More

  ದೇವಸ್ಥಾನಕ್ಕೆ ಯಾಂತ್ರಿಕ ಆನೆ ಉಡುಗೊರೆ ನೀಡಿದ ಪ್ರಿಯಾಮಣಿ! ನಟಿಯ ಹೇಳಿಕೆಗೆ ಭಾರಿ ಮೆಚ್ಚುಗೆ

  ಚೆನ್ನೈ: ಪೀಪಲ್​ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ ಇಂಡಿಯಾ (PETA) ಎನ್​ಜಿಒ ಜತೆ ಸೇರಿಕೊಂಡು ಬಹುಭಾಷ ನಟಿ ಪ್ರಿಯಾಮಣಿ ಅವರು ಸಾಮಾನ್ಯ ಗಾತ್ರದ ಯಾಂತ್ರಿಕ ಆನೆಯನ್ನು ಕೊಚ್ಚಿಯಲ್ಲಿರುವ ಥ್ರಿಕ್ಕಾಯಿಲ್​ ಮಹಾದೇವ ದೇವಸ್ಥಾನಕ್ಕೆ ಕೊಡುಗೆ ನೀಡಿದ್ದಾರೆ.

  ಜೀವಂತ ಆನೆಗಳನ್ನು ಎಂದಿಗೂ ಹೊಂದಬಾರದು ಅಥವಾ ಬಾಡಿಗೆಗೆ ತೆಗೆದುಕೊಳ್ಳಬಾರದು ಎಂದು ದೇವಾಲಯದ ಆಡಳಿತ ಮಂಡಳಿ ನಿರ್ಧಾರ ಮಾಡಿರುವ ಹಿನ್ನೆಲೆಯಲ್ಲಿ ಪ್ರಿಯಾಮಣಿ ಅವರು ಯಾಂತ್ರಿಕ ಆನೆಯನ್ನು ಉಡುಗೊರೆಯಾಗಿ ನೀಡಿದ್ದಾರೆ.

  ಮೆಕಾನಿಕಲ್​ ಆನೆಗೆ ಮಹಾದೇವನ್​ ಎಂದು ಹೆಸರಿಡಲಾಗಿದೆ. ಸುರಕ್ಷಿತ ಮತ್ತು ಕ್ರೌರ್ಯ ಮುಕ್ತ ರೀತಿಯಲ್ಲಿ ದೇವಸ್ಥಾನದಲ್ಲಿ ಸಮಾರಂಭಗಳನ್ನು ನಡೆಸಲು ಈ ಯಾಂತ್ರಿಕ ಆನೆಯನ್ನು ಬಳಸಲಾಗುತ್ತದೆ ಎಂದು PETA ತಿಳಿಸಿದೆ. ಈ ರೀತಿಯ ಯಾಂತ್ರಿಕ ಆನೆಯನ್ನು ಕೇರಳದಲ್ಲಿ ಪರಿಚಯಿಸಿದ್ದು, ಇದು ಎರಡನೇ ಬಾರಿ. ದೇವಸ್ಥಾನದಲ್ಲಿ ಭಾನುವಾರ ಉದ್ಘಾಟನಾ ಸಮಾರಂಭ ನಡೆಯಿತು. ಈ ವೇಳೆ ಮಾಸ್ಟರ್ ವೇದಾರ್ಥ್ ರಾಮನ್ ಮತ್ತು ತಂಡದವರಿಂದ ಚೆಂಡ ಮೇಳ ಹಾಗೂ ವೇಣು ಮಾರಾರ್ ಮತ್ತು ತಂಡದವರಿಂದ ಪಂಚವಾದ್ಯ ನಡೆಯಿತು.

  ತಂತ್ರಜ್ಞಾನದ ನಿಜವಾದ ಪ್ರಗತಿ ಎಂದರೆ ಯಾವುದೇ ಪ್ರಾಣಿಗಳಿಗೆ ಹಾನಿಯನ್ನು ಉಂಟು ಮಾಡದೇ ನಮ್ಮ ಸಾಂಸ್ಕೃತಿಕ ಶ್ರೀಮಂತಿಕೆಯ ಅಭ್ಯಾಸಗಳು ಮತ್ತು ಪರಂಪರೆಯನ್ನು ನಿರ್ವಹಿಸುವುದು ಎಂದು ನಟಿ ಪ್ರಿಯಾಮಣಿ ಹೇಳಿದ್ದಾರೆ. ಕನ್ನಡತಿಯ ಈ ಹೇಳಿಕೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

  ಥ್ರಿಕ್ಕಾಯಿಲ್ ಮಹಾದೇವ ದೇವಸ್ಥಾನದ ಮಾಲೀಕ ತೆಕ್ಕಿಣಿಯೇದತ್ ವಲ್ಲಭನ್ ನಂಬೂದಿರಿ ಅವರು ಮಾತನಾಡಿ, ದೇವರು ಸೃಷ್ಟಿಸಿದ ಎಲ್ಲಾ ಪ್ರಾಣಿಗಳಿಗೆ ಮನುಷ್ಯರಂತೆ ತಮ್ಮ ಕುಟುಂಬದೊಂದಿಗೆ ಮುಕ್ತವಾಗಿ ಮತ್ತು ಸುರಕ್ಷಿತವಾಗಿ ಬದುಕಲು ಅವಕಾಶವಿದೆ. ಇದರ ಗೌರವಾರ್ಥವಾಗಿ ಯಾಂತ್ರಿಕ ಆನೆ ಮಹದೇವನನ್ನು ದೇವಸ್ಥಾನದಲ್ಲಿ ಬಳಸಲು ತುಂಬಾ ಸಂತೋಷವಾಗಿದೆ ಎಂದು ಹೇಳಿದರು.

  ಕಳೆದ ವರ್ಷ ತ್ರಿಶೂರ್ ಜಿಲ್ಲೆಯ ಇರಿಂಜದಪ್ಪಿಲ್ಲಿ ಶ್ರೀಕೃಷ್ಣ ದೇವಸ್ಥಾನದ ಅಧಿಕಾರಿಗಳು, ಯಾವುದೇ ಹಬ್ಬಗಳಿಗೆ ಜೀವಂತ ಪ್ರಾಣಿಗಳನ್ನು ಬಳಸುವುದನ್ನು ನಿಲ್ಲಿಸುವ ಪ್ರತಿಜ್ಞೆಯ ಭಾಗವಾಗಿ, ದೇವಾಲಯದ ಆಚರಣೆಗಳಿಗೆ ರೋಬೋಟಿಕ್ ಆನೆಯನ್ನು ಪರಿಚಯಿಸಿದರು. ಇದು ಕೇರಳದಲ್ಲಿ ಮೊದಲನೆಯದು. (ಏಜೆನ್ಸೀಸ್)

  ಜಾಹ್ನವಿ ಕಪೂರ್​ ಟ್ವೀಟ್​ ಮಾಡಿದ್ರೂ ಅಂತಾ​ ರಿಪ್ಲೈ ಮಾಡಿದ್ರೆ ಅಶ್ವಿನ್​ಗೆ ಕಾದಿತ್ತು ಭಾರಿ ನಿರಾಸೆ!

  ಇವರೇ ನೋಡಿ ಭಾರತೀಯ ಚಿತ್ರರಂಗದಲ್ಲಿ 1 ಕೋಟಿ ರೂ. ಸಂಭಾವನೆ ಪಡೆದ ಮೊದಲ ನಟಿ!

  ನೀನು ಹೀಗೆ ಮಾಡ್ಬೇಡ, ಯಾರು ಒಪ್ಪಲ್ಲ ಅಂದ್ರು; ತಾಯಿ ಮಾತು ಕೇಳಿ ಕೆಟ್ಟರಾ ಮೀನಾ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts