More

    ನೀವು ಇದರ ಜೊತೆಗೆ ಉಪ್ಪಿನಕಾಯಿ ತಿನ್ನಲು ಇಷ್ಟಪಡುತ್ತಿದ್ದರೆ ಎಚ್ಚರ! ಸಮಸ್ಯೆ ಮತ್ತಷ್ಟು ಹೆಚ್ಚಾಗಬಹುದು

    ಬೆಂಗಳೂರು: ಭಾರತದ ಬಹುತೇಕ ಮನೆಗಳಲ್ಲಿ ಸಾಮಾನ್ಯವಾಗಿ ಬೇಳೆ, ಸೊಪ್ಪಿನ ಸಾರಿನ ಜೊತೆ ಉಪ್ಪಿನಕಾಯಿ ತಿನ್ನಲು ಇಷ್ಟಪಡುವವರು ಬಹಳ ಮಂದಿ ಇದ್ದಾರೆ. ಅದರಲ್ಲೂ ಮಕ್ಕಳು ಬೇಳೆಕಾಳು, ಅನ್ನ, ಉಪ್ಪಿನಕಾಯಿಯನ್ನು ಬಹಳ ಉತ್ಸಾಹದಿಂದ ತಿನ್ನುತ್ತಾರೆ. ಆದರೆ ಕೆಲವು ಕಾಳುಗಳೊಂದಿಗೆ ಉಪ್ಪಿನಕಾಯಿಯನ್ನು ಸೇವಿಸುವುದು ಸಾಕಷ್ಟು ಮಾರಕವಾಗಬಹುದು. ಇದರಿಂದ ಅಸಿಡಿಟಿ ಜತೆಗೆ ಅಲ್ಸರ್ ನಂತಹ ಗಂಭೀರ ಸಮಸ್ಯೆಗಳೂ ಬರಬಹುದು.

    ಹೌದು, ಭಾರತೀಯ ಆಹಾರ ಶೈಲಿಯಲ್ಲಿ ಬೇಳೆಕಾಳುಗಳಿಗೆ ವಿಶೇಷ ಸ್ಥಾನವಿದೆ. ತಜ್ಞರ ಪ್ರಕಾರ, ಬೇಳೆಕಾಳುಗಳಲ್ಲಿ ಪ್ರೋಟೀನ್ ಕೂಡ ಹೇರಳವಾಗಿ ಕಂಡುಬರುತ್ತದೆ. ಹಾಗೆಯೇ ತೊಗರಿಬೇಳೆಯೂ ಪೋಷಕಾಂಶಗಳಿಂದ ಸಮೃದ್ಧವಾಗಿದೆ ಮತ್ತು ಹೆಚ್ಚಿನ ಜನರಿಗೆ ಅದು ನೆಚ್ಚಿನದು.

    ಅಂದಹಾಗೆ ಜನರು ಬಹಳ ಇಷ್ಟಪಟ್ಟು ಬೇಳೆಕಾಳುಗಳೊಂದಿಗೆ ಉಪ್ಪಿನಕಾಯಿ ಅಥವಾ ಯಾವುದೇ ರೀತಿಯ ಹುಳಿ ಪದಾರ್ಥಗಳನ್ನು ಸೇವಿಸುತ್ತಾರೆ. ಆದರೆ ವಿಶೇಷವಾಗಿ ತೊಗರಿ ಬೇಳೆ ಜೊತೆಗೆ ಹುಳಿ ಪದಾರ್ಥಗಳು ಅಥವಾ ಉಪ್ಪಿನಕಾಯಿ ಸೇವನೆಯು ಆರೋಗ್ಯಕ್ಕೆ ತುಂಬಾ ಹಾನಿಕಾರಕವೆಂದು ಸಾಬೀತುಪಡಿಸಲಾಗಿದೆ. ತೊಗರಿ ಬೇಳೆಯಲ್ಲದೆ ಇತರ ಅನೇಕ ಕಾಳುಗಳೊಂದಿಗೆ ಸಹ ಉಪ್ಪಿನಕಾಯಿ ಸೇವಿಸುವುದು ಒಳಿತಲ್ಲ.

    ಪಿಲಿಭಿತ್‌ನ ಖ್ಯಾತ ಆಯುರ್ವೇದಾಚಾರ್ಯ ಡಾ.ಆದಿತ್ಯ ಪಾಂಡೆ ಮಾತನಾಡಿ, ಜನರು ತಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅನೇಕ ತಪ್ಪುಗಳನ್ನು ಮಾಡುತ್ತಾರೆ. ಅದು ಅವರ ಆರೋಗ್ಯಕ್ಕೆ ಸಮಸ್ಯೆಯಾಗುತ್ತದೆ. ಉಪ್ಪಿನಕಾಯಿಯನ್ನು ಬೇಳೆಕಾಳುಗಳೊಂದಿಗೆ ಸೇವಿಸಿದ ಸಂದರ್ಭದಲ್ಲೂ ಇದೇ ರೀತಿ ಆಗುತ್ತದೆ.

    ಏಕೆಂದರೆ ತೊಗರಿ ಕಾಳು, ಉದ್ದಿನ ಬೇಳೆ, ಕಡಲೆ ಕಾಳು ಮತ್ತು ಕಿಡ್ನಿ ಬೀನ್ಸ್​​​ ಜೀರ್ಣಿಸಿಕೊಳ್ಳುವುದು ಸುಲಭವಲ್ಲ. ಇವು ನೈಸರ್ಗಿಕವಾಗಿ ಆಮ್ಲೀಯ ಗುಣಗಳನ್ನು ಹೊಂದಿವೆ. ಇಂತಹ ಸಮಯದಲ್ಲಿ ಉಪ್ಪಿನಕಾಯಿ ಅಥವಾ ಹುಳಿ ಆಹಾರದ ಸೇವನೆಯು ದೇಹದಲ್ಲಿ ಹೆಚ್ಚಿನ ಅಸಿಟಿಡಿ ಅಥವಾ ನೇರವಾಗಿ ಹೈಪರ್ ಆಸಿಡಿಟಿಗೆ ಕಾರಣವಾಗುತ್ತದೆ.

    ಹೈಪರ್ ಆಸಿಡಿಟಿಯ ಲಕ್ಷಣಗಳು
    ಹೈಪರ್ ಆಸಿಡಿಟಿಗೆ ಹಲವು ಕಾರಣಗಳಿವೆ. ಅಂದರೆ ಮಸಾಲೆಯುಕ್ತ ಆಹಾರ, ಬಿಸಿ ಪದಾರ್ಥಗಳ ಅತಿಯಾದ ಬಳಕೆ, ಫಾಸ್ಟ್ ಫುಡ್, ಹೆಚ್ಚು ಎಣ್ಣೆ ಇರುವ ವಸ್ತುಗಳು, ಕಡಿಮೆ ನೀರು ಕುಡಿಯುವುದು, ಪಿತ್ತರಸದ ಅಧಿಕ ಉತ್ಪಾದನೆ.

    ಹೈಪರ್ ಆಸಿಡಿಟಿಯ ಲಕ್ಷಣಗಳೆಂದರೆ ಹೃದಯ ಮತ್ತು ಎದೆಯಲ್ಲಿ ಸುಡುವಿಕೆ, ವಾಕರಿಕೆ, ಗಂಟಲು ಉರಿ, ವಾಂತಿ, ಹೊಟ್ಟೆ ಗ್ಯಾಸ್, ಹೊಟ್ಟೆ ನೋವು, ಎದೆನೋವು, ತಲೆನೋವು, ದುರ್ವಾಸನೆ.

    ನಾವು ದಿನಕ್ಕೆ ಎಷ್ಟು ಬಾರಿ ತಿನ್ನಬೇಕು? ತಜ್ಞರು ಕೊಟ್ಟ ಉತ್ತರ ಹೀಗಿದೆ ನೋಡಿ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts