More

    ಸರ್ಕಾರ ರಚನೆಗೂ ಮುನ್ನ ಶುರುವಾಯ್ತು ಸಚಿವ ಸ್ಥಾನಕ್ಕೆ ಸ್ಪರ್ಧೆ; ವಿವಿಧ ಸಮುದಾಯದ ನಾಗರಿಕರಿಂದಲೂ ಒತ್ತಡ

    ಬೆಂಗಳೂರು: ಇನ್ನೂ ಮುಖ್ಯಮಂತ್ರಿ ಯಾರು ಎನ್ನುವುದೇ ನಿರ್ಧಾರವಾಗಿಲ್ಲ. ಇನ್ನೂ ಸರ್ಕಾರ ರಚನೆಯೇ ಆಗಿಲ್ಲ. ಅಷ್ಟರಲ್ಲಿ ಅದಾಗಲೇ ನೂತನ ಶಾಸಕರಿಂದ ನಮನ್ನೂ ಸಚಿರನ್ನಾಗಿ ಮಾಡಿ ಎಂಬ ಬೇಡಿಕೆ ಶುರವಾಗಿದೆ.

    ಕೋಲಾರ

    ಕೋಲಾರದಲ್ಲಿ ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿರುವ ಬಂಗಾರಪೇಟೆ ಶಾಸಕ, ಎಸ್.ಎನ್.ನಾರಾಯಣಸ್ವಾಮಿ ಎಸ್.ಸಿ.ಬಲಗೈ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಸತತವಾಗಿ‌ ಮೂರು ಬಾರಿ ಶಾಸಕಾರಾಗಿ ಆಯ್ಕೆಯಾಗಿರುವ ನಾರಾಯಣಸ್ವಾಮಿ, ಈಗಾಗಲೇ ಸಚಿವ ಸ್ಥಾನಕ್ಕಾಗಿ ಮುಖಂಡರುಗಳ ಬಳಿ ಮನವಿ‌ ಮಾಡಿರುವುದಾಗಿ ಹೇಳಿಕೆ ನೀಡಿದ್ದಾರೆ.ರಾಜ್ಯದ ಹಾಗೂ ಜಿಲ್ಲೆಯ ಅಭಿವೃದ್ಧಿಗೆ ಕೆಲಸ ಮಾಡಲು ಅವಕಾಶ ಕೊಡುವಂತೆ ಮನವಿ ಮಾಡಿದ್ದಾರೆ.

    ಮಾಗಡಿ

    ಇನ್ನು ಇಂದು ಬೆಳಗ್ಗೆ ಏರ್ಪೋಟ್​ನಲ್ಲಿ ದೆಹಲಿಗೆ ಹೊರಟಿರುವ ಶಾಸಕ ಮಾಗಡಿ ಬಾಲಕೃಷ್ಣ ಹೇಳಿಕೆ ನೀಡಿದ್ದು “ನಾನು ಇಂದು ನಮ್ಮ ನಾಯಕರ ಜೊತೆ ದೆಹಲಿಗೆ ತೆರಳುತ್ತಿದ್ದೇನೆ. ರಾಜ್ಯದಲ್ಲಿ ಶ್ರಮಪಟ್ಟು ಪಾರ್ಟಿಯನ್ನ ಅಧಿಕಾರಕ್ಕೆ ತಂದಿದ್ದಾರೆ. ಶ್ರಮಪಟ್ಟಿದಕ್ಕೆ ಕೂಲಿಯನ್ನ ಕೇಳ್ತಿದ್ದೇವೆ.

    ನಾನು ಡಿಕೆಶಿ ಒಂದೇ ಜಿಲ್ಲೆಯವರು ಹೀಗಾಗಿ ಅವರ ಪರ ಒಲವಿದೆ. ನಾನು ಸಹ ದೆಹಲಿಗೆ ಹೋಗ್ತಿದ್ದೇನೆ ನೋಡೋಣ ಹೈಕಮಾಂಡ್ ಯಾವ ತೀರ್ಮಾನ ಕೈಗೊಳ್ತಾರೆ ನೋಡೋಣ. ನಾನು ಬಿಜೆಪಿ ಜೆಡಿಎಸ್ ನಲ್ಲಿ ಕೆಲಸ ಮಾಡಿ ಈಗ ಕಾಂಗ್ರೆಸ್ ನಲ್ಲಿದ್ದೇನೆ. ನಮ್ಮ‌ ಕ್ಷೇತ್ರದ ಜನರಿಗೂ ಸಚಿವರಾಗಲಿ ಅನ್ನೂ ಆಸೆ ಇದೆ. ನನಗೂ ಸಚಿವ ಸ್ಥಾನ ಬೇಕು ಎನ್ನುವ ಆಸೆಯಿದೆ. ಇದಏ ಖಾತೆ ಬೇಕು ಅಂತೆನಿಲ್ಲ, ಆದ್ರೆ ನೋಡೋಣ” ಎಂದು ಬ್ಯಾಟಿಂಗ್ ಮಾಡಿದ್ದಾರೆ.

    ಭಟ್ಕಳ

    ಇನ್ನು ಉತ್ತರಕನ್ನಡ ಜಿಲ್ಲೆಯಲ್ಲೂ ಭಟ್ಕಳದ ಶಾಸಕರಿಗೆ ಸಚಿವ ಸ್ಥಾನ ನೀಡಬೇಕು ಎಂದು ವಿವಿಧ ಸಮುದಾಯದ ನಾಗರಿಕರೇ ಆಗ್ರಹಿಸುತ್ತಿದ್ದಾರೆ. ಭಟ್ಕಳ ಶಾಸಕ ಮಂಕಾಳ ವೈದ್ಯಗೆ ಸಚಿವ ಸ್ಥಾನ ನೀಡಬೇಕೆಂದು ಆಗ್ರಹ ಕೇಳಿಬರುತ್ತಿದ್ದು ತಂಜೀಮ್ ಸಂಸ್ಥೆ, ಮೊಗೇರ ಸಮುದಾಯದ ನಾಗರಿಕರೂ ಒತ್ತಡ ತರುತ್ತಿದ್ದಾರೆ.

    ನೂತನ ಶಾಸಕ ಮಂಕಾಳ ವೈದ್ಯ, ಒಂದು ಲಕ್ಷ ಮತಗಳಿಸಿ ಭಟ್ಕಳ ಕ್ಷೇತ್ರದಲ್ಲಿ ದಾಖಲೆ ಬರೆದಿದ್ದು 2013ರಲ್ಲಿ ಪಕ್ಷೇತರರಾಗಿ ಗೆದ್ದಿದ್ದರು. ಆ ವೇಳೆ ಕಾಂಗ್ರೆಸ್ ಸರ್ಕಾರಕ್ಕೆ ಬೆಂಬಲ ನೀಡಿದ್ದರು. ಈ ಬಾರಿ ಎಲ್ಲಾ ಸಮುದಾಯದ ಮತ ಗಳಿಸಲು ಯಶಸ್ವಿಯಾಗಿದ್ದ ಶಾಸಕರು ಮೀನುಗಾರ ಸಮುದಾಯದವರಾಗಿದ್ದು ಈ ಹಿನ್ನೆಲೆಯಲ್ಲಿ ಸಚಿವ ಸ್ಥಾನ‌ ನೀಡಬೇಕೆಂದು ಒತ್ತಾಯ ಕೇಳಿಬರುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts