More

  ಬಾಳೆಹಣ್ಣಿನ ವಿಷಯದಲ್ಲಿ ಈ ತಪ್ಪನ್ನು ಮಾಡಲೇಬೇಡಿ! ಇಲ್ಲಿದೆ ಉಪಯುಕ್ತ ಮಾಹಿತಿ

  ಬೆಂಗಳೂರು: ಬಾಳೆಹಣ್ಣು ಅಂದ್ರೆ ಯಾರಿಗೆ ಇಷ್ಟವಿಲ್ಲಾ ಹೇಳಿ? ಭರ್ಜರಿ ಭೋಜನವಾದ ಮೇಲೆ ಒಂದೆರೆಡು ಬಾಳೆಹಣ್ಣು ತಿಂದರೆ, ಊಟ ಸಲಿಸಾಗಿ ಜೀರ್ಣವಾಗುತ್ತದೆ ಎಂಬುದು ಈ ಹಿಂದಿನಿಂದಲೂ ನಮ್ಮ ಪೂರ್ವಜರು ಹೇಳಿಕೊಂಡು ಬಂದಂತಹ ಮಾತು. ಅದು ನಿಜವೂ ಹೌದು. ಯಾವುದೇ ಶುಭಕಾರ್ಯಕ್ಕೆ ಆಗಲಿ, ಕಾರ್ಯಕ್ರಮಗಳೇ ಆಗಲಿ ಅಲ್ಲಿ ಬಾಳೆಹಣ್ಣು ಹೆಚ್ಚಾಗಿ ಬಳಕೆಯಲ್ಲಿ ಇರುತ್ತವೆ.

  ಇದನ್ನೂ ಓದಿ: ಹ್ಯಾಟ್ರಿಕ್ ಸರದಾರ ಜಿಗಜಿಣಗಿ ಗೆಲುವು ಕಸಿಯುವರೇ ಆಲಗೂರ?

  ಹಿರಿಯರಿಂದ ಹಿಡಿದು ಮಕ್ಕಳವರೆಗೂ ಬಾಳೆಹಣ್ಣಿನ ಸೇವನೆ ದಿನಚರಿಯ ಭಾಗವಾಗಿದೆ. ದಿನನಿತ್ಯ ಒಂದು ಅಥವಾ ಎರಡು ಪಚ್ಚು ಬಾಳೆಹಣ್ಣು ಅಥವಾ ಏಲಕ್ಕಿ ಬಾಳೆಹಣ್ಣಿನ ಸೇವಿಸುವ ಅಭ್ಯಾಸ ಅನೇಕರಲ್ಲಿದೆ. ನೋಡಲು ಹಳದಿ ಬಣ್ಣದಲ್ಲಿ ಸಂಪೂರ್ಣವಾಗಿ ಹಣ್ಣಾಗಿದ್ದರೇ, ಅದರಲ್ಲೂ ಅದು ಕರಗಿಲ್ಲ ಎಂದು ತಿಳಿದರೆ ಮಾತ್ರ, ಕೆಲವರು ಸೇವಿಸಲು ಇಷ್ಟಪಡುತ್ತಾರೆ.

  ಬಾಳೆಹಣ್ಣು ಕಪ್ಪದ್ದರೆ ಅಥವಾ ಅದರ ಮೇಲೆ ಕಪ್ಪು ಚುಕ್ಕೆಗಳು ಎದ್ದಿರುವುದು ಕಂಡುಬಂದರೆ ಅದನ್ನು ಬಿಸಾಡುವವರ ಸಂಖ್ಯೆಯೇ ಹೆಚ್ಚು. ಆದರೆ, ಇಂತಹ ತಪ್ಪನ್ನು ಮಾಡದಿರಿ. ಯಾಕಂದ್ರೆ, ಚುಕ್ಕಿ ಬಂದಿರುವ ಬಾಳೆಹಣ್ಣಿನಲ್ಲಿ ಸಾಧಾರಣ ಹಣ್ಣಿಗಿಂತಲೂ ಹೆಚ್ಚಿನ ಆರೋಗ್ಯ ವರ್ಧಕ ಅಂಶಗಳು ಅಡಗಿವೆ. ನಮ್ಮ ದೇಹಕ್ಕೆ ಅಗತ್ಯವಿರುವ ಎಲ್ಲಾ ಪೋಷಕಾಂಶಗಳು, ಜೀವಸತ್ವಗಳು ಮತ್ತು ಖನಿಜಗಳು ಹಾಗೂ ನೈಸರ್ಗಿಕ ಸಕ್ಕರೆಯನ್ನು ಈ ಹಣ್ಣು ಪೂರೈಸುತ್ತವೆ.

  ಇದನ್ನೂ ಓದಿ: ಹೀರಾಪುರ ಚೆಕ್ ಪೋಸ್ಟ್ ಗೆ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಭೇಟಿ : ವಾಹನ‌ ತಪಾಸಣೆ ಕಾರ್ಯ ಪರಿಶೀಲನೆ

  ವಿಟಮಿನ್ ಸಿ, ಪೊಟ್ಯಾಸಿಯಮ್, ಮೆಗ್ನೀಸಿಯಮ್ನೊಂದಿಗೆ ತುಂಬಿದ ಬಾಳೆಹಣ್ಣು ಸುಕ್ರೋಸ್, ಫ್ರಕ್ಟೋಸ್ ಮತ್ತು ಗ್ಲೂಕೋಸ್ ಅಂಶಗಳನ್ನು ಹೊಂದಿದ್ದು, ಫೈಬರ್ನೊಂದಿಗೆ ಸಂಯೋಜಿಸುತ್ತವೆ. ಬಾಳೆಹಣ್ಣು ತ್ವರಿತ, ನಿರಂತರ ಮತ್ತು ಗಣನೀಯ ಪ್ರಮಾಣದ ಶಕ್ತಿಯನ್ನು ನೀಡುತ್ತದೆ. ಕೇವಲ ಎರಡು ಬಾಳೆಹಣ್ಣುಗಳು ದೇಹಕ್ಕೆ ಬೇಕಾದ ಅಗತ್ಯ ಶಕ್ತಿಯನ್ನು ಒದಗಿಸುತ್ತವೆ ಎಂದು ವರದಿ ಹೇಳುತ್ತದೆ.

  ಕಪ್ಪು ಚುಕ್ಕೆಗಳಿರುವ ಬಾಳೆಹಣ್ಣನ್ನು ಯಾಕೆ ಎಸೆಯಬಾರದು?

  TNF (ಟ್ಯೂಮರ್ ನೆಕ್ರೋಸಿಸ್ ಫ್ಯಾಕ್ಟರ್): ಬಾಳೆಹಣ್ಣಿನ ಸಿಪ್ಪೆ ಮೇಲಿನ ಕಪ್ಪು ಚುಕ್ಕೆಗಳು ಕೊಳೆತ ಹಣ್ಣಿನ ಸಂಕೇತವಲ್ಲ. ಆದರೆ ಬಾಳೆಹಣ್ಣು ಹಣ್ಣಾಗುವ ಲಕ್ಷಣಗಳಾಗಿವೆ. ಅದರಲ್ಲೂ ಚೆನ್ನಾಗಿ ಹಣ್ಣಾಗಿದೆ ಎಂಬ ಸೂಚನೆ. ಬಾಳೆಹಣ್ಣಿನ ಮೇಲೆ ಕಪ್ಪು-ಕಂದು ಕಲೆಗಳು ಇದ್ದರೆ ಅದನ್ನು ಸೇವಿಸುವುದು ಉತ್ತಮ. “ಬಾಳೆಹಣ್ಣಿನ ಮೇಲಿನ ಚುಕ್ಕಿಗಳು TNF ಅನ್ನು ಪ್ರತಿನಿಧಿಸುತ್ತವೆ. ಇದು ಕ್ಯಾನ್ಸರ್ ವಿರುದ್ಧ ಹೋರಾಡುವ ಗುಣ ಹೊಂದಿದೆ. ದೇಹದಲ್ಲಿನ ಅಸಹಜ ಕೋಶಗಳ ವಿರುದ್ಧ ಹೋರಾಡಲು ಹೆಚ್ಚು ಸಹಾಯ ಮಾಡುತ್ತದೆ.

  ಇದನ್ನೂ ಓದಿ: IPL 2024: ವ್ಯರ್ಥವಾಯ್ತು ರೋಹಿತ್​ ಕೊಡುಗೆ! ಕ್ಯಾಪ್ಟನ್​ ಗಿಲ್​ಗೆ ಒಲಿದ ಗೆಲುವು

  ಹೆಚ್ಚಿನ ಉತ್ಕರ್ಷಣ ನಿರೋಧಕ ಅಂಶ: ಬಾಳೆಹಣ್ಣುಗಳು ಸಂಪೂರ್ಣವಾಗಿ ಹಣ್ಣಾದರೆ ಅದು ಹೆಚ್ಚಿನ ಉತ್ಕರ್ಷಣ ನಿರೋಧಕ ಹಣ್ಣು ಎಂದು ಹೇಳಲಾಗುತ್ತದೆ. ಇದು ವೈರಸ್‌ಗಳು ಮತ್ತು ಕ್ಯಾನ್ಸರ್ ಕೋಶಗಳ ವಿರುದ್ಧ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹ ಸಹಾಯ ಮಾಡುತ್ತದೆ. ಕಪ್ಪು ಚುಕ್ಕೆ ಬಾಳೆಹಣ್ಣು ತಿನ್ನಲು ಯೋಗ್ಯವಲ್ಲ ಎಂದು ನೀವು ಭಾವಿಸಿದ್ರೆ ಅದು ತಪ್ಪು. ಖಂಡಿತವಾಗಿಯೂ ಹಣ್ಣು ದೇಹಕ್ಕೆ ಪೌಷ್ಟಿಕವಾಗಿದೆ. ಮಾಗಿದ ಬಾಳೆಹಣ್ಣಿನಲ್ಲಿ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ಹೆಚ್ಚಾದಂತೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯವೂ ಹೆಚ್ಚಾಗುತ್ತದೆ.

  ದೀರ್ಘಕಾಲದ ಕಾಯಿಲೆಗಳ ವಿರುದ್ಧ ಹೋರಾಡುತ್ತದೆ: ಬಾಳೆಹಣ್ಣುಗಳು ಹೆಚ್ಚು ಹಣ್ಣಾಗುತ್ತಿದ್ದಂತೆ, ಮೆಗ್ನೀಸಿಯಮ್ ಅಂಶವು ಹೆಚ್ಚಾಗುತ್ತದೆ. ಅಧಿಕ ಮೆಗ್ನೀಸಿಯಮ್ ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವ ಜನರಿಗೆ ಅತ್ಯುತ್ತಮವಾಗಿದೆ ಮತ್ತು ಇದು ತಕ್ಷಣವೇ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಇದಲ್ಲದೆ, ಮಾಗಿದ ಬಾಳೆಹಣ್ಣುಗಳು ಹೃದಯ, ಖಿನ್ನತೆ, ಜೀರ್ಣಕ್ರಿಯೆಗೆ ಸಹಾಯ ಮಾಡುವುದು ಮತ್ತು ಆರೋಗ್ಯಕರ ಕರುಳಿನ ಚಲನೆಗೆ ಸಹಕಾರಿ.

  ಇದನ್ನೂ ಓದಿ: ಲೋಕಸಭೆ ಚುನಾವಣೆಯ ಬೆನ್ನಲ್ಲೇ ಇಂದು ಮತ್ತೆ ಬಿಜೆಪಿ ಸೇರಲಿರುವ ಜನಾರ್ದನ ರೆಡ್ಡಿ!

  ನೈಸರ್ಗಿಕ ಆಂಟಿ-ಆಸಿಡ್: ಬಾಳೆಹಣ್ಣುಗಳು ನೈಸರ್ಗಿಕ ಆಂಟಿ-ಆಸಿಡ್ ಆಗಿದ್ದು, ಎದೆಯುರಿಯನ್ನು ತಕ್ಷಣವೇ ನಿವಾರಿಸಲು ಸಹಾಯ ಮಾಡುತ್ತದೆ. ನೀವು ಸ್ವಲ್ಪ ಎದೆಯುರಿ ಅನುಭವಿಸುತ್ತಿದ್ದರೆ, ಒಂದು ಬಾಳೆಹಣ್ಣು ಸೇವಿಸಿ ಅದು ಕೆಲವೇ ನಿಮಿಷಗಳಲ್ಲಿ ನಿಮ್ಮ ಪರಿಹಾರವನ್ನು ನೀಡುತ್ತದೆ.

  ಮಲಬದ್ಧತೆಯನ್ನು ನಿವಾರಿಸುತ್ತದೆ: ಮಾಗಿದ ಬಾಳೆಹಣ್ಣುಗಳನ್ನು ತಿನ್ನುವುದು ರೋಗಲಕ್ಷಣಗಳನ್ನು ನಿಯಂತ್ರಣಕ್ಕೆ ತರುತ್ತದೆ ಮತ್ತು ವಿವಿಧ ಕಾರಣಗಳಿಂದ ಉಂಟಾಗುವ ಅತಿಸಾರದಿಂದ ಚೇತರಿಸಿಕೊಳ್ಳುವ ಸಮಯವನ್ನು ದ್ವಿಗುಣಗೊಳಿಸುತ್ತದೆ. ಬಾಳೆಹಣ್ಣಿನಲ್ಲಿ ನಾರಿನಂಶ ಹೆಚ್ಚಿರುವುದರಿಂದ ಮಲಬದ್ಧತೆಯ ನಿವಾರಿಸಲು ಸಹಕಾರಿ,(ಏಜೆನ್ಸೀಸ್).

  ಇದನ್ನೂ ಓದಿ: Gold, Silver Price; ಶುಭ ಸೋಮವಾರ ಚಿನ್ನ, ಬೆಳ್ಳಿ ಬೆಲೆ ಕೊಂಚ ಇಳಿಕೆ.. ಇಂದಿನ ಬೆಲೆ ಗಮನಿಸಿ…

  ವಿಶೇಷ ಸೂಚನೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts