More

    ಎಂಎಲ್​ಎ ಟಿಕೆಟ್​ ಸಿಕ್ಕಿದ್ದಕ್ಕೆ ಅರ್ಧ ತಲೆಕೂದಲು ಮೀಸೆ ಬೋಳಿಸಿಕೊಂಡ ಎಂಎಲ್​ಎ ಅಭ್ಯರ್ಥಿ…!

    ಅನಂತಪುರ: ಈ ಬಾರಿಯ ಲೋಕಸಭೆ ಚುನಾವಣೆಯ ಜೊತೆಯೇ ಆಂಧ್ರ ಪ್ರದೇಶ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ದಿನಾಂಕ ನಿಗದಿಯಾಗಿದೆ. ಆಂಧ್ರ ಪ್ರದೇಶದಲ್ಲಿ ಮೇ 13 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ.

    ಇದನ್ನೂ ಓದಿ:  ಅಮೆರಿಕದಲ್ಲಿ ಭಾರತ ಮೂಲದ ವಿದ್ಯಾರ್ಥಿ ಪರುಚೂರಿ ಅಭಿಜಿತ್ ಸಾವು, ವರ್ಷದಲ್ಲಿ ಐದನೇ ಘಟನೆ

    ಶನಿವಾರ ಬೆಳಗ್ಗೆ ಆಂಧ್ರಪ್ರದೇಶ ಸಿಎಂ ವೈ.ಎಸ್​ ಜಗನ್​ ಮೋಹನ್​ ರೆಡ್ಡಿ ನೇತೃತ್ವದ ಆಡಳಿತರೂಢ ವೈಎಸ್​ಆರ್​ಸಿಪಿ ಪಕ್ಷ ಶನಿವಾರ ರಾಜ್ಯದ 25 ಲೋಕಸಭೆ ಮತ್ತು ವಿಧಾನಸಭೆಯ 175 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿತ್ತು. ಈಗ ಅಸಲಿ ವಿಷಯ ಹೇಳ್ತೀವಿ ನೋಡಿ..

    ಆಂಧ್ರಪ್ರದೇಶ ಪ್ರದೇಶದ ಶ್ರೀಸತ್ಯಸಾಯಿ ಜಿಲ್ಲೆಯ ಪುಟ್ಟಪರ್ತಿಯ ವೈಸಿಪಿ ಟಿಕೆಟ್ ಶ್ರೀಧರ್ ರೆಡ್ಡಿಗೆ ಸಿಗುವುದಿಲ್ಲ ಎಂದು ವ್ಯಕ್ತಿಯೊಬ್ಬರು ಬೆಟ್ಟಿಂಗ್​​ ಹಾಕಿದ್ದರು. ಜೊತೆಗೆ ಶ್ರೀಧರ್ ರೆಡ್ಡಿಗೆ ಸಿಎಂ ಜಗನ್ ಮೋಹನ್​ ರೆಡ್ಡಿ ನೇತೃತ್ವದ ವೈಎಸ್​ಆರ್​ಸಿಪಿ ಟಿಕೆಟ್ ಕೊಟ್ಟರೆ, ಅರ್ಧ ತಲೆಕೂದಲು ಮತ್ತು ಅರ್ಧ ಮೀಸೆ ತೆಗೆಸುತ್ತೇನೆ ಎಂದು ಚಾಲೆಂಜ್​ ಕೂಡ ಹಾಕಿದ್ದ.

    ಶನಿವಾರ ಬಿಡುಗಡೆಯಾದ ಪಟ್ಟಿಯಲ್ಲಿ ಅಂತಿಮವಾಗಿ ಪುಟ್ಟಪರ್ತಿ ಕ್ಷೇತ್ರಕ್ಕೆ ಶ್ರೀಧರ್ ರೆಡ್ಡಿ ಹೆಸರನ್ನು ವೈಸಿಪಿ ಅಭ್ಯರ್ಥಿಯಾಗಿ ಘೋಷಿಸಿದೆ. ಶ್ರೀಧರ್ ರೆಡ್ಡಿಗೆ ಟಿಕೆಟ್ ಸಿಕ್ಕಿರುವ ವಿಷಯ ತಿಳಿಯುತ್ತಿದ್ದಂತೆ ಮಹೇಶ್ವರ್ ರೆಡ್ಡಿ ಎಂಬ ವ್ಯಕ್ತಿ ತನ್ನ ಅರ್ಧ ತಲೆಕೂದಲು ಮತ್ತು ಅರ್ಧ ಮೀಸೆ ಬೋಳಿಸಿಕೊಂಡಿದ್ದಾನೆ.

    ಶ್ರೀಧರ್ ರೆಡ್ಡಿಗೆ ಪುಟ್ಟಪರ್ತಿ ಟಿಕೆಟ್ ನೀಡಿರುವುದನ್ನು ಮಹೇಶ್ವರರೆಡ್ಡಿ ಈ ರೀತಿಯಾಗಿ ಪ್ರತಿಭಟಿಸಿದ್ದು, ಯಾರು ಆತನಿಗೆ ಮತ ಚಲಾಯಿಸಬೇಡಿ ಎಂದು ಕೇಳಿಕೊಂಡಿದ್ದಾನೆ. ಪುಟ್ಟಪರ್ತಿಯ ಸತ್ಯಮ್ಮ ದೇವಸ್ಥಾನದ ಮುಂಭಾಗದಲ್ಲಿ ಮಹೇಶ್ವರರೆಡ್ಡಿ ಅರ್ಧ ಮೀಸೆ ತೆಗೆದಿದ್ದಾರೆ.

    ಅಚ್ಚರಿಯ ಸಂಗತಿ ಎಂದರೆ ಎಂಎಲ್​ಎ ಅಭ್ಯರ್ಥಿ ಶ್ರೀಧರ್ ರೆಡ್ಡಿಗೆ ಟಿಕೆಟ್ ಸಿಗಬಾರದು ಎಂದು ಪಣತೊಟ್ಟಿರುವ ಮಹೇಶ್ವರ್ ರೆಡ್ಡಿ ಈ ಹಿಂದೆ ಶಾಸಕ ಶ್ರೀಧರ್ ರೆಡ್ಡಿ ಅವರ ಕಾರು ಚಾಲಕನಾಗಿ ಕೆಲಸ ಮಾಡಿದ್ದ. ಬಂಗಾರರಾಜು ಮಹೇಶ್ವರ್ ರೆಡ್ಡಿ ಅರ್ಧ ತಲೆಕೂದಲು ಮೀಸೆ ಬೋಳಿಸಿದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಕೆಲಸದ ಒತ್ತಡ: ಅಪಾರ್ಟ್​ಮೆಂಟ್​ನಿಂದ ಜಿಗಿದು ಎಂಎನ್​ಸಿ ಉದ್ಯೋಗಿ ಆತ್ಮಹತ್ಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts