More

  ಮುಕೇಶ್ ಅಂಬಾನಿ ಮಗನ ಪ್ರೀ ವೆಡ್ಡಿಂಗ್ ಸಮಾರಂಭದಲ್ಲಿ ಶಾರುಖ್-ಸಲ್ಮಾನ್ ಕಿತ್ತಾಟ: ಅಮೀರ್ ಖಾನ್ ಬಿಚ್ಚಿಟ್ಟ ರಹಸ್ಯ

  ಮುಂಬೈ: ವಿಶ್ವದ ಟಾಪ್ ಟೆನ್ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಹಾಗೂ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ದಂಪತಿಯ ಮಗ ಅನಂತ್ ಅಂಬಾನಿ – ರಾಧಿಕಾ ಮರ್ಚೆಂಟ್ ವಿವಾಹ ಪೂರ್ವ ಕಾರ್ಯಕ್ರಮಕ್ಕೆ ಅದ್ಧೂರಿ ತರೆ ಬಿದ್ದಿದೆ. ಸ್ವತಃ ನೀತಾ ಅಂಬಾನಿ ಅವರು ಈ ಸಿದ್ಧತೆಯ ಉಸ್ತುವಾರಿಗಳನ್ನು ನೋಡಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ದೇಶ ವಿದೇಶಗಳ ಗಣ್ಯರು ಭಾಗವಾಹಿಸಿದ್ದಾರೆ. ಮೂರು ದಿನಗಳ ವಿಶೇಷ ಕಾರ್ಯಕ್ರಮದಲ್ಲಿ ಸೆಲೆಬ್ರಿಟಿಗಳು ಕೂಡ ಕಾರ್ಯಕ್ರಗಳನ್ನು ನೀಡಿದ್ದಾರೆ.

  ಇದನ್ನೂ ಓದಿ: ಗುಜರಾತ್: ಪಾಕಿಸ್ತಾನದಿಂದ ಬಂದ 18 ಹಿಂದೂ ನಿರಾಶ್ರಿತರಿಗೆ ಭಾರತೀಯ ಪೌರತ್ವ

  ಈ ಫ್ರೀ ವೆಡ್ಡಿಂಗ್ ಕಾರ್ಯಕ್ರಮದಲ್ಲಿ ಬಾಲಿವುಡ್‌ನ ಸ್ಟಾರ್ಸ್​ಗಳಾದ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ವೇದಿಕೆಯಲ್ಲಿ ಜಗಳವಾಡಿದ್ದಾರೆ. ಈ ವೇಳೆ ಅಮೀರ್ ಖಾನ್ ಕೂಡ ಇದ್ದರು. ಇವರಿಬ್ಬರ ಜಗಳವನ್ನು ಅಮೀರ್ ಖಾನ್​ ಬಗೆಹರಿಸಲು ಹೆಚ್ಚಿನ ಪ್ರಯತ್ನ ಮಾಡಿದರು. ಆದರೆ ಅದು ಸಾಧ್ಯವಾಗಲಿಲ್ಲ. ಇದರಿಂದ ಬಾಲಿವುಡ್​ನ ಇಬ್ಬರು ಸ್ಟಾರ್ಸ್​​ಗಳ ಅಭಿಮಾನಿಗಳು ಚಿಂತೆಗೀಡಾಗಿದ್ದಾರೆ. ಸದ್ಯ ಇವರಿಬ್ಬರ ಈ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

  ಹೌದು ಜಾಮ್‌ನಗರದ ವೇದಿಕೆಯಲ್ಲಿ ಎಸ್‌ಆರ್‌ಕೆ ಮತ್ತು ಸಲ್ಮಾನ್ ಖಾನ್ ತಮಾಷೆಯ ವಾಗ್ವಾದದಲ್ಲಿ ತೊಡಗಿದ್ದರು. ಮೂರು ಖಾನ್‌ಗಳು ವೇದಿಕೆಯಲ್ಲಿ ಪ್ರದರ್ಶನ ನೀಡಬೇಕೆಂದು ಮುಖೇಶ್ ಅಂಬಾನಿ ಬಯಸಿದ್ದರು. ಇದರಿಂದ ಶಾರುಕ್, ಸಲ್ಮಾನ್ ಮತ್ತು ಅಮೀರ್ ಖಾನ್​ ಈ ಮೂವರು ಖಾನ್‌ಗಳು ಒಟ್ಟಿಗೆ ನೃತ್ಯ ಮಾಡಲು ಯಾರ ಹಾಡನ್ನು ಪ್ಲೇ ಮಾಡಬೇಕು ಚರ್ಚೆ ನಡೆದಿದೆ. ಈ ಸಲ್ಮಾನ್​ ಮತ್ತು ಶಾರುಖ್​ ನನ್ನ ಸಿನಿಮಾ ಸಾಂಗ್​ಗೆ ಡ್ಯಾನ್ಸ್​ ಮಾಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಈ ಜಗಳವನ್ನು ತಣ್ಣಗಾಗಿಸಲು ಬಂದ ಅಮೀರ್ ಖಾನ್ ನಿಮ್ಮಬ್ಬರ ಸಿನಿಮಾದ ಸಾಂಗ್​ ಬೇಡ ನನ್ನ ಸಿನಿಮಾದ ಸಾಂಗ್​ಗೆ ಡ್ಯಾನ್ಸ್​ ಮಾಡೋಣ ಎಂದು ಹೇಳಿದರು.

  ಮುಕೇಶ್ ಅಂಬಾನಿ ಮಗನ ಪ್ರೀ ವೆಡ್ಡಿಂಗ್ ಸಮಾರಂಭದಲ್ಲಿ ಶಾರುಖ್-ಸಲ್ಮಾನ್ ಕಿತ್ತಾಟ: ಅಮೀರ್ ಖಾನ್ ಬಿಚ್ಚಿಟ್ಟ ರಹಸ್ಯ

  ವೇದಿಕೆಯಲ್ಲಿದ್ದ ಅಮೀರ್,ಇಬ್ಬರು ಖಾನ್‌ಗಳು ‘ಮತ್ತೆ’ ಜಗಳವಾಡುತ್ತಿದ್ದಾರೆ ಎಂದು ಟೀಕಿಸಿದರು, ಪ್ರೇಕ್ಷಕರು ನಗೆಗಡಲಲ್ಲಿ ಮುಳುಗಿದರು. ಈ ಸಮಸ್ಯೆ ಬಗೆಹರಿಸಿ ರಾಮ್ ಚರಣ್ ಮತ್ತು ಜೂ.ಎನ್‌ಟಿಆರ್ ಅಭಿನಯದ ಬ್ಲಾಕ್​ಬಸ್ಟರ್ ಹಿಟ್​ ‘ಆರ್​​ಆರ್​ಆರ್’​ನ ನಾಟು ನಾಟು ಹಾಡಿನ ಹುಕ್ ಸ್ಟೆಪ್ ಅನ್ನು ಶಾರುಖ್ ಖಾನ್, ಸಲ್ಮಾನ್ ಖಾನ್​ ಮತ್ತು ಅಮೀರ್ ಖಾನ್​​ ಮಾಡಿ ವೇದಿಕೆಯಲ್ಲಿ ಧೂಳೆಬ್ಬಿಸಿದರು. ಅಂಬಾನಿ ಕುಟುಂಬದ ವಿಶೇಷ ಕ್ಷಣವನ್ನು ಆಸ್ಕರ್ ವಿಜೇತ ಹಾಡಿನ ಮೂಲಕ ಮತ್ತಷ್ಟು ವಿಶೇಷವಾಗಿಸಲಾಯಿತು.

  ಶಾರುಖ್​​, ಸಲ್ಮಾನ್ ಮತ್ತು ಅಮೀರ್ ವರ್ಷಗಳ ನಂತರ ವೇದಿಕೆಯೊಂದರಲ್ಲಿ ಒಟ್ಟಾಗಿ ಕಾಣಿಸಿಕೊಂಡರು. ಅದ್ಭುತ ಪ್ರದರ್ಶನದ ಮೂಲಕ ಕಾರ್ಯಕ್ರಮದಲ್ಲಿ ಸೇರಿದ್ದ ವಿವಿಧ ಕ್ಷೇತ್ರಗಳ ಖ್ಯಾತನಾಮರು, ಹೊರಗಿನ ಅಭಿಮಾನಿಗಳಿಗೂ ಭರಪೂರ ಮನರಂಜನೆಯ ರಸದೌತಣ ಉಣಬಡಿಸಿದರು. ಎಸ್​ಆರ್​ಕೆ ಫ್ಯಾನ್ಸ್​​ ಕ್ಲಬ್ ಒಂದರಿಂದ ಪೋಸ್ಟ್ ಮಾಡಲಾಗಿರುವ ವಿಡಿಯೋಗಳಲ್ಲಿ ಎಸ್​ಆರ್​ಕೆ, ಸಲ್ಲು ಮತ್ತು ಅಮೀರ್ ಕಾರ್ಯಕ್ರಮಕ್ಕಾಗಿ ಕುರ್ತಾ-ಪೈಜಾಮಾ ಧರಿಸಿರುವುದನ್ನು ಕಾಣಬಹುದು.

  ವೈರಲ್​ ವಿಡಿಯೋಗಳಲ್ಲಿ ಬಾಲಿವುಡ್‌ನ ಮೂವರು ದಿಗ್ಗಜರು ಸೂಪರ್​ ಹಿಟ್​​ ಸಾಂಗ್​ ಚೈಯ್ಯಾ ಚೈಯ್ಯಾ, ಮುಜ್​ ಸೆ ಶಾದಿ ಕರೋಗಿ ಸಿನಿಮಾದ ಜೀನೆ ಕೆ ಹೈ ಚಾರ್ ದಿನ್‌ ಮತ್ತು ರಂಗ್ ದೇ ಬಸಂತಿ ಸಿನಿಮಾದಿಂದ ಮಸ್ತಿ ಕಿ ಪಾಠ್ ಶಾಲಾ ಸೇರಿದಂತೆ ಕೆಲವು ಹಾಡುಗಳಿಗೆ ಹೆಜ್ಜೆ ಹಾಕಿದರು. ಮತ್ತೊಂದು ವಿಡಿಯೋದಲ್ಲಿ, ಎಸ್‌ಆರ್‌ಕೆ ತಮ್ಮ ಬ್ಲಾಕ್​​ಬಸ್ಟರ್​​ ಸಿನಿಮಾ ಪಠಾಣ್​ನ ಜೂಮೆ ಜೋ ಪಠಾಣ್​​ ಹಾಡಿಗೆ ಸಹನೃತ್ಯಗಾರರ ಜೊತೆ ಸೇರಿ ಮಸ್ತ್​​ ಡ್ಯಾನ್ಸ್ ಮಾಡಿದರು.
  ಎಸ್​​ಆರ್​​ಕೆ ಮತ್ತು 3 ಖಾನ್ಸ್​ ಪರ್ಫಾಮೆನ್ಸ್​​​​ ನೆಟ್ಟಿಗರ ಹೃದಯ ಗೆದ್ದಿದ್ದು, ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ಜಾಗ ಪಡೆದಿವೆ. ಅಲ್ಲದೇ, ಶಾರುಖ್ ಖಾನ್​​ ನಿರೂಪಕನಾಗಿಯೂ ಮಿಂಚು ಹರಿಸಿರುವ ವಿಡಿಯೋಗಳೂ ಹೊರಬಿದ್ದಿವೆ. ಹಲವು ವಿಡಿಯೋಗಳಲ್ಲಿ ಪ್ರೇಕ್ಷಕರನ್ನುದ್ದೇಶಿಸಿ ಮಾತನಾಡಿ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಗಾಯಕ ದಿಲ್ಜಿತ್ ದೋಸಾಂಜ್ ಅವರೊಂದಿಗೆ ಸೇರಿ ವೇದಿಕೆಯ ಆಕರ್ಷಣೆ ಹೆಚ್ಚಿಸಿದ್ದಾರೆ.

  ರಿಲಯನ್ಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಈ ವರ್ಷದ ಕೊನೆಯಲ್ಲಿ ಕೈಗಾರಿಕೋದ್ಯಮಿ ವೀರೆನ್ ಮರ್ಚೆಂಟ್ ಪುತ್ರಿ ರಾಧಿಕಾ ಮರ್ಚೆಂಟ್ ಜೊತೆ ಹಸೆಮಣೆ ಏರಲಿದ್ದಾರೆ.

  ಎಂಎಲ್​ಎ ಟಿಕೆಟ್​ ಸಿಕ್ಕಿದ್ದಕ್ಕೆ ಅರ್ಧ ತಲೆಕೂದಲು ಮೀಸೆ ಬೋಳಿಸಿಕೊಂಡ ಎಂಎಲ್​ಎ ಅಭ್ಯರ್ಥಿ…!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts