

ಮುಂಬೈ: ಮೈಮೇಲೆ ಬಟ್ಟೆ ಹಾಕುವುದಕ್ಕೆ ತದ್ವಿರುದ್ಧ ಎನ್ನುವಂತೆ ವರ್ತಿಸುವ ಪೂನಂ ಪಾಂಡೆ ಯಾರಿಗೆ ತಾನೇ ಗೊತ್ತಲ್ಲ ಹೇಳಿ? ತನ್ನ ಸಾವಿನ ನಾಟಕವನ್ನಾಡಿದ್ದ ಈ ವೈಯ್ಯಾರಿ, ಪ್ರಚಾರದ ತೆವಲು ಏನು ಬೇಕಾದರೂ ಮಾಡಿಸುತ್ತೆ ಅನ್ನುವುದಕ್ಕೆ ಜ್ವಲಂತ ಉದಾಹರಣೆಯಾಗಿ ನಿಲ್ಲುತ್ತಾಳೆ. ಇಂತಹ ಪೂನಂಳ ಬಟ್ಟೆ ಪಬ್ಲಿಕ್ ನಲ್ಲಿಯೇ ಜಾರಿಬಿದ್ದಿದೆ. ಇದರ ಪರಿಣಾಮ ಮಾನ ಮೂರಾಬಟ್ಟೆಯಾಗಿದೆ.
ಹಾಫ್ ಶೋಲ್ಡರ್ ಬಟ್ಟೆ ಧರಿಸಿ ಬಂದಿದ್ದ ಪೂನಂ, ಕ್ಯಾಮರಾ ಮುಂದೆ ಬಂದು ನಿಲ್ಲುವುದೇ ತಡ.. ನೋಡ ನೋಡುತ್ತಿದ್ದಂತೆ ಎದೆ ಮೇಲಿಂದ ಬಟ್ಟೆ ಜಾರಿದೆ. ಬಳಿಕ ಹೇಗೋ ಬಟ್ಟೆಯನ್ನ ಪೂನಂ ಸರಿ ಮಾಡಿಕೊಂಡಳಾದರೂ ಮಾನ ಹೋಗಿಯಾಗಿತ್ತು.
ಪೂನಂ ಪಾಂಡೆ ಬೇಕಂತಲೇ ಇಂತಹ ಬಟ್ಟೆಯನ್ನ ಹಾಕಿಕೊಂಡಿದ್ದಳು ಎನ್ನುವ ಅನುಮಾನ ಈಗ ನೆಟ್ಟಿಗರನ್ನು ಕಾಡುತ್ತಿದೆ. ಇದಕ್ಕೆ ಪೂರಕವಾಗಿ ಇದೇ ಬಟ್ಟೆಯಲ್ಲಿ ಮುಂಬೈನ ಬೀದಿಯಲ್ಲಿ ರಾತ್ರಿ ಸುತ್ತಾಡಿದ ಇನ್ನೊಂದು ವಿಡಿಯೋ ಕೂಡ ವೈರಲ್ ಆಗಿದೆ.
ವೈರಲ್ ಆದ ಈ ವಿಡಿಯೋದಲ್ಲಿ ಪೂನಂ ಪಾಂಡೆಯ ಎದೆ ಭಾಗದಲ್ಲಿ ನೋಡಬಾರದ್ದನ್ನು ನೋಡಿದ ಸಾಮಾಜಿಕ ಜಾಲತಾಣದ ಸಕ್ರಿಯ ಸದಸ್ಯರು, ಸದ್ಯಕ್ಕೆ ಪೂನಂಳನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
ಮೂರು ಬಿಟ್ಟವರು ಊರಿಗೆ ದೊಡ್ಡವರು ಎಂದು ದೊಡ್ಡವರು ನಿಮ್ಮಂಥವರನ್ನು ನೋಡಿಯೇ ಹೇಳಿದ್ದಾರೆ ಎಂದು ಕಿಡಿ ಕಾರುತ್ತಿದ್ದಾರೆ.
ಅವಕಾಶಗಳಿಗೆ ಹಾಗೂ ಪ್ರಚಾರಕ್ಕಾಗಿ ಇಷ್ಟೊಂದು ಕೀಳು ಮಟ್ಟಕ್ಕೆ ಇಳಿಯಬಾರದು ಎಂದು ಹಲವರು ಹೇಳಿದರೆ, ಅನೇಕರು, ನಂಗಾ ನಾಚ್ ಗೆ ಪೂನಂ ಪಾಂಡೆಯನ್ನು ಯಾರಾದರೂ ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಿಸಿಕೊಳ್ರೋ ಎಂದು ತಮ್ಮ ಆಕ್ರೋಶವನ್ನೂ ಹೊರ ಹಾಕುತ್ತಿದ್ದಾರೆ.
ಇನ್ನೂ ಕೆಲವರು ಹೆಣ್ಣು ಕುಲಕ್ಕೆ ಪೂನಂ ಕಳಂಕ ಎಂದರೆ, ಮತ್ತೆ ಕೆಲವರು ಬಟ್ಟೆ ಹಾಕಿಕೊಳ್ಳಲು ಬರುವುದಿಲ್ಲವೇ ಎನ್ನುತ್ತಿದ್ದಾರೆ. ಈ ತರಹದ ಬಟ್ಟೆಯನ್ನ ಹಾಕಿಕೊಳ್ಳುವುದಾದರೂ ಯಾಕೆ? ರಸ್ತೆಗೆ ಬರುವುದು ಯಾಕೆ ಎನ್ನುವ ಪ್ರಶ್ನೆಯನ್ನೂ ಮಾಡುತ್ತಿದ್ದಾರೆ.
ಬಹುತೇಕರು ಪೂನಂ ಪಾಂಡೆಯ ಸಾವಿನ ಸುದ್ದಿ ನಿಜವಾಗಬೇಕಿತ್ತು ಎಂದು ಸಂತಾಪವನ್ನೂ ಸಾಮಾಜಿಕ ಜಾಲತಾಣದಲ್ಲಿ ಸೂಚಿಸುತ್ತಿದ್ದಾರೆ.
ಅಂದ ಹಾಗೆ ಸಾರ್ವಜನಿಕ ಸ್ಥಳದಲ್ಲಿ ಪೂನಂ ಪಾಂಡೆ ಬಟ್ಟೆ ಜಾರಿದ್ದು ಇದು ಮೊದಲೇನಲ್ಲ. ಈ ಹಿಂದೆಯೂ ಕೂಡ ಅನೇಕ ಬಾರಿ ಇದೇ ರೀತಿ ಚಮಕ್ ಕೊಟ್ಟಿದ್ದಾಳೆ. ಆದರೆ ಆಗೆಲ್ಲ ಸಭ್ಯತೆಯ ಗಡಿಯನ್ನು ಪೂನಂ ಪಾಂಡೆ ದಾಟಿರಲಿಲ್ಲ. ಈ ಬಾರಿ..ಮೀತಿ ಮೀರಿದೆ.
ಹೀಗಾಗಿಯೇ ಮೊನ್ನೆವರೆಗೆ ಪೂನಂ ಪಾಂಡೆಯ ಡ್ರೆಸ್ಸಿಂಗ್ ಸೆನ್ಸ್ ಕಡೆಗಣಿಸುತ್ತಿದ್ದವರೆಲ್ಲ ಈಗ ಕಣ್ಣು ಕೆಂಪು ಮಾಡಿಕೊಂಡಿದ್ದಾರೆ. ತಪರಾಕಿಯನ್ನೂ ಹಾಕುತ್ತಿದ್ದಾರೆ.