More

  ಬಾಯಿ ವಾಸನೆ ಹೋಗಲಾಡಿಸುತ್ತದೆ ಸೌತೆಕಾಯಿ! ಹೇಗೆ ಅಂತೀರಾ? ಇಲ್ಲಿದೆ ಉಪಯುಕ್ತ ಮಾಹಿತಿ

  ಬೆಂಗಳೂರು: ಸಾಮಾನ್ಯವಾಗಿ ಬೆವರಿದಾಗ ದೇಹ ದರ್ವಾಸನೆ ಬರುತ್ತದೆ. ಇದು ಇತರರಿಗೆ ಕಿರಿಕಿರಿ ಜತೆಗೆ ಮುಜುಗರವೂ ಉಂಟುಮಾಡುತ್ತದೆ. ಇದಕ್ಕೆ ನಾವು ಸುಗಂಧ ದ್ರವ್ಯ ಇತ್ಯಾದಿಗಳನ್ನು ಬಳಸಿ, ವಾಸನೆ ತಡೆಗಟ್ಟುತ್ತೇವೆ. ಆದರೆ, ಬಾಯಿ ವಾಸನೆ ಸಮಸ್ಯೆಗೆ ಏನಪ್ಪಾ ಮಾಡೋದು? ಇದರಿಂದ ಮುಕ್ತಿ ಹೊಂದುವುದು ಹೇಗೆ ಎಂದು ಹಲವರು ಚಿಂತಿಸುತ್ತಾರೆ. ಅದಕ್ಕೆ ಇಲ್ಲಿದೆ ಸರಳ ಉಪಾಯ.

  ಇದನ್ನೂ ಓದಿ: ‘ಈ ಸಲ ಕಪ್​ ನಮ್ದೇ ಅಲ್ಲ…..’ ವೈರಲ್ ಆಗ್ತಿದೆ ಆರ್​​ಸಿಬಿ ಫ್ಯಾನ್ಸ್​ಗಳ ಹೊಸ ಸಾಲು

  ಬೆಳಗ್ಗೆ ಎದ್ದಾಗ ನಮ್ಮ ಬಾಯಿ ವಾಸನೆ ಬರುವುದು ಸಾಮಾನ್ಯ. ಕೂಡಲೇ ಬ್ರಶ್​ ಮಾಡಿ, ಹಲ್ಲು-ನಾಲಿಗೆಯನ್ನು ಉಜ್ಜಿ ಬಾಯನ್ನು ಸ್ವಚ್ಛಗೊಳಿಸುತ್ತೇವೆ. ಆದರೂ ಸಹ ಕೆಲವರಿಗೆ ಬಾಯಿಯಿಂದ ಬರುವ ದರ್ವಾಸನೆ ಕಡಿಮೆಯಾಗುವುದಿಲ್ಲ. ಇದರಿಂದ ಇತರರೊಂದಿಗೆ ಬಾಯ್ಬಿಟ್ಟು ಮಾತನಾಡುವುದಕ್ಕೆ ಅನೇಕರು ಮುಜುಗರ ಪಡುತ್ತಾರೆ.

  ಬಾಯಿಯನ್ನು ಸ್ವಚ್ಛವಾಗಿರಿಸಿಕೊಳ್ಳದಿದ್ದರೆ ಬ್ಯಾಕ್ಟೀರಿಯಾ ಆವರಿಸಿಕೊಳ್ಳುತ್ತದೆ. ಇದರಿಂದ ಬಾಯಿಯ ವಾಸನೆ ಕೂಡ ಹೆಚ್ಚಾಗುತ್ತದೆ. ಹಾಗಾದ್ರೆ ಈ ಸಮಸ್ಯೆಯನ್ನು ಸೌತೆಕಾಯಿ ಹೇಗೆ ನಿವಾರಿಸುತ್ತದೆ ಎಂಬುದನ್ನು ನೋಡುವುದಾದರೆ, ಸೌತೆಕಾಯಿಯ ಒಂದು ತುಂಡು ನಿಮ್ಮ ಬಾಯಿಯ ದುರ್ವಾಸನೆ ಹೋಗಲಾಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

  ಇದನ್ನೂ ಓದಿ: ಸಮಾಜ ಸೇವೆ, ಅಭಿವೃದ್ಧಿ ಕಾರ್ಯಕ್ಕೆ ಸದಾ ಸಿದ್ಧ: ವೇಲು ನಾಯ್ಕರ್ ಗುರಿ, ರಾಜಕಾರಣಿಯಾಗಿ ಜನಸೇವೆಯಲ್ಲೇ ಸಂತೃಪ್ತಿ

  ಒಂದು ಸೌತೆಕಾಯಿಯ ತುಂಡನ್ನು ನಾಲಿಗೆ ಮತ್ತು ನಾಲಿಗೆಯ ಮೇಲ್ಭಾಗಕ್ಕೆ ತಗಲುವಂತೆ 90ಸೆಕೆಂಡ್​ ಅಥವಾ ಒಂದು ನಿಮಿಷ ಇಟ್ಟುಕೊಳ್ಳಿ. ಇದರಿಂದ ಫೈಟೋಕೆಮಿಕಲ್ ಅಂಶವು ಬ್ಯಾಕ್ಟಿರೀಯಾವನ್ನು ನಾಶಪಡಿಸುವ ಮೂಲಕ ಬಾಯಿಯಿಂದ ಬರುವ ದರ್ವಾಸನೆಯನ್ನು ತಡೆಗಟ್ಟುತ್ತದೆ.

  ವಿಶೇಷ ಸೂಚನೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

  ಕರ್ನಾಟಕದಲ್ಲಿ ಮಲಯಾಳಂ ಚಿತ್ರದ ಅಬ್ಬರ! ಕನ್ನಡ ಚಿತ್ರಗಳನ್ನು ನೋಡೋರೇ ಇಲ್ವೇ?

  ‘ಇದೆಲ್ಲವೂ ನನ್ನ ಕುಟುಂಬದ ಮೇಲೆ ಪರಿಣಾಮ ಬೀರಿದೆ’; ಕಡೆಗೂ ಮೌನ ಮುರಿದ ಚಹಲ್ ಪತ್ನಿ!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts