More

  ಸೀರಿಯಲ್​ನಲ್ಲಿ ಕುಮಾರಿ ಆಂಟಿ ಮಿಂಚು! ನಿಮ್ಮ ಅದೃಷ್ಟ ಬದಲಾಯಿತು ಎಂದ್ರು ನೆಟ್ಟಿಗರು

  ಹೈದರಾಬಾದ್​: ರಸ್ತೆಬದಿ ಕಡಿಮೆ ದರದಲ್ಲಿ ರುಚಿಕರವಾದ ಮಾಂಸಹಾರಿ ಊಟವನ್ನು ಜನರಿಗೆ ಉಣಬಡಿಸುತ್ತಿದ್ದ ಕುಮಾರಿ ಎಂಬುವವರು, ತಮ್ಮ ವಿಧವಿಧವಾದ ಅಡುಗೆ ರುಚಿಯಿಂದಲೇ ಇಡೀ ನಗರದಲ್ಲಿ ಹೆಸರುವಾಸಿಯಾಗಿದ್ದರು. ಹಸಿದು ಬಂದವರಿಗೆ ಕೈಗೆಟುಕುವ ದರದಲ್ಲಿ ಭರ್ಜರಿ ಊಟ ಕೊಡುತ್ತಿದ್ದ ಕುಮಾರಿ ಅವರನ್ನು ಕುಮಾರಿ ಆಂಟಿ ಅಂಗಡಿ ಎಂದೇ ಎಲ್ಲರೂ ಗುರುತಿಸುತ್ತಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಇವರ ಹೋಟೆಲ್ ಜನಪ್ರಿಯತೆ ಪಡೆದಿದ್ದೇ ತಡ, ನಾನಾ ರಾಜ್ಯ, ಜಿಲ್ಲೆಗಳಿಂದ ಜನರು ಆಗಮಿಸಿ ಅವರನ್ನು ಮತ್ತಷ್ಟು ಫೇಮಸ್​ ಮಾಡಿದರು.

  ಇದನ್ನೂ ಓದಿ: Electoral Bonds: ‘ಏನೂ ಮುಚ್ಚಿಟ್ಟಿಲ್ಲ ಎಂದು ಮಾರ್ಚ್ 21 ರೊಳಗೆ ಅಫಿಡವಿಟ್ ನೀಡಿ’, ಎಸ್‌ಬಿಐಗೆ ಸುಪ್ರೀಂ ಕೋರ್ಟ್ ನಿರ್ದೇಶನ

  ತೆಲುಗು ಜನರಿಗೆ ಕುಮಾರಿ ಅವರ ಪರಿಚಯ ಅಗತ್ಯವಿಲ್ಲ. ಸೋಷಿಯಲ್ ಮೀಡಿಯಾದ ಮುಖಾಂತರವೇ ರಾಜ್ಯದ ಹಲವಾರು ಭಾಗಗಳಿಗೆ ತಲುಪಿದ ಕುಮಾರಿ, ತಮ್ಮ ಊಟದ ಶೈಲಿ, ಅದನ್ನು ಕಡಿಮೆ ದರಕ್ಕೆ ಕೊಡುವುದು ಎಲ್ಲರಿಗೂ ಅಚ್ಚರಿ ತಂದಿತು ಹಾಗೂ ಗಮನಸೆಳೆಯಿತು. ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಆಕೆಯ ಬಗ್ಗೆಯೇ ಸಿಕ್ಕಾಪಟ್ಟೆ ಚರ್ಚೆ ನಡೆಯುತ್ತಿದೆ. ರೋಡ್ ಸೈಡ್ ಫುಡ್ ಬ್ಯುಸಿನೆಸ್​ನಲ್ಲಿ ಖ್ಯಾತಿ ಗಳಿಸಿರುವ ಕುಮಾರಿ ಆಂಟಿ ಸದ್ಯ ಹಲವು ಸಂಚಲನಗಳಿಗೆ ಕಾರಣರಾಗಿದ್ದಾರೆ.

  ಅದೇ ಸಮಯದಲ್ಲಿ, ರಾಜ್ಯದ ಮುಖ್ಯಮಂತ್ರಿ ಕೂಡ ಆಕೆಯ ಪ್ರಕರಣದಲ್ಲಿ ಮಧ್ಯಪ್ರವೇಶಿಸಿ ಮಾತನಾಡಿದ್ದರು. ಈ ಹಿನ್ನಲೆಯಲ್ಲಿ ಇದೀಗ ಟಿವಿ ಚಾನೆಲ್‌ಗಳು ಈಕೆಯ ಕ್ರೇಜ್‌ ಬಳಸಿಕೊಳ್ಳಲು ಮುಂದಾಗಿವೆ. ಇಲ್ಲಿಯವರೆಗೂ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಕುಮಾರಿ ಆಂಟಿ ಇದೀಗ ಧಾರಾವಾಹಿಗಳಿಗೂ ಎಂಟ್ರಿ ಕೊಟ್ಟಿದ್ದಾರೆ. ಈ ಮೂಲಕ ತಮ್ಮ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದಾರೆ.

  ಇದನ್ನೂ ಓದಿ: ಸಿದ್ದರಾಮಯ್ಯ ತಾತ ನನ್ನ ಪೇವರೆಟ್​ ಎಂದ ‘ಕರಿಮಣಿ ಮಾಲೀಕ’ ರೀಲ್ಸ್​ ಖ್ಯಾತಿಯ ಶಮಿಕಾ!

  ಸೋಷಿಯಲ್ ಮೀಡಿಯಾ ಮೂಲಕ ಸೆಲೆಬ್ರಿಟಿ ಆದ ಕುಮಾರಿ ಈಗ ಒಂದೇ ಒಂದು ಡೈಲಾಗ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದಾರೆ. “ನಿಮ್ಮ ಒಟ್ಟು ಮೊತ್ತ ಸಾವಿರ ರೂ., ಎರಡು ಲಿವರ್ ಎಕ್ಸ್ಟ್ರಾ!” ಸಾಮಾಜಿಕ ಜಾಲತಾಣಗಳಲ್ಲಿ ಈ ಡೈಲಾಗ್​ ಎಲ್ಲರ ಗಮನಸೆಳೆದಿದ್ದು, ಫೇಸ್‌ಬುಕ್, ಟ್ವಿಟರ್, ಇನ್‌ಸ್ಟಾಗ್ರಾಮ್‌ನಂತಹ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿದೆ. ರಾತ್ರೋರಾತ್ರಿ ಸೆಲೆಬ್ರಿಟಿ ಆದ ಕುಮಾರಿ ಆಂಟಿ ವ್ಯಾಪಾರಕ್ಕೆ ಟ್ರಾಫಿಕ್​ ಜಾಮ್​ ಎದುರಾದ ಹಿನ್ನೆಲೆ ಪೊಲೀಸರು ಆಕೆಗೆ ನೋಟಿಸ್​ ನೀಡಿ, ಹೋಟೆಲ್ ಮುಚ್ಚುವಂತೆ ಆದೇಶಿಸಿದ್ದರು.

  ಇದರ ಬೆನ್ನಲ್ಲೇ ತೀವ್ರ ನಷ್ಟ ಅನುಭವಿಸಿ, ಪರದಾಡಿದ ಕುಮಾರಿ ಆಂಟಿಗೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ವ್ಯಾಪಕ ಬೆಂಬಲ ಸೂಚಿಸಿದರು. ಈ ಎಲ್ಲಾ ಬೆಳವಣಿಗೆಯನ್ನು ಗಮನಿಸಿದ ಸಿಎಂ ರೇವಂತ್ ರೆಡ್ಡಿ ಟ್ರಾಫಿಕ್​ ಸಮಸ್ಯೆ ಉಂಟಾಗದಂತೆ ಹೋಟೆಲ್​ ನಡೆಸಿಕೊಂಡು ಹೋಗುವಂತೆ ಆಕೆಗೆ ಅವಕಾಶ ಮಾಡಿಕೊಟ್ಟರು. ಇದರಿಂದ ಮತ್ತೆ ಕುಮಾರಿ ತಮ್ಮ ಹೋಟೆಲ್​ ನಡೆಸುವಂತಾಯಿತು,(ಏಜೆನ್ಸೀಸ್).

  ಕಪ್​ ಎತ್ತಿದ ಆರ್​ಸಿಬಿ ಹೆಣ್ಣು ಹುಲಿಗಳು! ಪುರುಷರ ಟೀಮ್​​ ಐಪಿಎಲ್ ಗೆದ್ರೆ ವಿಜಯ್ ಮಲ್ಯ ಭಾರತಕ್ಕೆ?

  ‘ಇದೆಲ್ಲವೂ ನನ್ನ ಕುಟುಂಬದ ಮೇಲೆ ಪರಿಣಾಮ ಬೀರಿದೆ’; ಕಡೆಗೂ ಮೌನ ಮುರಿದ ಚಹಲ್ ಪತ್ನಿ!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts