ಶ್ರೀಲೀಲಾ ಜತೆ ನಟಿಸಲು ಸ್ಟಾರ್​ ನಟರಿಗೆ ಚಿಂತೆ! ಇದು ಮುಂದುವರಿದ್ರೆ 'ಕಿಸ್'​ ಬೆಡಗಿಗೆ ಸಂಕಷ್ಟ

WhatsApp-Image-2024-03-19-at-8.41.49-AM
Published on

ಹೈದರಾಬಾದ್​: ಕನ್ನಡದಲ್ಲಿ ಕಿಸ್​ ಸಿನಿಮಾ ಮೂಲಕ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟ ಚೆಂದುಳ್ಳಿ ಚೆಲುವೆ, ಬಹುಮುಖ ಪ್ರತಿಭೆ ಶ್ರೀಲೀಲಾ ಅಲ್ಪಾವಧಿಯಲ್ಲಿ ಕನ್ನಡ ಚಿತ್ರರಂಗದಿಂದ ಟಾಲಿವುಡ್​ಗೆ ಜಿಗಿದು ಇಂದು ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಮೊದಲ ಸಿನಿಮಾಗಳಲ್ಲೇ ಸ್ಟಾರ್​ ನಟರೊಂದಿಗೆ ತೆರೆ ಹಂಚಿಕೊಂಡ ಶ್ರೀಲೀಲಾ ತದನಂತರ ಬ್ಯಾಕ್ ಟು ಬ್ಯಾಕ್​ ಸೂಪರ್​ಸ್ಟಾರ್​ಗಳ ಜತೆಗೆ ಅಭಿನಯಿಸಿದರು.

ಕೆಲವೇ ಕೆಲವು ನಟಿಮಣಿಯರು ತಮ್ಮ ಮೊದಲ ಸಿನಿಮಾದಲ್ಲಿಯೇ ಎಲ್ಲರ ಗಮನ ಸೆಳೆದುಬಿಡುತ್ತಾರೆ. ಸಿನಿಮಾ ಚೆನ್ನಾಗಿಲ್ಲ ಅಂದ್ರು ನಾಯಕಿಯರು ಮಾತ್ರ ಮೊದಲ ಚಿತ್ರದ ಬಳಿಕ ಸಾಲು ಸಾಲು ಸಿನಿಮಾ ಅವಕಾಶಗಳನ್ನು ಪಡೆದುಕೊಳ್ಳುತ್ತಾರೆ. ಅಲ್ಲದೆ, ಸ್ಟಾರ್​ ನಟರೊಂದಿಗೆ ತೆರೆ ಹಂಚಿಕೊಳ್ಳುವ ಮೂಲಕ ಸ್ಟಾರ್​ ನಟಿಯರ ಲಿಸ್ಟ್​ಗೆ ಸೇರ್ಪಡೆಗೊಳ್ಳುತ್ತಾರೆ. ಈ ಸಾಲಿನಲ್ಲಿ ಶ್ರೀಲೀಲಾ ಕೂಡ ಒಬ್ಬರು.

ನಿಸ್ಸಂದೇಹವಾಗಿ ತಮ್ಮ ಬ್ಯೂಟಿ ಮತ್ತು ಡ್ಯಾನ್ಸ್​​ನಿಂದಲೇ ಪ್ರೇಕ್ಷಕರನ್ನು ಮೋಡಿ ಮಾಡುವ ಶ್ರೀಲೀಲಾ ಸದ್ಯ ಟಾಲಿವುಡ್‌ನಲ್ಲಿ ಹೊಸ ಅಲೆಯನ್ನೇ ಸೃಷ್ಟಿ ಮಾಡಿದ್ದಾರೆ. ಕೇವಲ ತೆಲುಗು ನಟರ ದೊಡ್ಡ ದೊಡ್ಡ ಸಿನಿಮಾಗಳಲ್ಲಿ ಅವಕಾಶ ಗಿಟ್ಟಿಸಿಕೊಂಡ ಶ್ರೀಲೀಲಾ, ಸ್ಕ್ರಿಪ್ಟ್​​ ಆಯ್ಕೆಯಲ್ಲಿ ಅಷ್ಟು ಎಚ್ಚರ ವಹಿಸದಿದ್ದ ಕಾರಣ ಕೆಲವು ಸಿನಿಮಾಗಳು ಮಕಾಡೆ ಮಲಗಿವೆ ಎಂಬ ಮಾತು ಸಿನಿ ಅಂಗಳದಲ್ಲಿ ಕೇಳಿಬಂದಿದೆ.

ಆದರೆ, ಶ್ರೀಲೀಲಾ ನಟನೆಗಿಂತ ಅವರ ಆಕರ್ಷಕ ಹಾಗೂ ಎನರ್ಜಿಟಿಕ್​ ಡ್ಯಾನ್ಸ್​ ಸ್ಟಾರ್​ ನಟರಿಗೆ ಹೊಂದಿಸುವುದು ಕಷ್ಟವಾಗುತ್ತಿದೆ. ಕೆಲವು ನಟರು ಶ್ರೀಲೀಲಾ ವೇಗ, ಎನರ್ಜಿಗೆ ಮ್ಯಾಚ್​ ಮಾಡಲಾಗದೆ, ಅಭಿನಯಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ವರದಿಯಾಗಿದೆ. ಯಾವುದೇ ಸ್ಟೆಪ್ಸ್​ ಇರಲಿ, ಅದು ಹೇಗೆ ಇರಲಿ ಶ್ರೀಲೀಲಾ ಮಾತ್ರ ಅದನೆಲ್ಲಾ ತಕ್ಷಣವೇ ಕಲಿತು ಸೆಟ್​​ನಲ್ಲಿ ಮೈಚಳಿ ಬಿಟ್ಟು ಕುಣಿಯುತ್ತಾರೆ. ಆದ್ರೆ, ಹೀರೋಗಳಿಗೆ ಇದು ಕೊಂಚ ಕಷ್ಟವಾಗಿದ್ದು, ಅವರು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಾರೆ ಎಂದು ವರದಿ ತಿಳಿಸಿದೆ.

ಸದ್ಯ ಶ್ರೀಲೀಲಾ ತೆಲುಗು ಚಿತ್ರರಂಗದ ಸ್ಟಾರ್​ ನಟ ಪವನ್​ ಕಲ್ಯಾಣ್​ ಅಭಿನಯದ ಬಹುನಿರೀಕ್ಷಿತ ಉಸ್ತಾದ್​ ಭಗತ್​ ಸಿಂಗ್​ ಚಿತ್ರದಲ್ಲಿ ನಟಿಸುತ್ತಿದ್ದಾರೆ. (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net