More

    ಕೆಲಸದ ಒತ್ತಡ: ಅಪಾರ್ಟ್​ಮೆಂಟ್​ನಿಂದ ಜಿಗಿದು ಎಂಎನ್​ಸಿ ಉದ್ಯೋಗಿ ಆತ್ಮಹತ್ಯೆ

    ಮುಂಬೈ: ಮಹಾರಾಷ್ಟ್ರದ ಮಾತುಂಗಾ ವ್ಯಾಪ್ತಿಯಲ್ಲಿರುವ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ 25 ವರ್ಷದ ವ್ಯಕ್ತಿಯೊಬ್ಬರು ತನ್ನ ಕೆಲಸದ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಆಕಸ್ಮಿಕ ಸಾವು ಎಂದು ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

    ಇದನ್ನೂ ಓದಿ:  ಹಿಂದುತ್ವವಾದಿಗಳಿಗೆ ಟಿಕೆಟ್ ತಪ್ಪಿಸಿ ಬಿಎಸ್​ವೈ ಮೋಸ ಮಾಡಿದ್ದಾರೆ: ಸ್ಪರ್ಧೆ ಖಚಿತ ಎಂದ ಈಶ್ವರಪ್ಪ

    ಮೃತರನ್ನು ಸೌರಭ್ ಕುಮಾರ್ ಲಡ್ಡಾ ಎಂದು ಗುರುತಿಸಲಾಗಿದೆ. ರಾತ್ರಿ 11:15 ರ ಸುಮಾರಿಗೆ ವಡಾಲಾದ ತನ್ನ ಅಪಾರ್ಟ್‌ಮೆಂಟ್‌ನಿಂದ ಒಂಬತ್ತನೇ ಮಹಡಿಯ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತನ ಪೋಷಕರು ಪುಣೆಯಲ್ಲಿ ವಾಸ ಮಾಡುತ್ತಿದ್ದಾರೆ.

    ಮೃತ ಸೌರಭ್ ಕೆಲಸದ ನಿಮಿತ್ತ ಅಹಮದಾಬಾದ್‌ಗೆ ಹೋಗಿ ರಾತ್ರಿ 10:30 ರ ಸುಮಾರಿಗೆ ಬಂದಿದ್ದ ನಂತರ ಕೆಲಸ ಒತ್ತಡದಿಂದ ಅವರು ವಾಸಿಸುವ ಮನೆಯ ಬಾಲ್ಕನಿಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ.

    ಅಪಾರ್ಟ್​ಮೆಂಟ್​ನ ಸೆಕ್ಯುರಿಟಿ ಶವ ಕಂಡು, ಈ ಘಟನೆ ಕುರಿತು ಆತನ ಸ್ನೇಹಿತರು, ಸಹೋದ್ಯೋಗಿಗಳಿಗೆ ತಿಳಿಸಿದ್ದಾನೆ. ಕೂಡಲೇ ಸೌರಭ್​ನನ್ನು ಕೂಡಲೇ ಆಸ್ಪತ್ರೆಗೂ ರವಾನಿಸಲಾಗಿದೆ. ಆದರೆ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ. ಈ ಸಂಬಂಧ ಅವರ ಸ್ನೇಹಿತರು ಕುಟುಂಬ ಸದಸ್ಯರಿಗೆ ಮಾಹಿತಿ ತಿಳಿಸಿದ್ದಾರೆ. ಆಕಸ್ಮಿಕ ಸಾವಿನ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

    ಲಡ್ಡಾ ಐಐಟಿಯಿಂದ ರಾಸಾಯನಿಕ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದಾರೆ ಮತ್ತು ಐಐಎಂನಿಂದ ಎಂಬಿಎ ಮಾಡಿದ್ದಾರೆ ಎಂದು ವರದಿಯಾಗಿದೆ.
    ಸೌರಭ್​ ಅವರು ತನ್ನ ಸ್ನೇಹಿತರು ಮತಯ್ತು ಗೆಳತಿಯೊಂದಿಗೆ ವಾಟ್ಸ್​ ಆ್ಯಪ್​ ಚಾಟಿಂಗ್ ಮಾಡಿದ್ದು ಕಂಪನಿಯಲ್ಲಿ ಅನುಭವಿಸುತ್ತಿದ್ದ ಕೆಲಸದ ಒತ್ತಡದ ಬಗ್ಗೆ ಹೇಳಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಘಟನೆ ಸಂಬಂಧ ಸೌರಭ್​ ಅವರ ಪೋಷಕರು, ಅಪಾರ್ಟ್​ಮೆಂಟ್​ ನಿವಾಸಿಗಳು ಹಾಗೂ ಆತ ಕೆಲಸ ಮಾಡುತ್ತಿದ್ದ ಕಂಪನಿಯ ಸಹೋದ್ಯೋಗಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅವರು ಹೇಳಿದರು.

    ಹಿಂದುತ್ವವಾದಿಗಳಿಗೆ ಟಿಕೆಟ್ ತಪ್ಪಿಸಿ ಬಿಎಸ್​ವೈ ಮೋಸ ಮಾಡಿದ್ದಾರೆ: ಸ್ಪರ್ಧೆ ಖಚಿತ ಎಂದ ಈಶ್ವರಪ್ಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts