ಅಮಾಯಕ ಯುವತಿಯರಿಗೆ ಹಣದ ಆಮಿಷವೊಡ್ಡಿ ಬೆತ್ತಲೆ ಪೂಜೆ ಮಾಡಿದ್ದಲ್ಲದೆ ಅಸಭ್ಯ ವರ್ತನೆ: 12 ಮಂದಿ ಬಂಧನ

AP Gang
Published on

ಗುಂಟೂರು: ಹಣದ ಆಮಿಷವೊಡ್ಡಿ ಅಮಾಯಕ ಹೆಣ್ಣು ಮಕ್ಕಳ ಬೆತ್ತಲೆ ಪೂಜೆ ಮಾಡಿದ್ದಲ್ಲದೆ, ಅವರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ ಖತರ್ನಾಕ್​ ಗ್ಯಾಂಗ್ ಅನ್ನು ಆಂಧ್ರ ಪ್ರದೇಶದ ಗುಂಟೂರು ಪೊಲೀಸರು ಬಂಧಿಸಿದ್ದಾರೆ.

ಪೊಲೀಸ್​ ಮೂಲಗಳ ಪ್ರಕಾರ ಆರ್ಥಿಕವಾಗಿ ಸಂಕಷ್ಟಕ್ಕೀಡಾದ ಹೆಣ್ಣು ಮಕ್ಕಳನ್ನೇ ದುರುಳರು ಗುರಿಯಾಗಿರಿಸಿಕೊಂಡಿದ್ದರು. ಗುಂಟೂರು ಜಿಲ್ಲೆಯ ತಾತಿಕೊಂಡ ಮಂಡಲದ ಪೊನ್ನೆಕಾಲು ಗ್ರಾಮದ ಪೂಜಾರಿ ನಾಗೇಶ್ವರ್​ ರಾವ್​ ಎಂಬಾತ ಬೆತ್ತಲೆ ಪೂಜೆ ನಡೆಸುತ್ತಿದ್ದರು. ಬಿಸಿನೆಸ್​ನಲ್ಲಿ ನಷ್ಟ ಅನುಭವಿಸಿದ್ದ ಚಿಲಕಲುರಿಪೇಟೆ ಮೂಲದ ಅರವಿಂದ ಹೆಸರಿನ ಮಹಿಳೆಯನ್ನು ಸಾಮಾಜಿಕ ಜಾಲತಾಣ ಮೂಲಕ ನಾಗೇಶ್ವರ್​ ರಾವ್​ ಪರಿಯಿಸಿಕೊಂಡಿದ್ದ.

ಬೆತ್ತಲೆಯಾಗಿ ಕುಳಿತರೆ 1 ಲಕ್ಷ ರೂ.

ಬಿಸಿನೆಸ್​ ನಷ್ಟದಿಂದ ಆದ ನೋವನ್ನು ನಾಗೇಶ್ವರ್​ ಬಳಿ ಅರವಿಂದ ಹೇಳಿಕೊಂಡಿದ್ದಳು. ನಿಧಿಯನ್ನು ಪತ್ತೆಹಚ್ಚುವ ಮೂಲಕ ಸುಲಭವಾಗಿ ಹಣ ಮಾಡಬಹುದು ಎಂದು ನಾಗೇಶ್ವರ್​ ಹೇಳಿದ್ದ. ಆದರೆ, ಅಕ್ಕದೆ, ಯುವತಿಯರ ಬೆತ್ತಲೆ ಪೂಜೆ ಮಾಡಬೇಕಾಗುತ್ತದೆ ಎಂದಿದ್ದ. ಬಳಿಕ ನಾಗೇಶ್ವರ್​ ಮತ್ತು ಅರವಿಂದ, ನಾಗೇಂದ್ರ ಹೆಸರಿನ ವ್ಯಕ್ತಿಯನ್ನು ಸಂಪರ್ಕಿಸಿ, ಪೂಜೆಯಲ್ಲಿ ಬೆತ್ತಲೆಯಾಗಿ ಕುಳಿತರೆ ಒಂದು ಲಕ್ಷ ರೂಪಾಯಿ ನೀಡುವುದಾಗಿ ಆಮಿಷವೊಡ್ಡಿದ್ದರು.

ಲೈಂಗಿಕ ದೌರ್ಜನ್ಯ

ಇದಾದ ಬಳಿಕ ನಾಗೇಂದ್ರ ತನ್ನ ಸ್ನೇಹಿತ ಸುರೇಶ್​ ಜತೆ ಸೇರಿಕೊಂಡು ನಂದ್ಯಾಲ ಜಿಲ್ಲೆಯ ಇಬ್ಬರು ಬಡ ಯುವತಿಯರನ್ನು ಸಂಪರ್ಕಿಸಿ, ಹಣದ ಆಮಿಷವೊಡ್ಡಿ ಬೆತ್ತಲೆ ಪೂಜೆಗೆ ಒಪ್ಪಿಸಿದ್ದರು. ಇದಾದ ಬಳಿಕ ನಾಗೇಶ್ವರ್​ ನೇತೃತ್ವದಲ್ಲಿ ಬೆತ್ತಲೆ ಪೂಜೆ ನಡೆದಿತ್ತು. ಇದಾದ ಬಳಿಕ ಪೂಜಾರಿ ಮತ್ತು ಅವರ ಸಂಗಡಿಗರು ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು.

ದಿಶಾ ಆ್ಯಪ್​ ಮೂಲಕ ದೂರು

ನಂತರ ಕಾರಿನಲ್ಲಿ ಯುವತಿಯರನ್ನು ಕರೆದುಕೊಂಡು ಗುಂಟೂರು ಕಡೆಗೆ ಆರೋಪಿಗಳು ತೆರಳಿದರು. ಗೋರಂಟ್ಲಾ ಬಳಿ ಕಾರು ಬಂದಾಗ ಸಂತ್ರಸ್ತ ಯುವತಿಯರು ಹೇಗೋ ತಪ್ಪಿಸಿಕೊಂಡು ದಿಶಾ ಆ್ಯಪ್​ ಮೂಲಕ ಪೊಲೀಸರಿಗೆ ದೂರು ನೀಡಿದ್ದಾರೆ. ತಕ್ಷಣ ನಲ್ಲಪಾಡು ಪೊಲೀಸರು ಸ್ಥಳಕ್ಕಾಗಮಿಸಿ ಪೂಜಾರಿ ನಾಗೇಶ್ವರ್​ ರಾವ್​ ಹಾಗೂ ಆತನ ಸಂಗಡಿಗರು ಸೇರಿದಂತೆ 12 ಮಂದಿಯನ್ನು ಬಂಧಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net