

ಆಂಧ್ರಪ್ರದೇಶ: ಟಾಲಿವುಡ್ ಅಂಗಳದಲ್ಲಿ ಕೇವಲ ಟ್ರೇಲರ್ ಮೂಲಕವೇ ಭಾರೀ ಟೀಕೆಗೆ ಗುರಿಯಾಗಿದ್ದ ಟಿಲ್ಲು ಸ್ಕ್ವೇರ್ ಸಿನಿಮಾ, ಇಂದು ಬಹುತೇಕ ಚಿತ್ರಮಂದಿರಗಳಲ್ಲಿ ತೆರೆಕಾಣುವ ಮೂಲಕ ಸಿನಿಪ್ರೇಕ್ಷಕರಿಂದ ವ್ಯಾಪಕ ಅಭಿಪ್ರಾಯಗಳನ್ನು ಗಿಟ್ಟಿಸಿಕೊಂಡಿದೆ. ಮಲಿಕ್ ರಾಮ್ ನಿರ್ದೇಶನದ ನಟ ಸಿದ್ದು ಜೊನ್ನಲಗಡ ಮತ್ತು ನಟಿ ಅನುಪಮಾ ಪರಮೇಶ್ವರನ್ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಕ್ಕಿದೆ.
ಇದನ್ನೂ ಓದಿ: ಕಾಂಗ್ರೆಸ್‌ನಿಂದ ‘ಗೋ ಬ್ಯಾಕ್’ ಪಟ್ಟಿ ಬಿಡುಗಡೆ
ಚಿತ್ರ ಬಿಡುಗಡೆಗೂ ಮುನ್ನವೇ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಸಿನಿಮಾದ ಕೆಲವು ದೃಶ್ಯಗಳಲ್ಲಿ ನಟನೊಂದಿಗೆ ಲಿಪ್ಲಾಕ್ ಸೀನ್ ಮಾಡಿರುವ ಅನುಪಮಾ ನಡೆಗೆ ಅನೇಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಆಕೆಯ ಪಾತ್ರದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಟೀಕೆ ಮಾಡಿದ್ದರು. ಇದು ನಟಿಗೆ ಬಹಳ ಬೇಸರ ತಂದಿತ್ತು. ಈ ಕುರಿತು ಎಲ್ಲಿಯೂ ಪ್ರತಿಕ್ರಿಯಿಸದ ನಟಿ, ಮೌನಕ್ಕೆ ಜಾರಿದ್ದರು. ಆದರೆ, ಇದೀಗ ಚಿತ್ರದ ಪ್ರೀ-ರಿಲೀಸ್ನಲ್ಲಿ ಓಪನ್ ಆಗಿ ಮಾತನಾಡಿದ್ದು, ತನ್ನ ಪಾತ್ರದ ಬಗ್ಗೆ ಮೆಚ್ಚುಗೆ ಸೂಚಿಸಿದವರ ಬಗ್ಗೆ ಖುಷಿಯಿಂದ ಹೇಳಿಕೊಂಡಿದ್ದಾರೆ.
"ಮೊದಲು ಪ್ರೇಕ್ಷಕರಿಗೆ ಧನ್ಯವಾದ ತಿಳಿಸಲು ಬಯಸುತ್ತೀನಿ. ನನಗೆ ಕೆಲವು ಸಿಹಿ ಸಂದೇಶಗಳು ಬರುತ್ತಿವೆ ಮತ್ತು ಪ್ರೇಕ್ಷಕರು ನನ್ನ ಹೊಸ ಅವತಾರವನ್ನು ಒಪ್ಪುತ್ತಿದ್ದಾರೆ. ನಾನು ಸ್ವೀಕರಿಸಿದ ಅತ್ಯುತ್ತಮ ಅಭಿನಂದನೆಯ ಬಗ್ಗೆ ಹೇಳುವುದಾದರೆ, ಪಾರ್ಟ್ ಒಂದರಲ್ಲಿ ರಾಧಿಕಾ ಪಾತ್ರದಲ್ಲಿ ನಟಿಸಿದ್ದ ನೇಹಾ ಶೆಟ್ಟಿ ನನ್ನ ಪಾತ್ರವನ್ನು ಮೆಚ್ಚಿದ್ದಾರೆ" ಎಂದು ಹೇಳಿದರು.
ಇದನ್ನೂ ಓದಿ: ನೀರಿನ ಮಿತ ಬಳಕೆಯ ಅರಿವು ಅಗತ್ಯ
"ಖುದ್ದಾಗಿ ರಾಧಿಕಾ ಅವರೇ ಕರೆ ಮಾಡಿ ನನ್ನ ಅಭಿನಯವನ್ನು ಶ್ಲಾಘಿಸುತ್ತಿರುವುದು ನನ್ನ ಪಾಲಿನ ಅತ್ಯುತ್ತಮ ಪ್ರಶಂಸೆ" ಎಂದಿದ್ದಾರೆ ಅನುಪಮಾ. ಸದ್ಯ ಸಿನಿಮಾ ಮೊದಲ ದಿನವೇ ನಿರೀಕ್ಷೆಗೆ ತಕ್ಕಂತೆ ಉತ್ತಮ ಓಪನಿಂಗ್ ಪಡೆದಿದ್ದು, ಮುಂದಿನ ದಿನಗಳಲ್ಲಿ ಬಾಕ್ಸ್ ಆಫೀಸ್ನಲ್ಲಿ ಹೇಗೆ ಕಮಾಲ್ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ,(ಏಜೆನ್ಸೀಸ್).