"ಕಾಂಗ್ರೆಸ್ ಸರ್ಕಾರ ಬಂದಿದೆ, ನಾವು ಬಿಲ್ ಕಟ್ಟಲ್ಲ" ಎಂದ ಗ್ರಾಮಸ್ಥರು!

current bill
Published on

ಚಿತ್ರದುರ್ಗ: ಕಾಂಗ್ರೆಸ್​ ಸರ್ಕಾರ 200 ಯೂನಿಟ್ ವಿದ್ಯುತ್​ಅನ್ನು ಉಚಿತವಾಗಿ ನೀಡುವ ಭರವಸೆ ಕೊಟ್ಟಿದ್ದು ಈಗಾಗಲೇ ಜನರು ಕರೆಂಟ್ ಬಿಲ್ ಕಟ್ಟಲ್ಲ ಎಂದಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಜಾಲಿಕಟ್ಟೆ ಗ್ರಾಮದಲ್ಲಿ ಜನರು ವಿದ್ಯುತ್ ಬಿಲ್ ಪಾವತಿಗೆ ನಿರಾಕರಿಸಿದ್ದು ಬೆಸ್ಕಾಂ ಮೀಟರ್ ರೀಡರ್​ಗೆ ಆವಾಜ್ ಕೂಡ ಹಾಕಿದ್ದಾರೆ.

ಗ್ರಾಮಸ್ಥರು ವಿದ್ಯುತ್ ಬಿಲ್ ಕಟ್ಟಲ್ಲ ಎಂದಿರುವ ವಿಡಿಯೋ ವೈರಲ್ ಆಗುತ್ತಿದ್ದು ಅದರಲ್ಲಿ ಜನರು, "ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ, ನಾವು ಬಿಲ್ ಕಟ್ಟಲ್ಲ. ವಿದ್ಯುತ್ ಫ್ರೀ ಎಂದು ಮೊದಲೇ ಕಾಂಗ್ರೆಸ್ ಘೋಷಿಸಿದೆ. ಈಗ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆಯಲ್ಲ" ಎಂದು ಜನ ವಾದಿಸುತ್ತಿದ್ದಾರೆ.

ಆದರೆ ಈ ಆದೇಶ ಬರುವವರೆಗೆ ಬಿಲ್ ಕಟ್ಟಲೇ ಬೇಕೆಂದು ಮೀಟರ್ ರೀಡರ್ ಜನರಿಗೆ ಅರ್ಥ ಮಾಡಿಸಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ಉತ್ತರಿಸಿದ ಗ್ರಾಮಸ್ಥರು, ಆದೇಶದ ಬಗ್ಗೆ ಕಾಂಗ್ರೆಸ್​ನವರಿಗೇ ಕೇಳಿ ಎಂದು ಮೀಟರ್​ ರೀಡಿಂಗ್​ ಬಂದವರನ್ನು ಇಕ್ಕಟ್ಟಿಗೆ ಸಿಕ್ಕಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net