ಕಾಂಗ್ರೆಸ್​ ಪಕ್ಷ ನನಗೆ ದೇವಸ್ಥಾನ ಇದ್ದಂತೆ: ದೆಹಲಿಗೆ ತೆರಳುವ ಮುನ್ನ ಡಿ.ಕೆ. ಶಿವಕುಮಾರ್​ ಹೇಳಿಕೆ

dks
Published on

ಬೆಂಗಳೂರು: ಕಾಂಗ್ರೆಸ್​ ಪಕ್ಷವೇ ನಮಗೆ ಶಕ್ತಿ. ಕಾಂಗ್ರೆಸ್​ ಪಕ್ಷ ನನಗೆ ದೇವಸ್ಥಾನ ಇದ್ದಂತೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಅವರು ಹೇಳಿದರು.

ದೆಹಲಿಗೆ ಭೇಟಿ ನೀಡುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ, ಒಬ್ಬನೇ ಬರಬೇಕು ಅಂತ ಹೇಳಿದ್ದಾರೆ. ಹೀಗಾಗಿ ನಾನೊಬ್ಬನೆ ದೆಹಲಿಗೆ ಹೋಗುತ್ತಿದ್ದೇನೆ ಎಂದು ಹೇಳಿದರು.

ನನ್ನ ಕರ್ತವ್ಯವನ್ನು ನಾನು ಮಾಡಿದ್ದೇನೆ

ದೇವಸ್ಥಾನ ಎಲ್ಲ ಸುತ್ತಾಡಿದೆ. ನನ್ನ ಆರೋಗ್ಯ ಈಗ ಉತ್ತಮವಾಗಿದೆ. ಜನರು ನಮ್ಮ ನಂಬಿಕೆಯಲ್ಲಿ ಇದ್ದಾರೆ. ಆ ನಂಬಿಕೆ ಉಳಿಸುವ ಕೆಲಸ ಮಾಡುತ್ತೇನೆ. ದೇಶದ ಸಂವಿಧಾನ ಉಳಿಸಿಕೊಳ್ಳುತ್ತೇವೆ. ಎಲ್ಲರ ಆಶೀರ್ವಾದ ನಮ್ಮ ಮೇಲೆ ಇರಲಿ. ನನ್ನ ಕರ್ತವ್ಯವನ್ನು ನಾನು ಮಾಡಿದ್ದೇನೆ ಎಂದು ಡಿಕೆಶಿ ತಿಳಿಸಿದರು.

ಶ್ರಮಪಟ್ಟಿದ್ದಕ್ಕೆ ಕೂಲಿ ಕೇಳ್ತಿದ್ದೇವೆ

ಡಿಕೆಶಿ ಜತೆ ಶಾಸಕ ಹ್ಯಾರಿಸ್ ಹಾಗೂ ಮಾಗಡಿ ಶಾಸಕ ಬಾಲಕೃಷ್ಣ ಸಹ ದೆಹಲಿಗೆ ಪ್ರಯಾಣ ಬೆಳೆಸಿದರು. ಇದೇ ಸಂದರ್ಭದಲ್ಲಿ ಏರ್ಪೋರ್ಟ್​ನಲ್ಲಿ ಮಾತನಾಡಿದ ಬಾಲಕೃಷ್ಣ, ನಾನು ಇಂದು ನಮ್ಮ ನಾಯಕರ ಜೊತೆ ದೆಹಲಿಗೆ ತೆರಳುತ್ತಿದ್ದೇನೆ. ರಾಜ್ಯದಲ್ಲಿ ಶ್ರಮಪಟ್ಟು ಪಾರ್ಟಿಯನ್ನು ಅಧಿಕಾರಕ್ಕೆ ತಂದಿದ್ದಾರೆ. ಶ್ರಮಪಟ್ಟಿದ್ದಕ್ಕೆ ಕೂಲಿಯನ್ನು ಕೇಳ್ತಿದ್ದೇವೆ. ನಾನು, ಡಿಕೆಶಿ ಒಂದೇ ಜಿಲ್ಲೆಯವರು ಹೀಗಾಗಿ ಅವರ ಪರ ಒಲವಿದೆ. ನಾನು ಸಹ ದೆಹಲಿಗೆ ಹೋಗ್ತಿದ್ದೇನೆ. ಹೈಕಮಾಂಡ್ ಯಾವ ತೀರ್ಮಾನ ಕೈಗೊಳ್ತಾರೆ ನೋಡೋಣ ಎಂದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net