More

    ಸಮಾಜ ಸೇವೆ, ಅಭಿವೃದ್ಧಿ ಕಾರ್ಯಕ್ಕೆ ಸದಾ ಸಿದ್ಧ: ವೇಲು ನಾಯ್ಕರ್ ಗುರಿ, ರಾಜಕಾರಣಿಯಾಗಿ ಜನಸೇವೆಯಲ್ಲೇ ಸಂತೃಪ್ತಿ

    ವಾರ್ಡ್​ಗಳು ಅಭಿವೃದ್ಧಿಗೊಂಡರೆ ಕ್ಷೇತ್ರ ಅಭಿವೃದ್ಧಿಯಾಗುತ್ತದೆ. ಅಂತೆಯೇ ನಗರವೂ ಅಭಿವೃದ್ಧಿಯಾಗುತ್ತದೆ ಎಂಬುದನ್ನು ನಂಬಿರುವ ವೇಲು ನಾಯ್ಕರ್, ಜನಸೇವಕರಾಗಿ ಅಭಿವೃದ್ಧಿ ಕಾರ್ಯಗಳಿಗೆ ಹಗಲಿರುಳು ಶ್ರಮಿಸಿದ್ದಾರೆ. ಅವರ ವಾರ್ಡ್​ನಲ್ಲಿರುವ ಎಲ್ಲ ರಸ್ತೆಗಳು ಅಭಿವೃದ್ಧಿಯಾಗಿವೆ. ರಸ್ತೆ, ಚರಂಡಿ, ಕುಡಿಯುವ ನೀರು, ತ್ಯಾಜ್ಯ ವಿಲೇವಾರಿ ಮತ್ತಿತರ ಸಮಸ್ಯೆಗಳನ್ನು ಬಗೆಹರಿಸಿದ್ದಾರೆ. ಕೊಳೆಗೇರಿಗಳನ್ನು ಮೇಲ್ದರ್ಜೆಗೇರಿಸಿರುವ ಕೀರ್ತಿಯೂ ಅವರಿಗೆ ಸಲ್ಲುತ್ತದೆ. ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸಿ ಉತ್ತಮ ಪರಿಹಾರ ಒದಗಿಸಿಕೊಡಲು ದುಡಿದಿರುವ ವೇಲು ನಾಯ್ಕರ್, ವಿಜಯವಾಣಿ ನೀಡುವ ‘ಬೆಂಗಳೂರು ರತ್ನ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.

    ಬೆಂಗಳೂರು: ಕಾಲೇಜು ದಿಸೆಯಲ್ಲಿ ರಾಜಕಾರಣಕ್ಕೆ ಧುಮುಕಿ ಸಮಾಜ ಸೇವಕರಾಗಿ ಗುರುತಿಸಿಕೊಂಡು, ಜನರ ಪ್ರೀತಿ- ವಿಶ್ವಾಸ- ಆಶೀರ್ವಾದಗಳಿಂದಲೇ ಬಿಬಿಎಂಪಿ ಸದಸ್ಯರಾಗಿ ಆಯ್ಕೆಯಾಗಿ ಜನಸೇವೆ ಮಾಡಿದ ನಾಯಕ ವೇಲು ನಾಯ್ಕರ್. ವಿದ್ಯಾವಂತರಾಗಿರುವ ಅವರು ಮಕ್ಕಳನ್ನು ಓದಿಸಿ ಸಮಾಜ ಸೇವೆಗೆ ಸಿದ್ಧ ಮಾಡುತ್ತಿದ್ದಾರೆ. ಯಶವಂತಪುರದಲ್ಲಿ ಹುಟ್ಟಿ ಬೆಳೆದಿದ್ದು, ಎಂ.ಎ. ಓದಿದ್ದಾರೆ. ತಂದೆ ಮುರುಗೇಶ್, ತಾಯಿ ವಲ್ಲಿಯಮ್ಮ, ಪತ್ನಿ ಕಾವೇರಿ ಅಪೂರ್ವ ಗೃಹಿಣಿಯಾಗಿದ್ದಾರೆ. ವೇಲು ನಾಯ್ಕರ್ ದಂಪತಿಗೆ ಭಾವನಾ, ರಾಮ್​ಪ್ರಸಾದ್​ ಎಂಬ ಇಬ್ಬರು ಮಕ್ಕಳಿದ್ದಾರೆ. ಭಾವನಾ ಎಂಬಿಬಿಎಸ್ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದು, ರಾಮ್್ರಸಾದ್ ಎಲ್​ಎಲ್​ಬಿ ಮೊದಲ ವರ್ಷದಲ್ಲಿ ಓದುತ್ತಿದ್ದಾರೆ. 1991ರಲ್ಲಿ ಆರ್.ಸಿ. ಕಾಲೇಜಿನಲ್ಲಿ ಬಿಕಾಂ ಓದುತ್ತಿದ್ದಾಗ ಕಾಲೇಜಿನಲ್ಲಿ ನಡೆದ ಎನ್​ಎಸ್​ಯುು ಚುನಾವಣೆಯಲ್ಲಿ ಸ್ಪರ್ಧಿಸಿ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಆ ಸಮಯದಲ್ಲಿ ಸಲೀಂ ಅಹಮ್ಮದ್ ಅವರು ಎನ್​ಎಸ್​ಯುು ರಾಜ್ಯಾಧ್ಯಕ್ಷರಾಗಿದ್ದರು. ಅವರೊಂದಿಗಿನ ಒಡನಾಟದಿಂದ ರಾಜಕೀಯ ಜೀವನ ಆರಂಭವಾಯಿತು. ನಂತರ ಎನ್​ಎಸ್​ಯುುನಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿದ್ದರು. ದಿನೇಶ್ ಗುಂಡೂರಾವ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ವೇಳೆ ವೇಲು, ಬೆಂಗಳೂರು ನಗರ ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿದ್ದರು. 2008ರಿಂದ 2015ರವರೆಗೆ ಯಶವಂತಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. 2018-19 ಅಕೌಂಟ್ಸ್ ಕಮಿಟಿ ಚೇರ್ಮನ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಸುದೀರ್ಘ 32 ವರ್ಷಗಳ ಕಾಲ ರಾಜಕೀಯದಲ್ಲಿದ್ದು ಜನರ ಸೇವೆ ಮಾಡಿದ್ದಾರೆ.

    Velu Naykar

    ಕರೊನಾ ಸಾಂಕ್ರಾಮಿಕ ವೇಳೆ ಸಹಾಯ
    ಕರೊನಾ ಸಂದರ್ಭದಲ್ಲಿ ವೇಲು ಅವರು ಹೆಚ್ಚಿನ ಸಮಯವನ್ನು ಜನರ ಸೇವೆಗಾಗಿಯೇ ಮುಡಿಪಾಗಿಟ್ಟಿದ್ದರು. ಆ ಸಂದರ್ಭದಲ್ಲಿ ಬೆಳಗ್ಗೆ 5 ಗಂಟೆಗೆ ಎದ್ದು, ರಾತ್ರಿ 10 ಗಂಟೆಯವರೆಗೂ ವಾರ್ಡ್​ನಲ್ಲಿರುವ ಸಾರ್ವಜನಿಕರಿಗೆ ತಮ್ಮ ಕೈಲಾದ ಸಹಾಯವನ್ನು ಮಾಡಿದ್ದರು. ಯಶವಂತಪುರ ಆರ್​ಎಂಸಿ ಯಾರ್ಡ್​ಗೆ ಬರುವ ರೈತರಿಂದ ತರಕಾರಿ ಖರೀದಿಸಿ ವಾಹನದಲ್ಲಿ ತಂದು ವಾರ್ಡ್​ನಾದ್ಯಂತ ಉಚಿತವಾಗಿ ಹಂಚಿದ್ದರು. ಇದರಿಂದ ರೈತರಿಗೂ ಸಹಾಯವಾಗಿತ್ತು. ವಾರ್ಡ್​ನಲ್ಲಿರುವ ಕೊಳೆಗೇರಿ ನಿವಾಸಿಗಳಿಗೆ ಉಚಿತ ಆಹಾರ ಪೊಟ್ಟಣಗಳನ್ನು ವಿತರಿಸಿದ್ದರು. 10 ಸಾವಿರ ಆಹಾರ ಕಿಟ್ ಹಾಗೂ 5 ಸಾವಿರ ದಿನಸಿ ಕಿಟ್​ಗಳನ್ನು ವಿತರಿಸಿದ್ದಾರೆ. ಬಿಬಿಎಂಪಿ ವಾಹನದ ಮೂಲಕ ವಾರ್ಡ್​ನಲ್ಲಿ ತಾವೇ ನಿಂತು ಸ್ಯಾನಿಟೈಸ್ ಮಾಡಿಸಿದ್ದರು. ಮನೆ ಮನೆಗೆ ಸ್ಯಾನಿಟೈಸರ್, ಮಾಸ್ಕ್, ಗ್ಲೌವ್ಸ್, ಹ್ಯಾಂಡ್​ವಾಶ್ ಮತ್ತಿತರ ಉಪಕರಣಗಳನ್ನು ವಿತರಣೆ ಮಾಡಿದ್ದರು.

    ಮತ್ತೆ ಟಿಕೆಟ್ ಕೊಟ್ಟರೆ ಜನರ ಸೇವೆ

    ಸದ್ಯ ಲಕ್ಷ್ಮೀದೇವಿ ವಾರ್ಡ್​ನಲ್ಲಿ ಜನರ ಸೇವೆ ಮಾಡಿಕೊಂಡು ಬರುತ್ತಿದ್ದೇನೆ. ನನ್ನ ಈ ಸೇವೆಯನ್ನು ಗುರುತಿಸಿ ಪಕ್ಷದ ನಾಯಕರು ಮತ್ತೆ ಇದೇ ವಾರ್ಡ್​ನಿಂದ ಟಿಕೆಟ್ ಕೊಟ್ಟರೆ ಅಥವಾ ಆರ್.ಆರ್. ನಗರ ವಿಧಾನಸಭಾ ಕ್ಷೇತ್ರದ ಯಾವುದೇ ವಾರ್ಡ್ ನಿಂದಲೂ ಟಿಕೆಟ್ ಕೊಟ್ಟರೆ ಚುನಾವಣೆಗೆ ಸ್ಪರ್ಧಿಸಿ ಗೆದ್ದು ಮತ್ತೆ ಜನರ ಸೇವೆ ಮಾಡಲು ಸಿದ್ಧನಿದ್ದೇನೆ ಎನ್ನುತ್ತಾರೆ ವೇಲು ನಾಯ್ಕರ್.

    ನಾಯ್ಕರ್ ಹೇಳೋದೇನು?
    ವಾರ್ಡ್​ಗಳು ಅಭಿವೃದ್ಧಿಗೊಂಡರೆ ಕ್ಷೇತ್ರ ಅಭಿವೃದ್ಧಿಯಾಗುತ್ತದೆ. ಅಂತೆಯೇ ನಗರವೂ ಅಭಿವೃದ್ಧಿಯಾಗುತ್ತದೆ. ಜನಸೇವಕನಾಗಿ ನನ್ನ ಕೈಲಾದ ಮಟ್ಟಿಗೆ ಅಭಿವೃದ್ಧಿ ಕಾರ್ಯಗಳಿಗೆ ಹಗಲಿರಳು ಶ್ರಮಿಸಿದ್ದೇನೆ. ನನ್ನ ವಾರ್ಡ್​ನಲ್ಲಿರುವ ಎಲ್ಲ ರಸ್ತೆಗಳು ಅಭಿವೃದ್ಧಿಯಾಗಿವೆ. ನನ್ನ ಅವಧಿಯಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರು, ತ್ಯಾಜ್ಯ ವಿಲೇವಾರಿ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲಾಗಿದೆ ಮತ್ತು ಸ್ಲಂಗಳನ್ನು ಮೇಲ್ದರ್ಜೆಗೆರಿಸಲಾಗಿದೆ. ಗ್ರಂಥಾಲಯ ಮತ್ತು ಉದ್ಯಾನವನಗಳ ಸಮರ್ಪಕ ನಿರ್ವಹಣೆ ಮುಂತಾದ ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ಒದಗಿಸಿಕೊಡಲು ಅವಿರತವಾಗಿ ದುಡಿದಿದ್ದೇನೆ. ಪಾಲಿಕೆ ಸದಸ್ಯನಾಗಿ ಅದಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡಿದ ಸಂತೃಪ್ತ ಮನೋಭಾವವಿದೆ ಎನ್ನುತ್ತಾರೆ ವೇಲು ನಾಯ್ಕರ್.

    ಕಾಪೋರೇಟರ್ ಆಗಿ ಸ್ಮರಣೀಯ ಕೆಲಸ
    2015ರಲ್ಲಿ ನಡೆದ ಬಿಬಿಎಂಪಿ ಚುನಾವಣೆಯಲ್ಲಿ ಲಕ್ಷ್ಮೀದೇವಿನಗರ (ವಾರ್ಡ್ ಸಂ. 42) ವಾರ್ಡ್​ನಿಂದ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ ವೇಲು, 3,700 ಮತಗಳ ಅಂತರದಿಂದ ಜಯಶೀಲರಾಗಿದ್ದರು. ವೇಲು ಆಯ್ಕೆಯಾಗಿದ್ದ ಲಕ್ಷ್ಮೀದೇವಿನಗರ ವಾರ್ಡ್ ಮಧ್ಯೆ ರಿಂಗ್ ರಸ್ತೆ ಹಾದು ಹೋಗಿದ್ದು, ಈ ರಸ್ತೆಯಲ್ಲಿ ಶಾಲಾಮಕ್ಕಳು, ವೃದ್ಧರು ಆ ರಸ್ತೆಯನ್ನು ದಾಟಲು ಹರಸಾಹಸ ಪಡುತ್ತಿದ್ದರು. ಹಲವು ಮಂದಿ ಅಪಘಾತಕ್ಕೀಡಾಗಿದ್ದರು. ಇದನ್ನು ಮನಗಂಡ ವೇಲು ನಾಯ್ಕರ್, 2017ರಲ್ಲಿ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಂದು ಆರಂಭದಲ್ಲಿ ಫ್ಲೈಓವರ್ ಮಾಡಲು ಮುಂದಾದರು. ಆದರೆ, ಫ್ಲೈ ಓವರ್ ಹತ್ತಿ ಇಳಿಯುವುದು ಕಷ್ಟ ಎಂದು ಸ್ಥಳೀಯರು ಕಾಪೋರೇಟರ್ ಬಳಿ ಅಳಲು ತೋಡಿಕೊಂಡರು. ಅವರ ಮನವಿಗೆ ಸ್ಪಂದಿಸಿದ ಕಾಪೋರೇಟರ್, ಮುಖ್ಯಮಂತ್ರಿಗಳ ಗಮನಕ್ಕೆ ತಂದು ಮೊದಲ ಬಾರಿಗೆ ಔಟರ್ ರಿಂಗ್ ರಸ್ತೆಯಲ್ಲಿ (ರಾಜ್​ಕುಮಾರ್ ಸಮಾಧಿ ಬಳಿ) ಕೆಳಸೇತುವೆ (ಅಂಡರ್ ಪಾಸ್) ಮಾಡಲು ನಿರ್ಧರಿಸಿ, 2 ಕೋಟಿ ರೂ. ವೆಚ್ಚದಲ್ಲಿ ಕೆಳಸೇತುವೆ ನಿರ್ವಿುಸಿದರು. ಈ ಅಂಡರ್ ಪಾಸ್ ಅನ್ನು ಸಾವಿರಾರು ಮಂದಿ ಉಪಯೋಗ ಮಾಡಿಕೊಳ್ಳುತ್ತಿದ್ದು, ಈ ಭಾಗದಲ್ಲಿ ನಡೆಯುತ್ತಿದ್ದ ಅಪ ಘಾತಗಳ ಸಂಖ್ಯೆಯೂ ತಗ್ಗಿದೆ.

    Velu Naykar

    ನಮ್ಮ ವಾರ್ಡ್​ನಲ್ಲಿ ರಸ್ತೆ ಸಮಸ್ಯೆ ಇತ್ತು. ವೇಲು ನಾಯ್ಕರ್ ಕಾಪೋರೇಟರ್ ಆಗಿ ಆಯ್ಕೆಯಾದ ನಂತರ ಎಲ್ಲ ರಸ್ತೆಗಳಿಗೂ ಡಾಂಬರೀಕರಣ ಮಾಡಿದ್ದಾರೆ. ಜತೆಗೆ ನೀರಿನ ಸಮಸ್ಯೆಯನ್ನು ಬಗೆಹರಿಸಿದ್ದಾರೆ. ಯಾವುದೇ ಸಮಯದಲ್ಲಿಯೂ ಕರೆ ಮಾಡಿದರು ಕೂಡ ಕರೆ ಸ್ವೀಕರಿಸಿ ಸಮಸ್ಯೆ ಬಗೆಹರಿಸುತ್ತಾರೆ. ಬಡವರಿಗೆ ತಮ್ಮ ಕೈಲಾದ ಸಹಾಯ ಮಾಡುತ್ತಾರೆ.

    | ಕೃಷ್ಣಮೂರ್ತಿ ಕಾವೇರಿ ನಗರ ನಿವಾಸಿ (ವಕೀಲ)

    ವಾರ್ಡ್​ನಲ್ಲಿ ಪಾದರಸದಂತೆ ಕ್ರಿಯಾಶೀಲವಾಗಿ ಓಡಾಡಿಕೊಂಡು ಜನರ ಸಮಸ್ಯೆಯನ್ನು ಆಲಿಸುತ್ತಾರೆ. ರಸ್ತೆ, ನೀರು ಮತ್ತು ಕಸದ ಸಮಸ್ಯೆಯನ್ನು ಖುದ್ದಾಗಿ ಅವರೇ ನಿಂತು ಪರಿಹಾರ ಮಾಡುತ್ತಾರೆ. ಬಡವರಿಗಾಗಿ ಮಿಡಿಯುವ ಹೃದಯ ಅವರದು. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಆರ್ಥಿಕವಾಗಿ ಸಹಾಯ ಮಾಡುತ್ತಾರೆ.

    | ರಮೇಶ್ ಸ್ಥಳೀಯ ನಿವಾಸಿ

    ಜನರಿದ್ದಲ್ಲಿಗೇ ಸೌಕರ್ಯ
    ವೇಲು ನಾಯ್ಕರ್ ಅವರು ಬಿಬಿಎಂಪಿ ಮತ್ತು ಜನಗಳ ಮಧ್ಯೆ ಒಂದು ರೀತಿ ಸಂಪರ್ಕ ಸೇತುವೆಯಾಗಿ ಕೆಲಸ ಮಾಡುತ್ತಿದ್ದಾರೆ. ಸರ್ಕಾರ ಮತ್ತು ಬಿಬಿಎಂಪಿಯಲ್ಲಿರುವ ಸೌಲಭ್ಯಗಳನ್ನು ಜನರಿಗೆ ತಲುಪುವಂತೆ ನೋಡಿಕೊಳ್ಳುತ್ತಿದ್ದಾರೆ. ನಂದಿನಿ ಲೇಔಟ್​ನಲ್ಲಿ ಕಚೇರಿಯಲ್ಲಿ, ಸಿಬ್ಬಂದಿಯನ್ನು ನೇಮಿಸಿ ಅವರ ಮೂಲಕ ಜನರಿಗೆ ರೇಷನ್ ಕಾರ್ಡ್, ಹೆಲ್ತ್ ಕಾರ್ಡ್, ಕಟ್ಟಡ ಕಾರ್ವಿುಕರ ಕಾರ್ಡ್, ವಿಧವಾ ವೇತನ, ಅಂಗವಿಕಲರ ವೇತನ, ವೃದ್ಧಾಪ್ಯ ವೇತನವನ್ನು 2,500ರಿಂದ 3,000 ಮಂದಿಗೆ ಮಾಡಿಸಿಕೊಟ್ಟಿದ್ದಾರೆ. ಬಿಬಿಎಂಪಿ ವತಿಯಿಂದ ಕಾರು, ಆಟೋ ರಿಕ್ಷಾ, ಸೈಕಲ್, ತಳ್ಳುವ ತರಕಾರಿ ಗಾಡಿಗಳನ್ನು ಕೊಡಿಸಿದ್ದಾರೆ. ಕೂಲಿನಗರದಲ್ಲಿ ಹೆರಿಗೆ ಆಸ್ಪತ್ರೆ ಮತ್ತು ಹೆಲ್ತ್ ಸೆಂಟರ್ ಅನ್ನು ಅಭಿವೃದ್ಧಿ ಪಡಿಸಿದ್ದಾರೆ.

    ವಿದ್ಯಾರ್ಥಿಗಳಿಗೆ ನೆರವು
    ಲಕ್ಷ್ಮೀನಗರ ವಾರ್ಡ್​ನಲ್ಲಿ ಹೆಚ್ಚಾಗಿ ಬಡವರು ವಾಸವಿದ್ದಾರೆ. ಅದರಲ್ಲಿಯೂ ಕೂಲಿನಗರದಲ್ಲಿ ಹೆಚ್ಚಿನ ಕಡು ಬಡವರು ವಾಸವಿದ್ದಾರೆ. ಆ ಭಾಗದಲ್ಲಿ ವಾಸಿಸುವ ಮಕ್ಕಳಿಗೆ ಬುಕ್, ಬ್ಯಾಗ್, ಸಮವಸ್ತ್ರ ವಿತರಣೆ ಮತ್ತು ಕೆಲವು ಮಕ್ಕಳಿಗೆ ಪ್ರತಿವರ್ಷ ಶಾಲಾ ಶುಲ್ಕವನ್ನು ಪಾವತಿಸುವ ಮೂಲಕ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ವೇಲು ಅವರು ತಮ್ಮ ಸಹಾಯ ಹಸ್ತವನ್ನು ಚಾಚಿದ್ದಾರೆ.

    ರಸ್ತೆ, ಒಳಚರಂಡಿ, ಕುಡಿಯುವ ನೀರು, ಸುಂದರ ಉದ್ಯಾನಗಳ ಜತೆಗೆ ಅಗತ್ಯ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಪಾಲಿಕೆ ಸದಸ್ಯರಾಗಿದ್ದ ವೇಲು ನಾಯ್ಕರ್ ಬಹುಮುಖ್ಯ ಪಾತ್ರವಹಿಸಿದ್ದಾರೆ. ಅವರು ಒಬ್ಬ ಇಚ್ಛಾಶಕ್ತಿ ಹೊಂದಿರುವ ಜನನಾಯಕ ಎಂದರೆ ತಪ್ಪಾಗಲಾರದು.

    | ಶಾಂತಮ್ಮ ಸ್ಥಳೀಯ ನಿವಾಸಿ

    ಪಾಲಿಕೆ ಸದಸ್ಯನ ಜವಾಬ್ದಾರಿಯ ಜತೆಯಲ್ಲಿ ಮನೆ ಮುಂದೆ ಬರುವ ಜನರ ಕಷ್ಟ-ಸುಖಗಳಿಗೆ ಧ್ವನಿಯಾಗಿದ್ದಾರೆ. ಸಾರ್ವಜನಿಕ ಕೆಲಸಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ದಿನದ 24 ಗಂಟೆ ಕಾರ್ಯನಿರ್ವಹಿಸಿ ವಾರ್ಡ್​ನ ಪ್ರತಿಯೊಬ್ಬರ ಜನಮನ ಗೆದ್ದಿದ್ದಾರೆ.

    | ವಿಮಲಾ ಕಾವೇರಿನಗರದ ನಿವಾಸಿ

    ನಗರೀಕರಣದ ಭರಾಟೆಯಲ್ಲಿ ಪರಿಸರ ಉಳಿಸಿ ಬೆಳಸುವ ನಿಟ್ಟಿನಲ್ಲಿ ವಾರ್ಡ್​ನ್ಯಾದಂತ 5 ಸಾವಿರ ಸಸಿಗಳನ್ನು ನೆಡೆಸಿ ಅವುಗಳ ಪೋಷಣೆ ಮಾಡುವ ಮೂಲಕ ಪರಿಸರ ಸಂರಕ್ಷಣೆ ಮುಂದಾಗಿರುವ ವೇಲು ನಾಯ್ಕರ್ ಪರಿಸರ ಸಂರಕ್ಷಣೆ ಮಾಡುವ ಮೂಲಕ ಪ್ರಾಣಿ-ಪಕ್ಷಿಗಳಿಗೆ ನೆರವಾಗಿದ್ದಾರೆ.

    | ಪುಟ್ಟರಾಜು ಸ್ಥಳೀಯ ನಿವಾಸಿ

    ಜನರ ಅನುಕೂಲಕ್ಕಾಗಿ ಮೇಲ್ಸೇತುವೆ ನಿರ್ಮಾಣ
    ವಿಧಾನಸೌಧ ಲೇಔಟ್ ಮತ್ತು ಕೂಲಿ ನಗರದ ಮಧ್ಯೆ ಸುಮಾರು 70 ಅಡಿ ಆಳವಾದ ರಸ್ತೆ ಇತ್ತು. ಈ ರಸ್ತೆಯನ್ನು ಇಳಿದು ಹತ್ತುವಾಗ ಹಲವು ವಾಹನಗಳು ಅಪಘಾತವಾಗುತ್ತಿತ್ತು. ಇದನ್ನು ಗಮನಿಸಿದ ವೇಲು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ನಗರ ಪ್ರದಕ್ಷಿಣೆ ಮಾಡಲು ಬಂದಾಗ ಸಮಸ್ಯೆ ಇದ್ದ ಜಾಗಕ್ಕೆ ಸಿಎಂ ಅವರನ್ನು ಕರೆದೊಯ್ದು ಅಲ್ಲಿನ ಸಮಸ್ಯೆಗಳ ಬಗ್ಗೆ ವಿವರಿಸಿದರು. ಆಗ ಫ್ಲೈಓವರ್ ನಿರ್ವಿುಸಲು ಸಿದ್ದರಾಮಯ್ಯ ಗ್ರೀನ್ ಸಿಗ್ನಲ್ ಕೊಟ್ಟರು. ಕೆಲವೇ ತಿಂಗಳುಗಳಲ್ಲಿ ಆ ಭಾಗದಲ್ಲಿ ಫ್ಲೈಓವರ್ ನಿರ್ವಣವಾಯಿತು. ಈ ಫ್ಲೈಓವರ್​ನಿಂದ ವಿಧಾನಸೌಧ-ಕೂಲಿನಗರ ನಗರದ ಜನರು ಬಹಳ ಸುಲಭವಾಗಿ ರಿಂಗ್ ರಸ್ತೆಗೆ ಹೋಗಲು ಅನುಕೂಲವಾಯಿತು. ಇದರಿಂದಾಗಿ ಇಲ್ಲಿನ ನಿವಾಸಿಗಳ ಪ್ರೀತಿಗೆ ವೇಲು ಪಾತ್ರರಾದರು. ವಾರ್ಡ್​ನಲ್ಲಿ ನೀರಿನ ಸಮಸ್ಯೆ ಮತ್ತು ರಸ್ತೆ ಸಮಸ್ಯೆಗಳು ಹೆಚ್ಚಾಗಿದ್ದ ಬೇಸಿಗೆ ಕಾಲದಲ್ಲಿ ಟ್ಯಾಂಕರ್​ಗಳ ಮೂಲಕ ಮನೆ ಮನೆಗೆ ನೀರು ಸರಬರಾಜು ಮಾಡಿದರು. ಅಗತ್ಯವಿದ್ದ ಕಡೆ ಸುಮಾರು 40 ಬೋರ್​ಗಳನ್ನು ಕೊರೆಯಿಸಿ ನೀರನ್ನು ಹರಿಸಿದ ಕೀರ್ತಿ ವೇಲು ನಾಯ್ಕರ್​ಗೆ ಸೇರುತ್ತದೆ.

    Velu Naykar

    ಶಿಕ್ಷಣಕ್ಕೆ ಆಸರೆ

    ಕೂಲಿನಗರ, ಹಾವಾಡಿಗರ ಕಾಲನಿಯ ಮಕ್ಕಳ ಪಾಲಿಗೆ ದಾರಿದೀಪವಾಗಿದ್ದಾರೆ. ಅವರ ಪಾಲಕರು ಕಡು ಬಡವರಾಗಿರುವುದರಿಂದ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಹೆಚ್ಚಿನ ಆಸಕ್ತಿ ತೋರುವುದಿಲ್ಲವೆಂದು ತಿಳಿದು, ಅಲ್ಲಿನ ಪ್ರತಿ ಮನೆಗೂ ಭೇಟಿ ಕೊಟ್ಟು ಪಾಲಕರ ಮನವೊಲಿಸಿ ಮಕ್ಕಳನ್ನು ಶಾಲೆಗೆ ಸೇರಿಸಿದ್ದಾರೆ. ಮಕ್ಕಳ ವಿದ್ಯಾಭ್ಯಾಸದ ಖರ್ಚು ವೆಚ್ಚವನ್ನು ತಾವೇ ನೋಡಿಕೊಳ್ಳುತ್ತಿದ್ದಾರೆ. ಇದುವರೆಗೂ 150ಕ್ಕೂ ಹೆಚ್ಚು ಮಕ್ಕಳನ್ನು ಶಾಲೆಗೆ ದಾಖಲು ಮಾಡಿದ್ದಾರೆ. ವಾರ್ಡ್​ನಲ್ಲಿ ಹಬ್ಬದ ದಿನಗಳಲ್ಲಿ ಉಚಿತವಾಗಿ ಮಣ್ಣಿನ ಗಣೇಶ ಮೂರ್ತಿಗಳನ್ನು ಹಂಚುತ್ತಾರೆ. ಸಂಕ್ರಾಂತಿ ಹಬ್ಬಕ್ಕೆ ಮಹಿಳೆಯರಿಗೆ ಉಚಿತ ಸೀರೆ ವಿತರಣೆ, ಗೌರಿ ಹಬ್ಬಕ್ಕೆ ಬಾಗಿನ ಕೊಡುವುದನ್ನು ಆಚರಿಸಿಕೊಂಡು ಬಂದಿದ್ದಾರೆ.

    ಜೀವರಾಜ್ ಆಳ್ವ ಸ್ಪೂರ್ತಿ
    ವೇಲು ನಾಯ್ಕರ್ ಅವರು ರಾಜಕೀಯಕ್ಕೆ ಬರಲು ಮಾಜಿ ಸಚಿವ ಜೀವರಾಜ್ ಆಳ್ವ ಅವರೇ ಸ್ಪೂರ್ತಿದಾಯಕ ವ್ಯಕ್ತಿಯಾಗಿದ್ದಾರೆ. ಅವರು ಈ ಭಾಗದ ಶಾಸಕರಾಗಿದ್ದ ವೇಳೆ ಮಾಡಿದ್ದ ಜನಸೇವೆ ಮತ್ತು ಹಲವು ಅಭಿವೃದ್ಧಿ ಕಾರ್ಯಗಳನ್ನು ಕಂಡಿದ್ದ ವೇಲು ನಾಯ್ಕರ್, ತಾನೂ ಅವರಂತೆಯೇ ರಾಜಕೀಯಕ್ಕೆ ಬಂದು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಜನರ ಪ್ರೀತಿ- ವಿಶ್ವಾಸ ಗಳಿಸಬೇಕು ಎಂದುಕೊಂಡಿದ್ದರು. ಅದರಂತೆ ಅವರು ಕಾಪೋರೇಟರ್ ಆಗಿ ಆಯ್ಕೆಯಾದ ನಂತರ ಹಲವು ಸಮಾಜಮುಖಿಯಾದ ಕೆಲಸ ಕಾರ್ಯಗಳನ್ನು ಮಾಡುವ ಮೂಲಕ ಸಾಕಷ್ಟು ಜನಪ್ರಿಯತೆ ಗಳಿಸಿದ್ದಾರೆ. ಇದೀಗ ಸಂಸದ ಡಿ.ಕೆ. ಸುರೇಶ್ ಮತ್ತು ಬೆಂಗಳೂರು ನಗರ ಕಾಂಗ್ರೆಸ್ ಅಧ್ಯಕ್ಷ ಹನುಮಂತರಾಯಪ್ಪ ಮಾರ್ಗದರ್ಶನದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಅಧಿಕಾರವಿರಲಿ- ಇಲ್ಲದಿರಲಿ ಸದಾ ಜನಸೇವೆಯನ್ನು ಮಾಡುತ್ತಿದ್ದಾರೆ. ಬಿಬಿಎಂಪಿ ಕಾಪೋರೇಟರ್ ಅವಧಿ ಮುಗಿದು ವರ್ಷಗಳೇ ಕಳೆದಿವೆಯಾದರೂ ಈಗಲೂ ಜನರ ಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ. ನಂದಿನಿ ಲೇಔಟ್​ನಲ್ಲಿರುವ ತಮ್ಮ ಕಚೇರಿಯಲ್ಲಿ, ಪ್ರತಿದಿನ ಜನರ ಸಮಸ್ಯೆಗಳನ್ನು ಆಲಿಸುವುದು ಬಿಬಿಎಂಪಿಯಲ್ಲಿ ಅವರಿಗೆ ಆಗಬೇಕಿರುವ ಕೆಲಸಗಳನ್ನು ಮಾಡಿಸಿಕೊಡುತ್ತಿದ್ದಾರೆ. ನೀರಿನ ಸಮಸ್ಯೆ, ವಿದ್ಯುತ್ ಸಮಸ್ಯೆ, ರಸ್ತೆ ಸಮಸ್ಯೆ ಇದ್ದರೆ ಕೂಡಲೇ ಸರಿಪಡಿಸುವಂತಹ ಕೆಲಸ ಮಾಡುತ್ತಿದ್ದಾರೆ.

    Velu Naykar

    ಕಳೆದ 32 ವರ್ಷಗಳಿಂದ ಸಮಾಜ ಸೇವೆಯನ್ನು ಮಾಡಿಕೊಂಡು ಬಂದಿದ್ದೇನೆ. ನನ್ನ ಅಳಿಲು ಸೇವೆಯನ್ನು ಗುರುತಿಸಿ ನಾಡಿನ ನಂ.1 ದಿನಪತ್ರಿಕೆ ‘ವಿಜಯವಾಣಿ’ಯು ನನಗೆ ‘ಬೆಂಗಳೂರು ರತ್ನ’ ಎಂಬ ಪ್ರಶಸ್ತಿ ನೀಡಿ ಗೌರವಿಸಿದೆ. ಇದಕ್ಕಾಗಿ ಸದಾ ಚಿರಋಣಿಯಾಗಿರುತ್ತೇನೆ. ಸಮಾಜಮುಖಿ ಕೆಲಸಗಳನ್ನು ಹೆಚ್ಚಿನ ಪ್ರಮಾಣದಲ್ಲಿ ನಿರ್ವಹಿಸಲು ಈ ಬಗೆಯ ಗೌರವಗಳು ಮತ್ತಷ್ಟು ಸ್ಪೂರ್ತಿ ನೀಡುತ್ತವೆ.

    | ವೇಲು ನಾಯ್ಕರ್ ಬಿಬಿಎಂಪಿ ಮಾಜಿ ಸದಸ್ಯ ಹಾಗೂ ಸಮಾಜ ಸೇವಕ

    RCB ಹೆಣ್ಣು ಹುಲಿಗಳ ಆರ್ಭಟಕ್ಕೆ ಬೆದರಿದ ಡೆಲ್ಲಿ​: ಚೊಚ್ಚಲ ಪ್ರಶಸ್ತಿ ಮುಡಿಗೇರಿಸಿಕೊಂಡ ಸ್ಮೃತಿ ಮಂದಾನ ಪಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts