More

    IPL 2024: ವ್ಯರ್ಥವಾಯ್ತು ರೋಹಿತ್​ ಕೊಡುಗೆ! ಕ್ಯಾಪ್ಟನ್​ ಗಿಲ್​ಗೆ ಒಲಿದ ಗೆಲುವು

    ಗುಜರಾತ್​: ನಿನ್ನೆ (ಮಾ.24) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 2024ರ ಆವೃತ್ತಿಯ ಐದನೇ ಪಂದ್ಯದಲ್ಲಿ ಶುಭಮನ್ ಗಿಲ್ ನಾಯಕತ್ವದ ಗುಜರಾತ್ ಟೈಟಾನ್ಸ್ ಮತ್ತು ನೂತನ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡಗಳ ನಡುವಿನ ಪಂದ್ಯದಲ್ಲಿ ಭಾರೀ ಹಣಾಹಣಿ ನಡೆದಿದ್ದು, ಅಂತಿಮವಾಗಿ 6 ರನ್​ಗಳಿಂದ ಗುಜರಾತ್​ ಗೆದ್ದು ಬೀಗಿತು.

    ಇದನ್ನೂ ಓದಿ: ಹ್ಯಾಟ್ರಿಕ್ ಸರದಾರ ಜಿಗಜಿಣಗಿ ಗೆಲುವು ಕಸಿಯುವರೇ ಆಲಗೂರ?


    ಎಂದಿನಂತೆ ರೋಚಕ ಪಂದ್ಯಗಳಲ್ಲಿ ಇದು ಕೂಡ ಒಂದಾಗಿದ್ದು, ಕೊನೆಯ ಓವರ್​ ತನಕ ಹೋದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಗೆಲುವು ದಾಖಲಿಸುವಲ್ಲಿ ವಿಫಲವಾಯಿತು. 6 ರನ್​ಗಳಿಂದ ಗುಜರಾತ್​ ಮುಂಬೈಗೆ ಸೋಲುಣಿಸಿತು. ತೀವ್ರ ರೋಚಕವಾಗಿ ಸಾಗಿದ ಈ ಪಂದ್ಯದಲ್ಲಿ ಶುಭ್​ಮನ್ ಗಿಲ್ (Shubman Gill) ತಮ್ಮ ಚಾಣಕ್ಷತೆ ತೋರುವ ಮೂಲಕ ತಂಡಕ್ಕೆ ಮೊದಲ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾದರು.

    ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಹಾರ್ದಿಕ್ ತಂಡ ಗುಜರಾತ್​ಗೆ ಬ್ಯಾಟ್ ಮಾಲು ಅವಕಾಶ ನೀಡಿತು. 20 ಓವರ್‌ಗಳಲ್ಲಿ ಗುಜರಾತ್​ 168 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡ 120 ಬಾಲ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 162 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಕಡೆಯ ಓವರ್​ವರೆಗೂ ಹೋದ ಈ ಪಂದ್ಯ ಬಹಳ ರೋಚಕವಾಗಿ ಸಾಗಿತು. ಅಂತಿಮವಾಗಿ 6 ರನ್​ಗಳಿಂದ ಮುಂಬೈ ಹೀನಾಯ ಸೋಲು ಅನುಭವಿಸಿತು.

    ಇದನ್ನೂ ಓದಿ: IPL 2024: ಈ ಸಲದ 2 ಗುಂಪುಗಳನ್ನು ಪ್ರಕಟಿಸಿದ ಬಿಸಿಸಿಐ; ಒಂದೇ ಗುಂಪಿನಲ್ಲಿ ಆರ್​ಸಿಬಿ-ಸಿಎಸ್​ಕೆ!

    ಗುಜರಾತ್ ನೀಡಿದ 168 ರನ್ ಚೇಸ್​ ಮಾಡಿದ ಮುಂಬೈ ಆರಂಭಿಕ ಹಂತದಲ್ಲೇ ಶೂನ್ಯಕ್ಕೆ ಇಶಾನ್ ಕಿಶಾನ್​ರನ್ನು ಕಳೆದುಕೊಂಡಿತು. ತದನಂತರ ತಂಡಕ್ಕೆ ಆಸರೆಯಾಗಿದ್ದು, ರೋಹಿತ್ ಶರ್ಮಾ- ಡೆವಾಲ್ಡ್ ಬ್ರೆವಿಸ್ ಹೋರಾಟ. ಡೆವಾಲ್ಡ್ ಸಿಕ್ಸರ್ ಮತ್ತು ಬೌಂಡರಿಗಳನ್ನು ಸಿಡಿಸಿ 46 ರನ್ ಗಳಿಸಿದರೆ, ಮಾಜಿ ನಾಯಕ ರೋಹಿತ್ ಶರ್ಮಾ 29 ಎಸೆತಗಳಲ್ಲಿ 43 ರನ್ ಗಳಿಸಿಕೊಟ್ಟರು. ಇನ್ನು 7ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕ್ಯಾಪ್ಟನ್​ ಹಾರ್ದಿಕ್ ಪಾಂಡ್ಯ 4 ಎಸೆತಗಳಲ್ಲಿ ಒಂದು ಸಿಕ್ಸರ್ ಮತ್ತು ಒಂದು ಬೌಂಡರಿ ಹೊಡೆಯುವ ಮೂಲಕ 11 ರನ್​ ಸಿಡಿಸಿದರೂ ಕೂಡ ತಂಡವನ್ನು ಗೆಲುವು ತಂಡುಕೊಡಲು ವಿಫಲರಾದರು,(ಏಜೆನ್ಸೀಸ್).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts