

ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ನಕಲಿ ಖಾತೆಗಳಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಕೆಲವೊಮ್ಮೆ ಅಸಲಿ ಮತ್ತು ನಕಲಿ ಖಾತೆಗಳಿಗೆ ವ್ಯತ್ಯಾಸ ತಿಳಿಯದೇ ಯಾಮಾರಿಬಿಡುತ್ತೇವೆ. ಟೀಮ್ ಇಂಡಿಯಾ ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್ ಕೂಡ ಇದೀಗ ಇದೇ ಪರಿಸ್ಥಿತಿ ಎದುರಿಸಿದ್ದಾರೆ.
ಬಾಲಿವುಡ್ ಬ್ಯೂಟಿ ಜಾಹ್ನವಿ ಕಪೂರ್ ಎಕ್ಸ್ ಖಾತೆಗೆ ರಿಪ್ಲೈ ಮಾಡಿದ ಬಳಿಕ ಅದು ನಕಲಿ ಖಾತೆ ಎಂದು ಗೊತ್ತಾದ ನಂತರ ಅಶ್ವಿನ್ ತುಂಬಾ ಬೇಸರ ಮಾಡಿಕೊಂಡಿದ್ದಾರೆ. ಎಕ್ಸ್ ಬಳಕೆದಾರರೊಬ್ಬರು ಅಶ್ವಿನ್ ಅವರ ಮಿಸ್ಟೇಕ್ ಅನ್ನು ಪತ್ತೆಹಚ್ಚಿ, ನೀವು ನಕಲಿ ಖಾತೆಗೆ ರಿಪ್ಲೈ ಮಾಡಿದ್ದೀರಿ ಎಂದು ಟ್ವೀಟ್ ಮಾಡಿದ್ದು, ಆ ಟ್ವೀಟ್ಗೆ ಉತ್ತರಿಸಿದ ಅಶ್ವಿನ್, ಅಯ್ಯೋ ದೇವರೆ, ಅದು ಹಾಗೇನಾ? ನನ್ನ ಹೃದಯ ಒಡೆಯಿತು ಎಂದು ಮುರಿದ ಹೃದಯದ ಎಮೋಜಿಯನ್ನು ಪೋಸ್ಟ್ ಮಾಡಿದ್ದಾರೆ.
ಅಶ್ವಿನ್ ಮತ್ತು ಎಕ್ಸ್ ಬಳಕೆದಾರರ ನಡುವಿನ ವಿನೋದಾತ್ಮಕ ಸಂಭಾಷಣೆಯ ಸ್ಕ್ರೀನ್ಶಾಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜಾಹ್ನವಿ ಕಪೂರ್ (ಪರೋಡಿ) ಹೆಸರಿನ ವೆರಿಫೈಡ್ ಖಾತೆಯಿಂದ ತುಂಬಾ ಚೆನ್ನಾಗಿದೆ ಅಶ್ವಿನ್ ಎಂಉ ಟ್ವೀಟ್ ಮಾಡಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಅಶ್ವಿನ್, ಹಾಯ್ ಜಾಹ್ನವಿ ಎಂದಿದ್ದರು. ಇದನ್ನು ಗಮನಿಸಿದ ಎಕ್ಸ್ ಬಳಕೆದಾರರು ಅದು ಜಾಹ್ನವಿ ಅವರ ಅಧಿಕೃತ ಖಾತೆಯಲ್ಲಿ ನಕಲಿ ಖಾತೆ ಎಂಬುದನ್ನು ಅಶ್ವಿನ್ ಗಮನಕ್ಕೆ ತಂದರು. ಇದು ತಿಳಿಯುತ್ತಿದ್ದಂತೆ ಅಯ್ಯೋ ದೇವರೆ, ಅದು ಹಾಗೇನಾ? ನನ್ನ ಹೃದಯ ಒಡೆಯಿತು ಎಂದು ಮುರಿದ ಹೃದಯದ ಎಮೋಜಿಯನ್ನು ಪೋಸ್ಟ್ ಮಾಡಿದ್ದಾರೆ.
ಇದಾದ ಬಳಿಕ ನಕಲಿ ಖಾತೆಯಿಂದಲೂ ಇದು ಅಧಿಕೃತವಲ್ಲ ನಕಲಿ ಖಾತೆ ಎಂಬ ಉತ್ತರ ಬಂದಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಅಶ್ವಿನ್, ನೀವು ಅದನ್ನು ಹೇಳಬಾರದು, ಏಕೆಂದರೆ, ಅದನ್ನು ಪರೋಡಿ ಹೇಳುತ್ತದೆ ಮತ್ತು ನೀವು ನಿಜವಾಗಿರುವುದರಿಂದ ಸಂವಹನ ಮಾಡುವುದು ಒಂದು ರೀತಿಯ ವಿನೋದ ಎಂದು ಅಶ್ವಿನ್ ವ್ಯಂಗ್ಯವಾಡಿದ್ದಾರೆ.
ಇನ್ನೂ ಕ್ರೀಡೆ ವಿಚಾರಕ್ಕೆ ಬರುವುದಾದರೆ ಅಶ್ವಿನ್, ಮುಂಬರುವ 17ನೇ ಐಪಿಎಲ್ ಸೀಸನ್ನಲ್ಲೂ ರಾಜಸ್ಥಾನ ರಾಯಲ್ಸ್ ಪರ ಆಡಲಿದ್ದಾರೆ. ಅದಕ್ಕಾಗಿ ಸಾಕಷ್ಟು ಸಿದ್ಧತೆಯಲ್ಲಿ ತೊಡಗಿದ್ದಾರೆ. ಅಶ್ವಿನ್ ಅವರು 2009ರಲ್ಲಿ ಐಪಿಎಲ್ಗೆ ಪದಾರ್ಪಣೆ ಮಾಡಿದ ನಂತರ 197 ಪಂದ್ಯಗಳಲ್ಲಿ 171 ವಿಕೆಟ್‌ಗಳನ್ನು ಪಡೆದಿದ್ದಾರೆ. ಪ್ರಸಕ್ತ ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ತಮ್ಮ ಅಭಿಯಾನವನ್ನು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಮಾರ್ಚ್ 24 ರಂದು ಜೈಪುರದಲ್ಲಿ ಪ್ರಾರಂಭಿಸಲಿದೆ. (ಏಜೆನ್ಸೀಸ್)