More

    ಈಶ್ವರಪ್ಪಗೆ ಕಜಾಕಿಸ್ತಾನದಿಂದ ಕರೆ! ಪೊಲೀಸರಿಗೆ ದೂರು ನೀಡಲಿರುವ ಮಾಜಿ ಸಚಿವ…

    ಶಿವಮೊಗ್ಗ: ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ನಿನ್ನೆ ರಾತ್ರಿ ಕಜಾಕಿಸ್ತಾನದಿಂದ ಕರೆ ಬಂದಿದೆ ಎಂದು ಮಾಹಿತಿ ನೀಡಿದ್ದಾರೆ.

    ಈ ಸಂದರ್ಭ ಮಾತನಾಡಿದ ಮಾಜಿ ಸಚಿವರು, “ನಿನ್ನೆ ರಾತ್ರಿ ಕಜಾಕಿಸ್ತಾನದಿಂದ ರಾತ್ರಿ 12ಕ್ಕೆ ನನಗೆ ಬೆದರಿಕೆ ಕರೆ ಬಂದಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಿದ್ದೇನೆ. ನಾನು ಕಾಲ್ ರಿಸೀವ್ ಮಾಡಿಲ್ಲ. ಮೊಬೈಲ್ ಸೈಲೆಂಟ್ ಮೋಡ್ ನಲ್ಲಿಟ್ಟಿದ್ದೆ” ಎಂದು ಹೇಳಿದರು.

    ಕೇಂದ್ರ ಸಚಿವ ನಿತಿನ್ ಗಡ್ಕರಿಗೂ ಬಂದಿದ್ದ ಕರೆ!

    ಇದೇ ಸಂದರ್ಭದಲ್ಲಿ ಅವರು ಹಿಂದೆ ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಬೆದರಿಕೆ ಕರೆ ಬಂದಿದ್ದ ಬಗ್ಗೆಯೂ ನೆನಪಿಸಿಕೊಂಡ ಅವರು, “ಹಿಂದೆ ಮಹಾರಾಷ್ಟ್ರದ ವ್ಯಕ್ತಿಯೊಬ್ಬರನ್ನು ಅವರು ಬಂಧಿಸಿದಾಗ ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಬೆದರಿಕೆ ಕರೆ ಮಾಡಿದ್ದು ಎಂದು ಗೊತ್ತಾಗಿತ್ತು. ಆತ ಶಾಹೀರ್ ಶೇಖ್. ಆತನ ಡೈರಿಯಲ್ಲಿ ನನ್ನ ಹೆಸರೂ ಉಲ್ಲೇಖವಾಗಿತ್ತು. ಈ ಹಿನ್ನೆಲೆಯಲ್ಲಿ ನನಗೆ ಕರೆ ಬಂದಿರಬಹುದು” ಎಂದು ಹೇಳಿದ್ದು ಇದೇ ಸಂದರ್ಭದಲ್ಲಿ ಯಾವ ಮೊಬೈಲ್​ ಸಂಖ್ಯೆಯಿಂದ ಕರೆ ಬಂದಿತ್ತು ಎನ್ನುವುದನ್ನೂ ತಿಳಿಸಿದ್ದಾರೆ.

    ಇದನ್ನೂ ಓದಿ: ಹಿಂಡಲಗಾ ಜೈಲಿನಿಂದ ಕೇಂದ್ರ ಸಚಿವ ಗಡ್ಕರಿಗೆ ಬೆದರಿಕೆ!? ಬೆಳಗಾವಿಯಲ್ಲಿ ನಾಗ್ಪುರ ಪೊಲೀಸರ ಕಾರ್ಯಾಚರಣೆ

    ಇದಾದ ಮೇಲೆ ಕಾಂಗ್ರೆಸ್​ ಮೇಲೆ ಹರಿಹಾಯ್ದ ಈಶ್ವರಪ್ಪ, “:ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ದೇಶ ವಿರೋಧಿ ಚಟುವಟಿಕೆಗಳು ಹೆಚ್ಚಾಗಿದೆ. ಬೆಳಗಾವಿಯ ತಿಲಕ ವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ವಿಜಯೋತ್ಸವದಲ್ಲಿ ಪಾಕ್ ಪರ ಘೋಷಣೆ ಕೂಗಲಾಗಿದೆ. ಈ ಬಗ್ಗೆ ಪೊಲೀಸ್ ಅಧಿಕಾರಿಯೇ ದೂರು ನೀಡಿದ್ದಾರೆ. ಶಿರಸಿಯಲ್ಲೂ ಹಸಿರು ಬಾವುಟ ಹಾರಾಡಿದೆ” ಎಂದು ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts