More

    ಅಂದು RCB 263… ಇಂದು SRH 277! ಎರಡು ದಾಖಲೆಯ ಸಮಯದಲ್ಲೂ ತಂಡದಲ್ಲಿದ್ದ ಏಕೈಕ ಆಟಗಾರ ಇವರು

    ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 2024ರ ಆವೃತ್ತಿ ಪ್ರಾರಂಭವಾದ ಮೊದಲ ಪಂದ್ಯದಿಂದ ನಿನ್ನೆ (ಮಾ.27) ನಡೆದ ಸನ್​ರೈಸರ್ಸ್​ ಹೈದರಾಬಾದ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವಿನ ಪಂದ್ಯದವರೆಗೆ ಎಲ್ಲಾ ಮ್ಯಾಚ್​ಗಳೂ ಸಿಕ್ಕಾಪಟ್ಟೆ ರೋಚಕವಾಗಿ ಮೂಡಿಬರುತ್ತಿವೆ. ಸ್ಟೇಡಿಯಂನಲ್ಲಿ ಪಂದ್ಯ ಶುರುವಾಗುವ ಒಂದೆರೆಡು ಗಂಟೆಯ ಮುನ್ನವೇ ವೀಕ್ಷಣೆಗೆ ಕಾದು ಕೂರುವ ಕ್ರಿಕೆಟ್ ಅಭಿಮಾನಿಗಳು ಬಹಳ ಕುತೂಹಲದಿಂದ ತಮ್ಮ ತಂಡದ ಗೆಲುವಿಗಾಗಿ ಕಾಯುತ್ತಿರುತ್ತಾರೆ.

    ಇದನ್ನೂ ಓದಿ: ಟಾಟಾ, ಅದಾನಿ, ಅಂಬಾನಿ ಸಮೂಹವಲ್ಲ; ದಲಾಲ್ ಸ್ಟ್ರೀಟ್‌ನಲ್ಲಿ ಹೂಡಿಕೆದಾರರಿಗೆ ಈ ಗ್ರೂಪ್​ನ ಕಂಪನಿಗಳು ಅಚ್ಚುಮೆಚ್ಚು…

    ಅದರಲ್ಲೂ ವಿಶೇಷವಾಗಿ ನಿನ್ನೆ ಹೈದರಾಬಾದ್​ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳ ನಡುವೆ ನಡೆದ ಪಂದ್ಯ ಮಾತ್ರ ನೋಡುಗರ ಹುಬ್ಬೇರುವಂತೆ ಮಾಡಿತು. ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಬೃಹತ್ ಮೊತ್ತ ಕಲೆಹಾಕುವಲ್ಲಿ ಯಶಸ್ವಿಯಾಯಿತು. ಮೊದಲು ಬ್ಯಾಟಿಂಗ್​ಗೆ ಇಳಿದ ಸನ್ ರೈಸರ್ಸ್ ಬ್ಯಾಟ್ಸ್​​ಮನ್​ಗಳು ಆರಂಭದಿಂದಲೇ ಸಿಕ್ಸರ್‌, ಫೋರ್ಸ್​ಗಳ ಸುರಿಮಳೆಗೈದರು. ಸ್ಪೋಟಕ ಬ್ಯಾಟ್​ ಮಾಡಿದ ಟ್ರಾವಿಸ್​ ಹೆಡ್ 62, ಅಭಿಷೇಕ್ 63, ಕ್ಲಾಸೆನ್ ಅಜೇಯ 80 ರನ್ ಗಳಿಸಿ ಬೌಂಡರಿಗಳನ್ನು ಸಿಡಿಸಿದರು.

    ಇದರೊಂದಿಗೆ 20 ಓವರ್​ಗಳಲ್ಲಿ ಸನ್ ರೈಸರ್ಸ್ ತಂಡ ಬೃಹತ್​ 277 ರನ್​ ಮೂಲಕ 2013ರ ಐಪಿಎಲ್​ನಲ್ಲಿ ಆರ್​ಸಿಬಿ ನಿರ್ಮಿಸಿದ್ದ 263 ಗರಿಷ್ಠ ರನ್​ ದಾಖಲೆಯನ್ನು ಪುಡಿ ಪುಡಿ ಮಾಡುವಲ್ಲಿ ಯಶಸ್ವಿಯಾಯಿತು. ಇದೀಗ ಹೊಸ ರೆಕಾರ್ಡ್​ ಬರೆದಿರುವ ಎಸ್​ಆರ್​ಎಚ್​ ಕ್ರಿಕೆಟ್​ ಅಭಿಮಾನಿಗಳ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ. ಇನ್ನು ವಿಶೇಷ ಅಂದ್ರೆ ಅಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಾಡಿದ ದಾಖಲೆಯ ಸಮಯದಲ್ಲೂ ಈ ಆಟಗಾರ ತಂಡದಲ್ಲಿದ್ದರು. ನಿನ್ನೆ ನಡೆದ ರೆಕಾರ್ಡ್​ ಬ್ರೇಕಿಂಗ್ ಪಂದ್ಯದಲ್ಲಿಯೂ ಇವರು ಇದ್ದರು.

    ಇದನ್ನೂ ಓದಿ: ಹಣಕಾಸು ಸಚಿವರ ಬಳಿಯೇ ದುಡ್ಡಿಲ್ಲವಂತೆ! ಬಿಜೆಪಿ ಆಫರ್​ ತಿರಸ್ಕರಿಸಿದ ನಿರ್ಮಲಾ ಸೀತಾರಾಮನ್​

    ಒಟ್ಟಾರೆ ಅಂದು ಮತ್ತು ಇಂದು ಎರಡು ಸಮಯದಲ್ಲಿಯೂ ಈ ಆಟಗಾರ ತಂಡದಲ್ಲಿದ್ದರು ಎಂಬುದೇ ಮತ್ತಷ್ಟು ವಿಶೇಷ! ಅಂದು ಚಿನ್ನಸ್ವಾಮಿಯಲ್ಲಿ ನಡೆದ ಆರ್​ಸಿಬಿ ಮತ್ತು ಪುಣೆ ವಾರಿಯರ್ಸ್​ ನಡುವಿನ ಪಂದ್ಯದಲ್ಲಿ ಬೆಂಗಳೂರು ಪಡೆ 263 ರನ್​ ದಾಖಲಿಸುವ ಮೂಲಕ ಐಪಿಎಲ್ ಇತಿಹಾಸದಲ್ಲೇ ಬೃಹತ್​ ರನ್ ಕಲೆಹಾಕಿದ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಈ ಪಂದ್ಯದಲ್ಲಿ ಆಡಿದ್ದ ಆಟಗಾರ ನಿನ್ನೆ ಸನ್​ರೈಸರ್ಸ್​ ದಾಖಲೆ ನಿರ್ಮಿಸುವ ಸಮಯದಲ್ಲಿಯೂ ಇದ್ದರು. ಅದು ಬೇರಾರೂ ಅಲ್ಲ ವೇಗಿ ಜಯದೇವ ಉನಾದ್ಕಟ್​!

    2013ರಲ್ಲಿ ಆರ್​ಸಿಬಿ 263 ರನ್​ ದಾಖಲಿಸುವಾಗಲೂ ಜಯದೇವ್​ ಉನಾದ್ಕಟ್​ ತಂಡದ ಪ್ಲೇಯಿಂಗ್ ಇಲೆವನ್​ನ ಭಾಗವಾಗಿದ್ದರು. ನಿನ್ನೆ ಹೈದಾರಾಬಾದ್​ನಲ್ಲಿ ನಡೆದ ಪಂದ್ಯದಲ್ಲಿ ಎಸ್​ಆರ್​ಎಚ್​ ತಂಡದ ಪರವಾಗಿಯೂ ಆಡಿದರು. ಈ ಮೂಲಕ ದಾಖಲೆ ನಿರ್ಮಿಸಿದ ಹಾಗೂ ದಾಖಲೆ ಬ್ರೇಕ್ ಮಾಡಿದ ಎರಡು ತಂಡಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಇದೀಗ ಉನಾದ್ಕಟ್​ ಎಲ್ಲರ ಗಮನಸೆಳೆದಿದ್ದಾರೆ.

    ‘ಇದೆಲ್ಲವೂ ನನ್ನ ಕುಟುಂಬದ ಮೇಲೆ ಪರಿಣಾಮ ಬೀರಿದೆ’; ಕಡೆಗೂ ಮೌನ ಮುರಿದ ಚಹಲ್ ಪತ್ನಿ!

    ಶ್ರೀಲೀಲಾ ಜತೆ ನಟಿಸಲು ಸ್ಟಾರ್​ ನಟರಿಗೆ ಚಿಂತೆ! ಇದು ಮುಂದುವರಿದ್ರೆ ‘ಕಿಸ್’​ ಬೆಡಗಿಗೆ ಸಂಕಷ್ಟ

    ಬಾಳೆಹಣ್ಣಿನ ವಿಷಯದಲ್ಲಿ ಈ ತಪ್ಪನ್ನು ಮಾಡಲೇಬೇಡಿ! ಇಲ್ಲಿದೆ ಉಪಯುಕ್ತ ಮಾಹಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts