನಾಯಕ ಯುಟಿ. ಖಾದರ್, ಬಿ.ಝಡ್.ಜಮೀರ್ ಅಹ್ಮದ್​​ಗೆ ಅವರಿಗೆ ಸಂಪುಟದಲ್ಲಿ ಪ್ರಮುಖ ಹುದ್ದೆಗಳನ್ನು ನೀಡಬೇಕು. ಒಬ್ಬರಿಗೆ ಉಪಮುಖ್ಯಂತ್ರಿ ಸ್ಥಾನ, ಮತ್ತೊಬ್ಬರಿಗೆ ಗೃಹಮಂತ್ರಿ ಸ್ಥಾನ ನೀಡಬೇಕೆಂದು ಒತ್ತಾಯಿಸಿದ್ದಾರೆ.

    ಇದನ್ನೂ ಓದಿ: ನಿಮ್ಮ ಜಿಲ್ಲೆಯಿಂದ ಯಾರೆಲ್ಲ ಸಚಿವ ಸಂಪುಟಕ್ಕೆ ಸಂಭಾವ್ಯರು?

    ವಿಧಾನಸಭಾ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯ ಕಾಂಗ್ರೆಸ್​ಗೆ ಸಂಪೂರ್ಣ ಬೆಂಬಲ ನೀಡಿದೆ. ರಾಜ್ಯದ ಶೇ. 88ರಷ್ಟು ಮುಸ್ಲಿಂ ಸಮುದಾಯ ಈ ಬಾರಿ ಕಾಂಗ್ರೆಸ್​ಗೆ ಮತ ಚಲಾಯಿಸುವ ಮೂಲಕ, ಪಕ್ಷದ ಜತೆಗೆ ಬೆನ್ನೆಲುಬಾಗಿ ನಿಂತಿದೆ. ಹೀಗಾಗಿ ಮುಸ್ಲಿಂ ಸಮುದಾಯಕ್ಕೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts