More

    ‘ಈ ಸಲ ಕಪ್​ ನಮ್ದೇ ಅಲ್ಲ…..’ ವೈರಲ್ ಆಗ್ತಿದೆ ಆರ್​​ಸಿಬಿ ಫ್ಯಾನ್ಸ್​ಗಳ ಹೊಸ ಸಾಲು

    ಬೆಂಗಳೂರು: ಭಾನುವಾರ (ಮಾರ್ಚ್​ 17) ರಾಷ್ಟ್ರ ರಾಜಧಾನಿ ದೆಹಲಿಯ ಅರುಣ್​ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ವುಮೆನ್ಸ್ ಪ್ರೀಮಿಯರ್ ಲೀಗ್ (WPL) ಎರಡನೇ ಆವೃತ್ತಿಯ ಫೈನಲ್​ ಪಂದ್ಯದಲ್ಲಿ ಸ್ಮೃತಿ ಮಂದಾನ ಕ್ಯಾಪ್ಟನ್ಸಿಯ ಆರ್​ಸಿಬಿ ತಂಡ ಭರ್ಜರಿ ಜಯ ದಾಖಲಿಸುವ ಮೂಲಕ ಚೊಚ್ಚಲ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಈ ಗೆಲವು ವುಮೆನ್ಸ್​ ಪ್ರೀಮಿಯರ್​ ಲೀಗ್​​ನಲ್ಲಿ​​ ಹೊಸ ಇತಿಹಾಸ ಬರೆಯುವುದರ ಜತೆಗೆ ಆರ್​ಸಿಬಿ ಅಭಿಮಾನಿಗಳಲ್ಲಿ ಹೊಸ ಚೈತನ್ಯ ತಂದಿದೆ.

    ಇದನ್ನೂ ಓದಿ: ಸಮಾಜದಲ್ಲಿ ಆರೆಸ್ಸೆಸ್ ಪ್ರಭಾವ ವೃದ್ಧಿಗೆ ಸಂತಸ: ಪ್ರಧಾನ ಕಾರ್ಯದರ್ಶಿಯಾಗಿ ಕರ್ನಾಟಕದ ಹೊಸಬಾಳೆ ಪುನರಾಯ್ಕೆ

    ಡಬ್ಲ್ಯೂಪಿಎಲ್​ 2024ರ ಆವೃತ್ತಿಯಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಫೈನಲ್​ ಪ್ರವೇಶಿಸಿದ ಆರ್​ಸಿಬಿ ತಂಡ, ಅಂತಿಮ ಹಣಾಹಣಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ 8 ವಿಕೆಟ್​ಗಳ ಭರ್ಜರಿ ಗೆಲುವನ್ನು ದಾಖಲಿಸಿತು. ಚೊಚ್ಚಲ ಪ್ರಶಸ್ತಿ ಮುಡಿಗೇರಿಸಿಕೊಂಡ ಆರ್​ಸಿಬಿ ವನಿತೆಯರಿಗೆ ದೇಶವ್ಯಾಪಿ ಕ್ರಿಕೆಟ್ ಅಭಿಮಾನಿಗಳಿಂದ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.

    ಇನ್ನು ಇದರ ಬೆನ್ನಲ್ಲೇ ಭಾರೀ ಸಂತಸದಲ್ಲಿರುವ ಆರ್​ಸಿಬಿ ಅಭಿಮಾನಿಗಳು ಇದು ನಮಗೆ ಅತ್ಯಂತ ಖುಷಿಯ ಸಂದರ್ಭ ಎಂದು ವ್ಯಕ್ತಪಡಿಸಿದ್ದಾರೆ. ಐಪಿಎಲ್​ನಲ್ಲಿ ಪುರುಷರ ತಂಡವು ಇಲ್ಲಿಯವರೆಗೆ ಒಂದು ಬಾರಿಯೂ ಕಪ್​ ಗೆದ್ದಿರಲಿಲ್ಲ. ಇದರಿಂದ ಫ್ಯಾನ್ಸ್​ ಭಾರೀ ನಿರಾಸೆಯಲ್ಲಿದ್ದರು. ಆದರೆ, ಇದೀಗ ಮಹಿಳಾ ಮಣಿಯರು ಟ್ರೋಫಿ ಗೆದ್ದಿದ್ದು, ಆರ್​ಸಿಬಿಗೆ ಫ್ಯಾನ್ಸ್​ಗೆ ಆನೆಬಲ ಬಂದಂತಾಗಿದೆ.

    ಇದನ್ನೂ ಓದಿ: ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಅಧಿಕ ಧನಾಗಮನ, ಉತ್ತಮ ಹೆಸರು, ಗೌರವ, ಕೀರ್ತಿ, ಪ್ರತಿಷ್ಠೆ

    ಐಪಿಎಲ್​ನಲ್ಲಿರುವ 10 ತಂಡಗಳ ಪೈಕಿ ಅತ್ಯಂತ ಹೆಚ್ಚಿನ ಹಾಗೂ ಪ್ರೀತಿಯ ಅಭಿಮಾನಿಗಳನ್ನು ಹೊಂದಿರುವ ತಂಡ ಎಂದರೆ ಅದು ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್​ ಬೆಂಗಳೂರು. ಪ್ರತಿಬಾರಿಯ ಐಪಿಎಲ್ ಸೀಸನ್​ ಪ್ರಾರಂಭದಿಂದ ಅಂತ್ಯದವರೆಗೂ ಸೋಲೇ ಇರಲಿ, ಗೆಲುವೇ ಇರಲಿ ಒಂದೇ ರೀತಿಯಲ್ಲಿ ಪ್ರೀತಿ ವ್ಯಕ್ತಪಡಿಸುವ ಅಭಿಮಾನಿಗಳು, ಸದಾ ಸ್ಟೇಡಿಯಂನಲ್ಲಿ ಕೂಗುತ್ತಿದದ್ದು ಒಂದೇ ಒಂದು ಘೋಷಣೆ ‘ಈ ಸಲ ಕಪ್ ನಮ್ದೇ’!

    ಕಳೆದ ಹಲವಾರು ವರ್ಷಗಳಿಂದ ಈ ಸಲ ಕಪ್ ನಮ್ದೆ ಎಂದೇಳುತ್ತಿದ್ದ ಅಭಿಮಾನಿಗಳಿಗೆ ಇದು ಯಾವಾಗ ಈಡೇರುತ್ತದೆ ಎಂಬ ಚಿಂತೆ ಮನದೊಳಗೆ ಕಾಡುತ್ತಿತ್ತು. ಆದ್ರೆ, ಈಗ ಇದಕ್ಕೆ ಮೊದಲ ಹಂತದ ತೆರೆ ಬಿದ್ದಿದ್ದು, ಆರ್​ಸಿಬಿ ವನಿತೆಯರ ಟ್ರೋಫಿ ಗೆಲುವು ಈ ಮಾತನ್ನು ನಿಜ ಮಾಡಿದೆ. ಇದರ ಬೆನ್ನಲ್ಲೇ ಆರ್​ಸಿಬಿ ಫ್ಯಾನ್ಸ್​ಗಳಲ್ಲಿ ಭರವಸೆ ಹೆಚ್ಚಾಗಿದ್ದು, ಇಷ್ಟು ವರ್ಷ ಈ ಸಲ ಕಪ್ ನಮ್ದೆ ಎನ್ನುತ್ತಿದ್ದವರು ಈಗ ಈ ಸಲ ಕಪ್​ ನಮ್ದೇ ಅಲ್ಲ.. ನಮ್ದು ಎಂದು ಕರೆಯಲು ಸ್ಟಾರ್ಟ್​ ಮಾಡಿದ್ದಾರೆ.

    ಇದನ್ನೂ ಓದಿ: ಅಮಾಯಕರಿಗೆ ಡಿಜಿ ಕೋಳ! ಸೈಬರ್ ಅಪರಾಧದ ಹೆಸರಿನಲ್ಲಿ ಆನ್​ಲೈನ್​ನಲ್ಲೇ ವಂಚಕರ ಗಾಳ

    ಈ ಸಲ ಕಪ್ ನಮ್ದು ಎಂದೇಳುವ ಮೂಲಕ ಐಪಿಎಲ್​ನಲ್ಲಿ ಪುರುಷರ ತಂಡ ಈ ಬಾರಿ ಟ್ರೋಫಿ ಎತ್ತುವುದು ಖಚಿತ, ಖಂಡಿತ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆರ್​ಸಿಬಿ 2024ರ ಚಾಂಪಿಯನ್ಸ್​ ಆಗ್ತಾರೆ ಎಂದು ಅಭಿಮಾನಿಗಳು ಭವಿಷ್ಯ ನುಡಿಯುತ್ತಿದ್ದಾರೆ. ಸದ್ಯ ಇದು ನಿಜವಾಗಲಿದೆಯೇ? ಫ್ಯಾನ್ಸ್​ಗಳ ಆಶಯ ಈಡೇರಲಿದ್ಯಾ? ಎಂಬ ಪ್ರಶ್ನೆಗೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ,(ಏಜೆನ್ಸೀಸ್).

    ಕಪ್​ ಎತ್ತಿದ ಆರ್​ಸಿಬಿ ಹೆಣ್ಣು ಹುಲಿಗಳು! ಪುರುಷರ ಟೀಮ್​​ ಐಪಿಎಲ್ ಗೆದ್ರೆ ವಿಜಯ್ ಮಲ್ಯ ಭಾರತಕ್ಕೆ?

    ‘ಇದೆಲ್ಲವೂ ನನ್ನ ಕುಟುಂಬದ ಮೇಲೆ ಪರಿಣಾಮ ಬೀರಿದೆ’; ಕಡೆಗೂ ಮೌನ ಮುರಿದ ಚಹಲ್ ಪತ್ನಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts