More

  ಇವರೇ ನೋಡಿ ಭಾರತೀಯ ಚಿತ್ರರಂಗದಲ್ಲಿ 1 ಕೋಟಿ ರೂ. ಸಂಭಾವನೆ ಪಡೆದ ಮೊದಲ ನಟಿ!

  ಮುಂಬೈ: ಸಿನಿಮಾಗಳಲ್ಲಿ ನಾಯಕ ಮತ್ತು ನಾಯಕಿಯರ ನಡುವಿನ ಸಂಭಾವನೆಯಲ್ಲಿ ಸಾಕಷ್ಟು ತಾರತಮ್ಯ ಇರುತ್ತದೆ. ನಟರಿಗೆ ಕೊಡುವಷ್ಟು ಸಂಭಾವನೆಯನ್ನು ನಟಿಯರಿಗೆ ಕೊಡುವುದಿಲ್ಲ. ಇಂದು 50 ಕೋಟಿ ರೂ. ಸಂಭಾವನೆ ಪಡೆಯುವ ನಟರೂ ಸಹ ಇದ್ದಾರೆ. ಆದರೆ, ನಟಿಯರ ವಿಚಾರಕ್ಕೆ ಬಂದರೆ ಕೋಟಿ ರೂ. ಸಂಭಾವನೆ ಪಡೆಯುವ ನಟಿಯರ ಸಂಖ್ಯೆ ತೀರಾ ಕಡಿಮೆ. ಅದರಲ್ಲೂ ಬಹಳ ವರ್ಷಗಳ ಹಿಂದೆ ನಟಿಯರಿಗೆ ಲಕ್ಷಕ್ಕಿಂತಲೂ ಕಡಿಮೆ ಸಂಭಾವನೆ ನೀಡಲಾಗುತ್ತಿತ್ತು.

  ಭಾರತೀಯ ಸಿನಿಮಾ ರಂಗದಲ್ಲೇ ಮೊಟ್ಟ ಮೊದಲ ಬಾರಿಗೆ 1 ಕೋಟಿ ರೂಪಾಯಿ ಸಂಭಾವನೆ ಪಡೆದ ನಟಿ ಯಾರೆಂಬುದು ಇದೀಗ ಬಯಲಾಗಿದೆ. ತಮಿಳು ಸಿನಿಮಾ ರಂಗದಲ್ಲಿ ಮೊದಲ ಬಾರಿ 1 ಕೋಟಿ ರೂ. ಸಂಭಾವನೆ ಪಡೆದ ನಟ ರಾಜ್​ಕಿರಣ್​. ಆ ಬಳಿಕ ರಜಿನಿಕಾಂತ್​ ಮತ್ತು ಕಮಲ್​ ಹಾಸನ್​ ಒಂದು ಕೋಟಿ ರೂ.ವರೆಗೆ ಸಂಭಾವನೆ ಹೆಚ್ಚಿಸಿಕೊಂಡರು.

  ನಟಿಯರ ವಿಚಾರಕ್ಕೆ ಬಂದರೆ ಮೊಟ್ಟ ಮೊದಲು 1 ಕೋಟಿ ರೂಪಾಯಿ ಸಂಭಾವನೆ ಪಡೆದ ನಟಿ ಯಾರೆಂದರೆ ಅದು ಶ್ರೀದೇವಿ. ಆ ಕಾಲದಲ್ಲೇ ಶ್ರೀದೇವಿ ಪ್ಯಾನ್​ ಇಂಡಿಯಾ ನಟಿಯಾಗಿದ್ದರು. ತಮಿಳು, ಹಿಂದಿ, ಮಲಯಾಳಂ ಮತ್ತು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ.

  Sridevi 2

  ಆರಂಭದ ದಿನಗಳಲ್ಲಿ ಒಂದು ಸಿನಿಮಾಗೆ 5 ಸಾವಿರ ರೂ. ಪಡೆಯುತ್ತಿದ್ದ ಶ್ರೀದೇವಿ, ವೃತ್ತಿ ಜೀವನದಲ್ಲಿ ಒಂದೊಂದೆ ಮೆಟ್ಟಿಲನ್ನು ಏರಿ 1 ಕೋಟಿ ರೂ. ಸಂಭಾವನೆ ಪಡೆಯುವ ಹಂತಕ್ಕೆ ಬೆಳೆದರು. 1983ರಲ್ಲಿ ಜೀತೇಂದ್ರ ಅವರ ಜೊತೆ ನಟಿಸಿದ ಹಿಮ್ಮತ್‌ವಾಲಾ ಚಿತ್ರದಲ್ಲಿನ ಶ್ರೀದೇವಿ ಅವರ ಪಾತ್ರವು ಎಲ್ಲರ ಗಮನವನ್ನು ಸೆಳೆಯಿತು. ಅಲ್ಲದೆ, ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಹಿಟ್ ಆಗಿತ್ತು. ಇದಾದ ಬಳಿಕ ಸರಣಿ ಹಿಟ್ ಚಿತ್ರಗಳನ್ನು ಶ್ರೀದೇವಿ ನೀಡಿದರು. ಬಳಿಕ ತಮ್ಮ ಸಂಭಾವನೆಯನ್ನು 1 ಕೋಟಿಗೆ ಏರಿಸಿಕೊಂಡರು. ಶ್ರೀದೇವಿ ನಟಿಸಿದರೆ ಸಕ್ಸಸ್​ ಗ್ಯಾರೆಂಟಿ ಎಂಬ ಮಾತಿತ್ತು. ಹೀಗಾಗಿ ಅಷ್ಟೊಂದು ಸಂಭಾವನೆಯನ್ನು ನಿರ್ಮಾಪಕರು ಕೊಡುತ್ತಿದ್ದರು. ಆ ಸಮಯದಲ್ಲಿ ಕೆಲವೇ ಕಲಾವಿದರು ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದರು. ಅವರೆಲ್ಲ ನಟರಾಗಿದ್ದರು. ಆ ಕಾಲದಲ್ಲೇ 1 ಕೋಟಿ ರೂ. ಪಡೆಯುವ ಮೂಲಕ ಶ್ರೀದೇವಿ ಅವರು ಚಿತ್ರರಂಗದಲ್ಲಿ ಇದ್ದಂತಹ ಲಿಂಗ ಆಧಾರಿತ ತಾರತಮ್ಯಕ್ಕೆ ಬ್ರೇಕ್​ ಹಾಕಿದರು. ಹಿಂದಿ ಸಿನಿಮಾವೊಂದಕ್ಕೆ ಶ್ರೀದೇವಿ 1 ಕೋಟಿ ರೂ. ಸಂಭಾವನೆ ಪಡೆದಿದ್ದರು. ಅಲ್ಲದೆ, ತಮಿಳಿನ ಮೂಂದ್ರ ಮುಡಿಚು ಸಮಯದಲ್ಲಿ ಶ್ರೀದೇವಿಗೆ ಸೂಪರ್​ಸ್ಟಾರ್​ ರಜನಿಕಾಂತ್​ಗಿಂತ ಹೆಚ್ಚು ಸಂಭಾವನೆ ನೀಡಲಾಗಿತ್ತು ಎಂದು ವರದಿಯಾಗಿದೆ.

  Sridevi 1

  ಅಂದಹಾಗೆ ಶ್ರೀದೇವಿ ಅವರು ಹೃದಯಾಘಾತದಿಂದ 2018ರಲ್ಲಿ ದುಬೈನಲ್ಲಿ ನಿಧನರಾದರು. ಆಕೆಯ ಸಾವಿನ ಸುದ್ದಿ ಅಭಿಮಾನಿಗಳಿಗೆ ಹಾಗೂ ಇಡೀ ಭಾರತೀಯ ಚಿತ್ರರಂಗಕ್ಕೆ ಆಘಾತ ಉಂಟುಮಾಡಿತು. 1990ರ ದಶಕದವರೆಗೆ ಬಾಲಿವುಡ್‌ನ ಪ್ರಮುಖ ನಟಿಯರಲ್ಲಿ ಒಬ್ಬರಾಗಿದ್ದ ಶ್ರೀದೇವಿ 2000ದ ದಶಕದಲ್ಲಿ ಹೆಚ್ಚು ಕೆಲಸ ಮಾಡಲಿಲ್ಲ. 2012 ರಲ್ಲಿ ಇಂಗ್ಲಿಷ್ ವಿಂಗ್ಲಿಷ್ ಸಿನಿಮಾದೊಂದಿಗೆ ಮರಳಿದರು. ಈ ಸಿನಿಮಾ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆಯಿತು. ಶ್ರೀದೇವಿ ಅವರು ತಮ್ಮ ನಿಧನಕ್ಕೂ ಮುಂಚೆ ನಟಿಸಿದ ಕೊನೆಯ ಚಿತ್ರ ಮಾಮ್. ಇದು ಕೂಡ ಉತ್ತಮ ಪ್ರತಿಕ್ರಿಯೆಯನ್ನು ಪಡೆಯಿತು. (ಏಜೆನ್ಸೀಸ್​)

  ಆರ್​ಸಿಬಿ ಮೇಲೆ ಯಾಕಿಷ್ಟು ಕೋಪ? WPL ಟ್ರೋಫಿ ಗೆದ್ದರೂ ನಿಲ್ಲದ ನಿಂದನೆ, ಅಭಿಮಾನಿಗಳಿಗೆ ಬೇಸರ

  ಏಳು ತಿಂಗಳ ಗರ್ಭಿಣಿ ಮಾಡೋ ಕೆಲಸನಾ ಇದು? ನಟಿ ಅಮಲಾ ಪೌಲ್​ಗೆ ನೆಟ್ಟಿಗರ ತರಾಟೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts