More

    ಕೂದಲು ಸೊಂಪಾಗಿ, ದಟ್ಟವಾಗಿ ಬೆಳೆಯಬೇಕಾ? ಹಾಗಾದ್ರೆ ಇದನ್ನು ಟ್ರೈ ಮಾಡುವುದೇ ಬೆಸ್ಟ್​​

    ಬೆಂಗಳೂರು: ಮನುಷ್ಯನಿಗೆ ಅಂದ ಎಂದರೆ ಕೇಶರಾಶಿ! ಯಾರಿಗೆ ತಾನೇ ಕೂದಲಿನ ಬಗ್ಗೆ ಕಾಳಜಿ ಇರುವುದಿಲ್ಲ ಹೇಳಿ? ವಾರದಲ್ಲಿ ಒಂದು ಬಾರಿ ಅಥವಾ ಎರಡು ಬಾರಿ ಕೊಬ್ಬರಿ ಎಣ್ಣೆ, ಹರಳೆಣ್ಣೆಯಿಂದ ಮಸಾಜ್ ಮಾಡಿ, ಕೂದಲ ಆರೋಗ್ಯ ಕಾಪಾಡಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಕೆಲವರಿಗೆ ಕೂದಲು ಉದುರುತ್ತಿದೆ ಎಂಬ ಚಿಂತೆ ಕಾಡಿದರೆ, ಇನ್ನು ಕೆಲವರಿಗೆ ಉದ್ದನೆಯ ಕೇಶರಾಶಿ ನನಗಿಲ್ಲವೇ ಎಂಬ ಕೊರಗು ಕಾಡುತ್ತದೆ.

    ಇದನ್ನೂ ಓದಿ: ‘ದೇಶದ ಇತಿಹಾಸದಲ್ಲಿ ನಡೆದ ದೊಡ್ಡ ಹಗರಣವಿದು’; ಚುನಾವಣಾ ಬಾಂಡ್​ ಬಗ್ಗೆ ಕಪಿಲ್ ಸಿಬಲ್ ಬಿಚ್ಚುಮಾತು!

    ಡ್ಯಾಂಡ್ರಫ್​, ಬಿಳಿ ಕೂದಲು ಹೀಗೆ ನಾನಾ ಸಮಸ್ಯೆಯಿಂದ ಬಳಲುವ ಅನೇಕ ಮಂದಿ, ತಮ್ಮ ಕೂದಲಿನ ಆರೋಗ್ಯ ಕಾಪಾಡಿಕೊಳ್ಳಲು ಮಾರುಕಟ್ಟೆಯಲ್ಲಿ ಸಿಗುವ ಹೊಸ ಹೊಸ ಪ್ರಾಡೆಕ್ಟ್​ಗಳನ್ನು ಪ್ರಯೋಗಿಸಿ, ಕೂದಲನ್ನು ಹಾಳು ಮಾಡಿಕೊಳ್ಳುತ್ತಾರೆ. ಕೂದಲು ಸೊಂಪಾಗಿ, ದಟ್ಟವಾಗಿ ಬೆಳೆಯಲು ಮನೆಯಲ್ಲೇ ಸಿಗುವ ಈ ಎರಡು ಪದಾರ್ಥಗಳನ್ನು ಒಮ್ಮೆ ಬಳಸಿ ನೋಡಿ.

    ಎಲ್ಲರಿಗೂ ತಿಳಿದಿರುವಂತೆ ನೆಲ್ಲಿಕಾಯಿ (ಆಮ್ಲ) ಇದರಲ್ಲಿ ಸಾಕಷ್ಟು ಪ್ರಯೋಜನಕಾರಿ ಅಂಶಗಳು ಅಡಗಿದ್ದು, ಕೂದಲಿನ ಆರೋಗ್ಯಕ್ಕಂತೂ ಹೇಳಿ ಮಾಡಿಸಿದ ಮನೆ ಔಷಧ ಎಂದೇ ಹೇಳಬಹುದು. ಕೂದಲು ದಟ್ಟವಾಗಿ ಬೆಳೆಯಲು ಕೊಬ್ಬರಿ ಎಣ್ಣೆಗೆ ಆಮ್ಲದ ಪುಡಿಯನ್ನು ಮಿಶ್ರಿಸಿ, ಕೂದಲಿಗೆ ಒಳ್ಳೆಯ ಮಸಾಜ್ ಮಾಡಿದರೆ ಬುಡದಿಂದ ಕೂದಲು ಉದ್ದವಾಗಿ, ಸೊಂಪಾಗಿ ಬೆಳೆಯಲು ವೇಗವಾಗಿ ಸಹಾಯ ಮಾಡುತ್ತದೆ.

    ಇದನ್ನೂ ಓದಿ: ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಅಧಿಕ ಖರ್ಚು, ಮಿತ್ರರಿಂದ ಕಷ್ಟ, ಆರೋಗ್ಯದಲ್ಲಿ ವ್ಯತ್ಯಾಸ

    ವಿಶೇಷ ಸೂಚನೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

    ಬಾಯಿ ವಾಸನೆ ಹೋಗಲಾಡಿಸುತ್ತದೆ ಸೌತೆಕಾಯಿ! ಹೇಗೆ ಅಂತೀರಾ? ಇಲ್ಲಿದೆ ಉಪಯುಕ್ತ ಮಾಹಿತಿ

    ‘ಇದೆಲ್ಲವೂ ನನ್ನ ಕುಟುಂಬದ ಮೇಲೆ ಪರಿಣಾಮ ಬೀರಿದೆ’; ಕಡೆಗೂ ಮೌನ ಮುರಿದ ಚಹಲ್ ಪತ್ನಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts