More

    ಸಿದ್ದರಾಮಯ್ಯ, ಡಿಕೆಶಿ ಜತೆಗೆ ಸಿಎಂ ರೇಸ್​ನಲ್ಲಿ ಮತ್ತೊಂದು ಹೆಸರು: 25ಕ್ಕೂ ಹೆಚ್ಚು ಸ್ವಾಮೀಜಿಗಳಿಂದ ಒತ್ತಾಯ

    ಬೀದರ್: ಮುಖ್ಯಮಂತ್ರಿ ಕುರ್ಚಿಗಾಗಿ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್​ ಮಧ್ಯೆ ಸಂಘರ್ಷ ಮುಂದುವರಿದಿದ್ದು, ಇದರ ನಡುವೆ ಸಿಎಂ ರೇಸ್​ನಲ್ಲಿ ಇನ್ನೊಂದು ಹೆಸರು ಕೇಳಿಬರುತ್ತಿದೆ.

    25ಕ್ಕೂ ಹೆಚ್ಚು ಸ್ವಾಮೀಜಿಗಳ ಒತ್ತಾಯ

    ರಾಜ್ಯದಲ್ಲಿ 39 ಜನ ಲಿಂಗಾಯತ ಶಾಸಕರು ಆಯ್ಕೆಯಾಗಿದ್ದು, ಲಿಂಗಾಯತರಿಗೆ ಸಿಎಂ ಸ್ಥಾನ ನೀಡಬೇಕೆಂದು ಕಲ್ಯಾಣ ಕರ್ನಾಟಕ ಭಾಗದ ಮಠಾಧೀಶರು ಒತ್ತಾಯ ಮಾಡಿದ್ದಾರೆ. ಶ್ರೀ ರಾಜೇಶ್ವರ ಶಿವಾಚಾರ್ಯ ಹಾಗೂ ಭಾಲ್ಕಿ ಹಿರೇಮಠದ ಗುರುಬಸವಾ ಪಟ್ಟದ್ದೆವರ ನೇತೃತ್ವದಲ್ಲಿ 25ಕ್ಕೂ ಹೆಚ್ಚು ಸ್ವಾಮೀಜಿಗಳು ಒತ್ತಾಯಿಸಿದ್ದಾರೆ.

    ಈಶ್ವರ ಖಂಡ್ರೆಗೆ ಸಿಎಂ ಸ್ಥಾನ ಕೊಡಿ

    ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಈಶ್ವರ ಖಂಡ್ರೆ ಅವರಿಗೆ ಸಿಎಂ ಸ್ಥಾನ ನೀಡಲು ಸ್ವಾಮೀಜಿಗಳು ಬೇಡಿಕೆ ಇಟ್ಟಿದ್ದಾರೆ. ವೀರೇಂದ್ರ ಪಾಟೀಲ್ ಬಳಿಕ ಈ ಭಾಗಕ್ಕೆ ಮುಖ್ಯಮಂತ್ರಿ ಸ್ಥಾನ ಸಿಕ್ಕಿಲ್ಲ, ಹೀಗಾಗಿ ಈ ಬಾರಿ ಕಾಂಗ್ರೆಸ್ ಪಕ್ಷದ ಹೈಕಮಾಂಡ್​ ಈ ಭಾಗಕ್ಕೆ ಸಿಎಂ ಸ್ಥಾನ ನೀಡಬೇಕು ಎಂದು ಕೇಳುತ್ತಿದ್ದಾರೆ.

    ಇದನ್ನೂ ಓದಿ: ಪತ್ನಿಯನ್ನು ಕಾಪಾಡಲು ಬಂದ ಪೊಲೀಸ್​ ಅಧಿಕಾರಿಯ ಮೂಗು ಮುರಿದು ಎಸ್ಕೇಪ್​ ಆದ ಗಂಡ!

    ಸ್ವಾಮೀಜಿಗಳ ನಿಯೋಗದಿಂದ ಭೇಟಿ

    ಕಲ್ಯಾಣ ಕರ್ನಾಟಕ ಭಾಗ ಅಭಿವೃದ್ಧಿಯಾಗಬೇಕಾದರೆ ಈ ಭಾಗದವರು ಮುಖ್ಯಮಂತ್ರಿ ಆದಾಗ ಮಾತ್ರ ಅದು ಸಾಧ್ಯ. ಸಿಎಂ ಸ್ಥಾನ ನೀಡದಿದ್ದರೆ ಉಗ್ರ ಹೋರಾಟ ಅನಿವಾರ್ಯವಾಗಿದೆ. ಸ್ವಾಮೀಜಿಗಳ ನಿಯೋಗದೊಂದಿಗೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ಒತ್ತಾಯಿಸುತ್ತೆವೆ ಎಂದು ಮಠಾಧೀಶರು ಹೇಳಿದ್ದಾರೆ. (ದಿಗ್ವಿಜಯ ನ್ಯೂಸ್​)

    ಆಘಾತದಿಂದ ಹೊರ ಬಾರದ ಪರಾಜಿತರು: ಹಂಗಾಮಿ ಸಿಎಂ ಬೊಮ್ಮಾಯಿ ಬಳಿ ಬೇಸರ ನಿವೇದನೆ

    ಅಧಿಕಾರ ಹಸ್ತಾಂತರದ ಖಾತರಿ ಏನು?: ಡಿಕೆಶಿ ಬಣದ ಆತಂಕ; ಛತ್ತೀಸ್​ಗಢ, ರಾಜಸ್ಥಾನದ ನಿದರ್ಶನ

    ಅಮ್ಮನನ್ನು ಕಳೆದುಕೊಳ್ಳುವ ನೋವು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts