More

  ನಿಮ್ಮ ಜಿಲ್ಲೆಯಿಂದ ಯಾರೆಲ್ಲ ಸಚಿವ ಸಂಪುಟಕ್ಕೆ ಸಂಭಾವ್ಯರು?

  ಬೆಂಗಳೂರು: ಇಂದು ದೆಹಲಿಯಲ್ಲಿ ಸಿಎಂ ಆಯ್ಕೆ ಮಾತ್ರವಲ್ಲ ಅದರ ಜತೆಜತೆಗೆ ನೂತನ ಸಚಿವ ಸಂಪುಟ ರಚನೆ ಕಸರತ್ತು ನಡೆಯುವ ಸಾಧ್ಯತೆಯೂ ಇದೆ. ಈ ಹಿನ್ನೆಲೆಯಲ್ಲಿ ಇಂದು ದೆಹಲಿಯಲ್ಲಿ ಹೈವೋಲ್ಟೇಟ್ ಮೀಟಿಂಗ್ ನಡೆಯಲಿದೆ.

  ಸದ್ಯ ದೆಹಲಿಗೆ ಜಿಲ್ಲಾವಾರು ಸಂಭಾವ್ಯರ ಪಟ್ಟಿ ತಲುಪಿದೆ. 27 ಜಿಲ್ಲೆಗಳಿಂದ ಸಂಭಾವ್ಯರ ಸಚಿವರ ಪಟ್ಟಿಯನ್ನು ದೆಹಲಿಗೆ ಕಳಿಸಲಾಗಿದ್ದು ಒಟ್ಟು 49 ಮಂದಿಯ ಹೆಸರು ಸಂಭಾವ್ಯ ಸಚಿವರ ಪಟ್ಟಿಯಲ್ಲಿದೆ. ಈ ಪಟ್ಟಿಯನ್ನು ಸುರ್ಜೇವಾಲ, ವೇಣುಗೋಪಾಲ್ ಶಾಟ್ ಲಿಸ್ಟ್ ಮಾಡಿದ್ದಾರೆ.

  ನಿಮ್ಮ ಜಿಲ್ಲೆಯಿಂದ ಯಾರೆಲ್ಲ ಸಂಭಾವ್ಯ ಸಚಿವರು?
  ಬೆಳಗಾವಿ ಜಿಲ್ಲೆಯಿಂದ ಲಕ್ಷ್ಮಣ್ ಸವದಿ, ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಸತೀಶ್ ಜಾರಕಿಹೊಳಿ ಸಂಭಾವ್ಯ ಸಚಿವರಾಗಿದ್ದಾರೆ.

  ಇನ್ನು ಬಾಗಲಕೋಟೆ ಜಿಲ್ಲೆಯಿಂದ ಒಂದೇ ಹೆಸರು ಮುನ್ನೆಲೆಗೆ ಬಂದಿದ್ದು ಆರ್.ಬಿ. ತಿಮ್ಮಾಪುರ್ ಸಚಿವರಾಗುವ ಸಾಧ್ಯತೆ ಇದೆ. ಇನ್ನು ಬಿಜಾಪುರ ಜಿಲ್ಲೆಯಿಂದ ಎಂ.ಬಿ. ಪಾಟೀಲ್, ಶಿವಾನಂದ ಪಾಟೀಲ್‌ ಹಾಗೂ ಯಶವಂತ ರಾಯಗೌಡ ಪಾಟೀಲ್‌ ಹೆಸರು ಪಟ್ಟಿಯಲ್ಲಿದೆ

  ಕಲ್ಬುರ್ಗಿಯಿಂದ ಪ್ರಿಯಾಂಕ್ ಖರ್ಗೆ, ಅಜಯ್ ಸಿಂಗ್ ಹಾಗೂ ಶರಣ ಪ್ರಕಾಶ್ ಪಾಟೀಲ್ ಸಚಿವರಾಗುವ ಸಾಧ್ಯತೆ ಇದೆ. ರಾಯಚೂರು ಜಿಲ್ಲೆಯಿಂದ ಬಸನಗೌಡ ತುರುವಿಹಾಳ ಒಬ್ಬರದ್ದೇ ಹೆಸರು ಪಟ್ಟಿಯಲ್ಲಿದೆ.

  ಇನ್ನು ಯಾದಗಿರಿ ಜಿಲ್ಲೆಯಿಂದಲೂ ಒಬ್ಬರ ಹೆಸರೇ ಪಟ್ಟಿಯಲ್ಲಿ ಉಲ್ಲೇಖವಾಗಿದ್ದು ಶರಣಪ್ಪ ದರ್ಶನಾಪೂರ್ ಸಚಿವರಾಗುವ ಸಾಧ್ಯತೆ ಇದೆ. ಬೀದರ್ ಜಿಲ್ಲೆಯಿಂದ ರಹೀಮ್ ಖಾನ್ ಹಾಗೂ ಈಶ್ವರ್ ಖಂಡ್ರೆ ನಡುವೆ ಸ್ಪರ್ಧೆ ನಡೆಯಲಿದ್ದು ಕೊಪ್ಪಳದಲ್ಲಿ ರಾಘವೇಂದ್ರ ಹಿಟ್ನಾಳ್ ಹಾಗೂ ಬಸವರಾಜ್ ರಾಯರೆಡ್ಡಿ ಹೆಸರು ಸಂಭಾವ್ಯ ಸಚಿವರ ಪಟ್ಟಿಯಲ್ಲಿದೆ.

  ಗದಗ ಜಿಲ್ಲೆಯಲ್ಲಿ ಹೆಚ್‌.ಕೆ. ಪಾಟೀಲ್ ಹೆಸರು ಮಾತ್ರವೇ ಕಂಡುಬರುತ್ತಿದ್ದು ಧಾರವಾಡ ಜಿಲ್ಲೆಯಿಂದ ವಿನಯ್ ಕುಲಕರ್ಣಿ ಹಾಗೂ ಪ್ರಸಾದ್ ಅಬ್ಬಯ್ಯ ಸಚಿವರಾಗುವ ಸಾಧ್ಯತೆ ಇದೆ.

  ಉತ್ತರ ಕನ್ನಡ ಜಿಲ್ಲೆಯಿಂದ 6 ಬಾರಿ ಶಾಸಕರಾಗಿದ್ದ ಕಾಗೇರಿಯನ್ನು ಸೋಲಿಸಿದ್ದ ಭೀಮಣ್ಣ ನಾಯಕರ ಹೆಸರನ್ನು ಸಂಭಾವ್ಯ ಸಚಿವರ ಪಟ್ಟಿಯಲ್ಲಿ ಸೇರಿಸಲಾಗಿದೆ. ಅದೇ ರೀತಿ ಹಾವೇರಿ ಜಿಲ್ಲೆಯಲ್ಲೂ ರುದ್ರಪ್ಪ ಲಮಾಣಿ ಒಬ್ಬರದ್ದೇ ಹೆಸರನ್ನು ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

  ಬಳ್ಳಾರಿಯಿಂದ ತುಕಾರಾಮ್, ನಾಗೇಂದ್ರ ಸಚಿವರಾಗುವ ಸಾಧ್ಯತೆ ಇದ್ದು ಚಿತ್ರದುರ್ಗ ಜಿಲ್ಲೆಯಿಂದ ರಘುಮೂರ್ತಿ ಒಬ್ಬರದ್ದೇ ಹೆಸರು ಕೇಳಿಬಂದಿದೆ. ಇನ್ನು ದಾವಣಗೆರೆ ಜಿಲ್ಲೆಯಿಂದ ಶಾಮನೂರು ಶಿವಶಂಕರಪ್ಪ ಹಾಗೂ ಎಸ್.ಎಸ್ ಮಲ್ಲಿಕಾರ್ಜುನ್ ನಡುವೆ ಸಚಿವ ಸ್ಥಾನಕ್ಕಾಗಿ ಸ್ಪರ್ಧೆ ನಡೆಯುವ ಸಾಧ್ಯತೆ ಇದೆ.

  ಇನ್ನು ಉಳಿದ ಜಿಲ್ಲೆಗಳ ಮಾಹಿತಿ ಇಂತಿದೆ:

  ಶಿವಮೊಗ್ಗ
  1. ಮಧುಬಂಗಾರಪ್ಪ
  2. ಬಿ.ಕೆ. ಸಂಗಮೇಶ್

  ಚಿಕ್ಕಮಗಳೂರು
  1. ಟಿ.ಡಿ. ರಾಜೇಗೌಡ

  ತುಮಕೂರು
  1. ಡಾ. ಪರಮೇಶ್ವರ್
  2. ಎಸ್.ಆರ್. ಶ್ರೀನಿವಾಸ್
  3. ಕೆ.ಎನ್. ರಾಜಣ್ಣ

  ಚಿಕ್ಕಬಳ್ಳಾಪುರ
  1. ಸುಬ್ಬಾರಡ್ಡಿ.

  ಕೋಲಾರ
  1. ರೂಪ ಶಶಿಧರ್
  2. ನಾರಾಯಣಸ್ವಾಮಿ

  ಬೆಂಗಳೂರು
  1. ಕೆ.ಜೆ. ಜಾರ್ಜ್
  2. ರಾಮಲಿಂಗಾರೆಡ್ಡಿ
  3. ಹ್ಯಾರಿಸ್
  4. ಎಂ.ಕೃಷ್ಣಪ್ಪ
  5. ದಿನೇಶ್ ಗುಂಡೂರಾವ್
  6. ಜಮೀರ್ ಅಹ್ಮದ್
  7. ಬಿ. ಶಿವಣ್ಣ

  ಮಂಡ್ಯ
  1. ಎನ್. ಚೆಲುವರಾಯಸ್ವಾಮಿ

  ಮಂಗಳೂರು
  1. ಯು.ಟಿ. ಖಾದರ್

  ಮೈಸೂರು
  1. ಎಚ್‌.ಸಿ. ಮಹದೇವಪ್ಪ
  2. ತನ್ವಿರ್ ಸೇ‌ಠ್

  ಚಾಮರಾಜನಗರ
  1. ಪುಟ್ಟರಂಗಶೆಟ್ಟಿ

  ಕೊಡಗು
  1. ಎ.ಎಸ್ ಪೊನ್ನಣ್ಣ

  ಬೆಂಗಳೂರು ಗ್ರಾಮಾಂತರ
  1. ಕೆ.ಎಚ್‌. ಮುನಿಯಪ್ಪ.

  ಸರ್ಕಾರ ರಚನೆಗೂ ಮುನ್ನ ಶುರುವಾಯ್ತು ಸಚಿವ ಸ್ಥಾನಕ್ಕೆ ಸ್ಪರ್ಧೆ; ವಿವಿಧ ಸಮುದಾಯದ ನಾಗರಿಕರಿಂದಲೂ ಒತ್ತಡ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts