More

    ಬಾಯ್‌ಫ್ರೆಂಡ್‌ಗಿಂತ ಶ್ರೀಮಂತೆ ಸ್ಮೃತಿ ಮಂದಾನ: ಇವ್ರಿಗೆ ‘ಬಾಯ್ ಫ್ರೆಂಡ್’ ಇದಾನಾ ಎಂದ್ರು ಆರ್‌ಸಿಬಿ ಫ್ಯಾನ್ಸ್!

    ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳ ಬಹುಕಾಲದ ಕನಸನ್ನು ಸ್ಮೃತಿ ಮಂದಾನ ಪಡೆ ಈಡೇರಿಸಿದೆ. ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ವುಮೆನ್ಸ್ ಪ್ರೀಮಿಯರ್ ಲೀಗ್​ನ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸೋಲುಣಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಚೊಚ್ಚಲ ಬಾರಿ ಚಾಂಪಿಯನ್ ಪಟ್ಟಕ್ಕೇರಿದೆ.

    ಇದನ್ನೂ ಓದಿ: ಪ್ರೀ ವೆಡ್ಡಿಂಗ್ ಸಮಾರಂಭದಲ್ಲಿ ಶಾರುಖ್-ಸಲ್ಮಾನ್ ಕಿತ್ತಾಟ: ಅಮೀರ್ ಖಾನ್ ಬಿಚ್ಚಿಟ್ಟ ರಹಸ್ಯ

    ಈ ಭರ್ಜರಿ ಗೆಲುವಿನ ಬಳಿಕ ಮಾತನಾಡಿದ ಆರ್​ಸಿಬಿ ತಂಡದ ನಾಯಕಿ ಸ್ಮೃತಿ ಮಂದಾನ ಟ್ರೋಫಿ ಗೆದ್ದಿದ್ದು ನಾನೊಬ್ಬನೇ ಅಲ್ಲ, ತಂಡವೇ ಗೆದ್ದಿದೆ. ಫ್ರಾಂಚೈಸಿಯಾಗಿ ಆರ್‌ಸಿಬಿ ಗೆಲ್ಲುವುದು ನಿಜಕ್ಕೂ ವಿಶೇಷ. ಈ ಗೆಲುವು ಖಂಡಿತವಾಗಿಯೂ ಟಾಪ್ ಐದರಲ್ಲಿ ಒಂದಾಗಿದೆ. ಕಪ್‌ ಯಾವಾಗಲೂ ಬರುತ್ತದೆ. ಆದರೆ ಈ ಬಾರಿ ನಾನು ಈ ಸಲ ಕಪ್ ನಮ್ದು ಎಂದು ಹೇಳಲು ಬಯಸುತ್ತೇನೆ ಎಂದಾಗ ಸ್ಡೇಡಿಯಂನಲ್ಲಿದ್ದ ಆರ್​ಸಿಬಿ ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು.

    ಬಾಯ್‌ಫ್ರೆಂಡ್‌ಗಿಂತ ಶ್ರೀಮಂತೆ ಸ್ಮೃತಿ ಮಂದಾನ: ಇವ್ರಿಗೆ 'ಬಾಯ್ ಫ್ರೆಂಡ್' ಇದಾನಾ ಎಂದ್ರು ಆರ್‌ಸಿಬಿ ಫ್ಯಾನ್ಸ್!

    ಮಹಿಳಾ ಪ್ರೀಮಿಯರ್ ಲೀಗ್ ಪ್ರಶಸ್ತಿಯನ್ನು ಗೆದ್ದ ನಂತರ ಸ್ಮೃತಿ ಮಂದಾನ ತನ್ನ ಗೆಳೆಯನ ಜೊತೆ ಟ್ರೋಫಿ ಜೊತೆ ಪೋಟೋ ತೆಗೆಸಿಕೊಂಡಿದ್ದಾಳೆ. ಸದ್ಯ ಇವರಿಬ್ಬರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಸ್ಮೃತಿ ಮಂದಾನ WPL ಟ್ರೋಫಿಯನ್ನು ಹಿಡಿದುಕೊಂಡು ತನ್ನ ಗೆಳೆಯ ಪಲಾಶ್ ಮುಚಲ್ ಜೊತೆ ಪೋಸ್ ಕೊಟ್ಟಿದ್ದಾಳೆ.

    ಆರ್​ಸಿಬಿ ತಂಡದ ನಾಯಕಿ ಸ್ಮೃತಿ ಮಂದಾನಾ ಅವರ ಗೆಳೆಯ ಪಲಾಶ್ ಮುಚಲ್ ಕೂಡ ಸೆಲೆಬ್ರಿಟಿ. ಅವರು ತಮ್ಮದೇ ಆದ ಅಭಿಮಾನಿಗಳನ್ನು ಹೊಂದಿದ್ದಾರೆ. ಕೋಟಿಗಟ್ಟಲೆ ಹಣ ಸಂಪಾದಿಸುತ್ತಾನೆ. ಗಮನಾರ್ಹವಾಗಿ, ಸ್ಮೃತಿ ಮಂದಾನ ತನ್ನ ಗೆಳೆಯ ಪಲಾಶ್ ಮುಚಲ್‌ಗಿಂತ ಹೆಚ್ಚು ಸಂಪಾದಿಸುತ್ತಾಳೆ.

    ಬಾಯ್‌ಫ್ರೆಂಡ್‌ಗಿಂತ ಶ್ರೀಮಂತೆ ಸ್ಮೃತಿ ಮಂದಾನ: ಇವ್ರಿಗೆ 'ಬಾಯ್ ಫ್ರೆಂಡ್' ಇದಾನಾ ಎಂದ್ರು ಆರ್‌ಸಿಬಿ ಫ್ಯಾನ್ಸ್!

    ವರದಿಯೊಂದರ ಪ್ರಕಾರ, ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯ ಅತ್ಯಂತ ದುಬಾರಿ ಆಟಗಾರ್ತಿ ಹಾಗೂ ಟೀಮ್ ಇಂಡಿಯಾದ ಸ್ಟಾರ್ ಸ್ಮೃತಿ ಮಂಧಾನ ಅವರ ಒಟ್ಟು ನಿವ್ವಳ ಮೌಲ್ಯ ಬರೋಬ್ಬರಿ 33.29 ಕೋಟಿ ರೂ. ಆಗಿದೆ. ಮಂದಾನ ಬಾಯ್ ಫ್ರೆಂಡ್, ಗಾಯಕ-ನಿರ್ದೇಶಕ ಪಲಾಶ್ ಮುಚ್ಚಲ್ ಅವರ ನಿವ್ವಳ ಮೌಲ್ಯವು 20 ರಿಂದ 30 ಕೋಟಿ ರೂ. ಎಂದು ಹೇಳಲಾಗಿದೆ.

    ಬಾಯ್‌ಫ್ರೆಂಡ್‌ಗಿಂತ ಶ್ರೀಮಂತೆ ಸ್ಮೃತಿ ಮಂದಾನ: ಇವ್ರಿಗೆ 'ಬಾಯ್ ಫ್ರೆಂಡ್' ಇದಾನಾ ಎಂದ್ರು ಆರ್‌ಸಿಬಿ ಫ್ಯಾನ್ಸ್!

    ಆರ್​ಸಿಬಿಗೆ 6 ಕೋಟಿ, ಡೆಲ್ಲಿ ತಂಡಕ್ಕೆ 3 ಕೋಟಿ: ಆರ್​ಸಿಬಿ ಚೊಚ್ಚಲ ಟ್ರೋಫಿ ಗೆಲ್ಲುವ ಜೊತೆಗೆ ದೊಟ್ಟ ಮಟ್ಟದ ಬಹುಮಾನವೂ ಸಿಕ್ಕಿತು. ಡಬ್ಲ್ಯುಪಿಎಲ್ ಗೆದ್ದಿದ್ದಕ್ಕಾಗಿ ಆರ್​ಸಿಬಿ 6 ಕೋಟಿ ರೂಪಾಯಿ ಬಹುಮಾನ ಪಡೆದುಕೊಂಡಿದೆ. ಅಂತೆಯೆ ಸತತ ಎರಡನೇ ಋತುವಿನಲ್ಲಿ ಪ್ರಶಸ್ತಿ ವಂಚಿತ ಡೆಲ್ಲಿ ಕ್ಯಾಪಿಟಲ್ಸ್ ರನ್ನರ್ ಅಪ್ ಟ್ರೋಫಿಯನ್ನೂ ಪಡೆದುಕೊಂಡಿದ್ದು, ಈ ತಂಡ 3 ಕೋಟಿ ರೂಪಾಯಿ ಬಹುಮಾನವನ್ನೂ ಪಡೆದುಕೊಂಡಿದೆ.

    ಬಾಯ್‌ಫ್ರೆಂಡ್‌ಗಿಂತ ಶ್ರೀಮಂತೆ ಸ್ಮೃತಿ ಮಂದಾನ: ಇವ್ರಿಗೆ 'ಬಾಯ್ ಫ್ರೆಂಡ್' ಇದಾನಾ ಎಂದ್ರು ಆರ್‌ಸಿಬಿ ಫ್ಯಾನ್ಸ್!

    ಆರ್‌ಸಿಬಿ ತಂಡದ ಆಟಗಾರ ಕೊಹ್ಲಿ ಶುಭಾಶಯ: ಸದ್ಯಕ್ಕೆ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳೆಯರ ತಂಡ ಕಪ್ ಗೆಲ್ಲುವ ಮೂಲಕ ಆರ್‌ಸಿಬಿ ಅಭಿಮಾನಿಗಳಿಗೆ ಸಕತ್ ಖುಷಿ ನೀಡಿದೆ. ಲಕ್ಷಾಂತರ ಅಭಿಮಾನಿಗಳು ಮಹಿಳಾ ತಂಡಕ್ಕೆ ತಮ್ಮದೇಯಾದ ರೀತಿಯಲ್ಲಿ ಶುಭಾಶಯ ಕೋರುತ್ತಿದ್ದಾರೆ. ಮಹಿಳೆಯರ ತಂಡ ಪ್ರಶಸ್ತಿ ಗೆದ್ದ ತಕ್ಷಣವೇ ಕ್ರೀಡಾಂಗಣದಲ್ಲಿ ಮಹಿಳಾ ತಂಡದ ಮ್ಯಾನೇಜರ್‌ಗೆ ವಿಡಿಯೋ ಕಾಲ್ ಮಾಡಿ ಐಪಿಎಲ್‌ ಆರ್‌ಸಿಬಿ ತಂಡದ ಆಟಗಾರ ವಿರಾಟ್ ಕೊಹ್ಲಿ ಶುಭಾಶಯ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts