ಶಿವಮೊಗ್ಗ: 2023-24ನೇ ಸಾಲಿನ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟಗೊಂಡಿದ್ದು, ಶಿವಮೊಗ್ಗ ಜಿಲ್ಲೆಯು ಅಭೂತಪೂರ್ವ ಸಾಧನೆ ಮಾಡಿದೆ. ಕಳೆದ ವರ್ಷ ಶೇ.84.04 ಫಲಿತಾಂಶದೊಂದಿಗೆ 29ನೇ ಸ್ಥಾನದಲ್ಲಿದ್ದ ಜಿಲ್ಲೆಯು ಈ ಬಾರಿ ಶೇ.88.67 ಫಲಿತಾಂಶದೊಂದಿಗೆ ಮೂರನೇ ಸ್ಥಾನಕ್ಕೇರಿದೆ.
ಪರೀಕ್ಷೆ ಎದುರಿಸಿದ 23,028 ವಿದ್ಯಾರ್ಥಿಗಳ ಪೈಕಿ 20,420 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 2022ರಲ್ಲಿ ಶಿವಮೊಗ್ಗ 26ನೇ ಸ್ಥಾನ ಪಡೆದಿತ್ತು. 2021ರಲ್ಲಿ ಕರೊನಾ ಕಾರಣದಿಂದ ಎಸ್‌ಎಸ್‌ಎಲ್‌ಸಿಯ ಎಲ್ಲ ವಿದ್ಯಾರ್ಥಿಗಳನ್ನೂ ಉತ್ತೀರ್ಣ ಮಾಡಲಾಗಿತ್ತು. 2020ರಲ್ಲಿ ಜಿಲ್ಲೆ 18ನೇ ಸ್ಥಾನದಲ್ಲಿತ್ತು.
2019ರ ಎಸ್‌ಎಎಲ್‌ಸಿ ಫಲಿತಾಂಶದಲ್ಲಿ ಶಿವಮೊಗ್ಗ ಜಿಲ್ಲೆ ಶೇ.79.13 ಫಲಿತಾಂಶದೊಂದಿಗೆ ರಾಜ್ಯದಲ್ಲಿ 21ನೇ ಸ್ಥಾನದಲ್ಲಿತ್ತು. ಅದಕ್ಕೂ ಮುನ್ನ 2018ರಲ್ಲಿ 20 ಹಾಗೂ 2017ರಲ್ಲಿ 15ನೇ ಸ್ಥಾನ ಪಡೆದಿತ್ತು. ಈಗ ಹಳೆಯ ದಾಖಲೆಗಳೆಲ್ಲ ನುಚ್ಚು ನೂರಾಗಿದ್ದು, ಮೂರನೇ ಸ್ಥಾನ್ಕಕೇರುವ ಮೂಲಕ ಜಿಲ್ಲೆ ರಾಜ್ಯದ ಗಮನಸೆಳೆದಿದೆ.