More

    ಮುಖ್ಯಮಂತ್ರಿ ಗಾದಿ ಕಲಹ ಇಂದು ಅಂತ್ಯ? ದೆಹಲಿಯಲ್ಲಿ ನಡೆಯಲಿದೆ ಬಹುಮುಖ್ಯ ಸಭೆ

    ಬೆಂಗಳೂರು: ಸಿಎಂ ಸ್ಥಾನದ ಸರ್ಕಸ್​ಗೆ ಇಂದು ಕ್ಲೈಮಾಕ್ಸ್ ಸಿಗಲಿದೆ ಎನ್ನಲಾಗುತ್ತಿದ್ದು ಇದೀಗ ಮತ್ತೊಮ್ಮೆ ಡಿಕೆಶಿ ದೆಹಲಿ ಕಡೆಗೆ ಮುಖ ಮಾಡಲಿದ್ದಾರೆ. 
     
    ನಿನ್ನೆ ಮಧ್ಯಾಹ್ನ ಡಿಕೆಶಿ, ಸಿದ್ದರಾಮಯ್ಯ ದೆಹಲಿಗೆ ತೆರಳಿದ್ದರು. AICC ವೀಕ್ಷಕರು ಹಾಗೂ ಡಿಕೆಶಿ ನಡುವಿನ ಚರ್ಚೆ ಮಹತ್ವ ಪಡೆದಿತ್ತು. ಇನ್ನು ಸಿಎಂ ಸ್ಥಾನಕ್ಕಾಗಿ ಪಟ್ಟು ಹಿಡಿದಿರುವ ಡಿಕೆಶಿ, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಜತೆಗೂ ಈಗಾಗಲೇ ಮಾತುಕತೆ ನಡೆಸಿದ್ದಾರೆ.
     
    ಇಂದು ಬೆಳಗ್ಗೆ 9.50ಕ್ಕೆ ದೆಹಲಿಗೆ ತೆರಳಲಿರುವ ಡಿಕೆಶಿ, ಸಿಎಂ ಆಯ್ಕೆಗಾಗಿ ನಡೆಯಲಿರುವ ಸಮಾಲೋಚನೆಯಲ್ಲಿ ಭಾಗಿ ಆಗಲಿದ್ದಾರೆ. ಡಿಕೆಶಿ ಜೊತೆಗೂಡಿ ಸಿಎಂ ಸ್ಥಾನದ ಬಗ್ಗೆ ಸಮಾಲೋಚನೆ
     
    ಸದ್ಯ ಸಿದ್ದರಾಮಯ್ಯ ಬೆನ್ನಿಗೆ ರಾಹುಲ್ ಗಾಂಧಿ ನಿಂತಿದ್ದು ಡಿಕೆಶಿ ಬಗ್ಗೆ ಸೋನಿಯಾ ಗಾಂಧಿ ಸಾಫ್ಟ್​ ಕಾರ್ನರ್​ ಹೊಂದಿದ್ದಾರೆ ಎನ್ನಲಾಗುತ್ತಿದೆ. ಇಂದು ಸಭೆಯಲ್ಲಿ ಎಲ್ಲರ ಅಭಿಪ್ರಾಯ ಪಡೆದು ಇಂದು ಸಿಎಂ ಸ್ಥಾನ ಯಾರಿಗೆ ಎನ್ನುವ ವಿಚಾರ ಪ್ರಕಟ ಆಗುವ ಸಾಧ್ಯತೆ ಇದೆ.
     
    ಸೋನಿಯಾ ಗಾಂಧಿ ಅವರ ತಿರ್ಮಾನ ಏನಾಗಿರುತ್ತದೆ ಎನ್ನುವ ಕುತೂಹಲ ಎಲ್ಲರನ್ನೂ ಕಾಡುತ್ತಿದೆ ಎಂದೇ ಹೇಳಬಹುದು. ಸದ್ಯ ಸೋನಿಯಾ ಗಾಂಧಿ ಶಿಮ್ಲಾದಲ್ಲಿದ್ದು ಅಲ್ಲಿಂದ ದೆಹಲಿಗೆ ಮರಳದಿದ್ದಲ್ಲಿ ದೆಹಲಿಯಲ್ಲಿ ನಡೆಯುವ ಸಭೆ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುವ ಸಾಧ್ಯತೆ ಹೆಚ್ಚಿದೆ. ಈ ಸಭೆಯಲ್ಲಿ ಮುಂದಿನ ಸಿಎಂ ಯಾರು ನಿರ್ಧಾರವಾಗಿ ದೆಹಲಿಯಲ್ಲೇ ಪತ್ರಿಕಾಗೋಷ್ಠಿ ನಡೆಸಿ ಸಿಎಂ ಸ್ಥಾನ ಪ್ರಕಟ ಮಾಡುವ ಸಾಧ್ಯತೆ ಇದೆ. ಹೀಗಾಗಿ ಸಿಎಂ ಸ್ಥಾನದ ಹಗ್ಗಜಗ್ಗಾಟಕ್ಕೆ ಇಂದು ತೆರೆ ಬೀಳುವ ಸಾಧ್ಯತೆ ಇದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts