More

    ಬೇಸಿಗೆಯಲ್ಲಿ ಬೇಗನೆ ಕೊಳೆಯುವ ಈರುಳ್ಳಿಯನ್ನು ಸಂಗ್ರಹಿಸುವುದು ಹೇಗೆ?

    ಬೆಂಗಳೂರು: ಈರುಳ್ಳಿ ಇಲ್ಲದೆ ಯಾವುದೇ ಅಡುಗೆ ಅಪೂರ್ಣ. ಏಕೆಂದರೆ ಈರುಳ್ಳಿ ಇಲ್ಲದೆ ನಿಮ್ಮ ಆಹಾರದಲ್ಲಿ ರುಚಿ ಇರುವುದಿಲ್ಲ. ಆದರೆ ಬೇಸಿಗೆ ಬಂದ ತಕ್ಷಣ, ಈರುಳ್ಳಿ ಬೇಗನೆ ಕೊಳೆಯಲು ಪ್ರಾರಂಭಿಸುತ್ತದೆ. ಇಂತಹ ಸಮಯದಲ್ಲಿ ನೀವು ಅವುಗಳನ್ನು ದೀರ್ಘಕಾಲದವರೆಗೆ ತಾಜಾವಾಗಿಡಲು ಬಯಸಿದರೆ, ಇಂದು ನಾವು ನಿಮಗೆ ಕೆಲವು ಸಲಹೆಗಳನ್ನು ನೀಡುತ್ತಿದ್ದೇವೆ. ಈ ಟಿಪ್ಸ್​​ ನಿಮ್ಮ ಈರುಳ್ಳಿ ಹೆಚ್ಚು ಕಾಲ ಕೆಡದಂತೆ ಉಳಿಯಲು ಸಹಾಯ ಮಾಡುತ್ತದೆ.

    ಭಾರತೀಯ ಅಡುಗೆಮನೆಯಲ್ಲಿ ಈರುಳ್ಳಿ ಅತ್ಯಂತ ಮುಖ್ಯವಾದ ತರಕಾರಿಯಾಗಿದೆ. ಆದ್ದರಿಂದ ಜನರು ಯಾವುದೇ ಅಡುಗೆ ಮಾಡಲು ಈರುಳ್ಳಿಯನ್ನು ಬಳಸುತ್ತಾರೆ. ಈರುಳ್ಳಿಯ ಪ್ರಮಾಣ ಹೆಚ್ಚಾದಷ್ಟೂ ಅಡುಗೆ ರುಚಿಯಾಗಿರುತ್ತದೆ. ಕೆಲವರು ಇದನ್ನು ಹಸಿಯಾಗಿಯೂ ತಿನ್ನುತ್ತಾರೆ. ಹಸಿ ಈರುಳ್ಳಿ ಸೇವನೆ ಸಾಕಷ್ಟು ಪ್ರಯೋಜನಕಾರಿಯಾಗಿದೆ. ಅಷ್ಟೇ ಅಲ್ಲ, ನಿಮ್ಮ ಆಹಾರದ ರುಚಿಯನ್ನು ಹೆಚ್ಚಿಸಲು ಈರುಳ್ಳಿಗಿಂತ ಉತ್ತಮವಾದ ತರಕಾರಿ ಬೇಕೆ?.

    * ಮೊದಲನೆಯದಾಗಿ ನೀವು ಈರುಳ್ಳಿಯನ್ನು ಶುಷ್ಕ ಮತ್ತು ತಂಪಾದ ವಾತಾವರಣದಲ್ಲಿ ಇಡಬೇಕು. ಒಟ್ಟಾರೆ ಗಾಳಿಯಾಡುವಂತಿದ್ದರೆ ಆಗ ನಿಮ್ಮ ಈರುಳ್ಳಿ ಬೇಗನೆ ಕೆಡುವುದಿಲ್ಲ.
    * ಈರುಳ್ಳಿಯನ್ನು ಶಾಖ ಮತ್ತು ಸೂರ್ಯನ ಬೆಳಕಿನಿಂದ ರಕ್ಷಿಸಿ. ಅಗತ್ಯವಿಲ್ಲದಿದ್ದರೆ ಈರುಳ್ಳಿಯನ್ನು ತೊಳೆಯಬೇಡಿ.
    * ಒಣ ಬಟ್ಟೆಯಿಂದ ಈರುಳ್ಳಿಯನ್ನು ಒರೆಸಿ. ಇದು ನಿಮ್ಮ ಈರುಳ್ಳಿಯನ್ನು ದೀರ್ಘಕಾಲ ಉಳಿಯುವಂತೆ ಮಾಡುತ್ತದೆ.
    * ಈರುಳ್ಳಿಯನ್ನು ಚೀಲದಿಂದ ತೆಗೆದು ಬುಟ್ಟಿಯಲ್ಲಿ ಅಥವಾ ಪಾತ್ರೆಯಲ್ಲಿ ಇಟ್ಟುಕೊಳ್ಳಿ, ಇದರಿಂದ ಈರುಳ್ಳಿಗೆ ಗಾಳಿ ಸಿಗುತ್ತದೆ ಮತ್ತು ಬೇಗನೆ ಕೆಡುವುದಿಲ್ಲ.
    * ಈರುಳ್ಳಿ ಗ್ಯಾಸ್ ಬಿಡುಗಡೆ ಮಾಡುತ್ತದೆ, ಆದ್ದರಿಂದ ಅದನ್ನು ಇತರ ತರಕಾರಿಗಳು ಮತ್ತು ಹಣ್ಣುಗಳಿಂದ ದೂರವಿಡಿ.
    * ಕೊನೆಯದಾಗಿ ಈರುಳ್ಳಿಯನ್ನು ತೇವಾಂಶವುಳ್ಳ ಸ್ಥಳದಲ್ಲಿ ಇಡಬೇಡಿ, ಅದು ಈರುಳ್ಳಿ ಕೊಳೆಯಲು ಕಾರಣವಾಗುತ್ತದೆ ಮತ್ತು ವಾಸನೆ ಬರಲು ಪ್ರಾರಂಭಿಸುತ್ತದೆ. 

    ನೀವು ಇದರ ಜೊತೆಗೆ ಉಪ್ಪಿನಕಾಯಿ ತಿನ್ನಲು ಇಷ್ಟಪಡುತ್ತಿದ್ದರೆ ಎಚ್ಚರ! ಸಮಸ್ಯೆ ಮತ್ತಷ್ಟು ಹೆಚ್ಚಾಗಬಹುದು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts