More

    ಸೋನು ಗೌಡಗೆ 14 ದಿನ ನ್ಯಾಯಾಂಗ ಬಂಧನ

    ಬೆಂಗಳೂರು: ಕಾನೂನು ಬಾಹಿರವಾಗಿ ಮಗುವನ್ನ ದತ್ತು ತೆಗೆದುಕೊಂಡು ಪೊಲೀಸ್ ವಶದಲ್ಲಿದ್ದ ಸೋನು ಶ್ರೀನಿವಾಸಗೌಡರಿಗೆ ಈ ಪ್ರಕರಣದಲ್ಲಿ ಈಗ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

    ಗುವನ್ನು ಅಕ್ರಮವಾಗಿ ಸಾಕುವ ಪ್ರಕರಣಕ್ಕೆ ಸಂಬಂಧಿಸಿದಂತೆ ರೀಲ್ಸ್ ರಾಣಿ ಸೋನು ಗೌಡಗೆ ಸಿಜೆಎಂ ಕೋರ್ಟ್ ನ್ಯಾಯಾಧೀಶರು ಹದಿನಾಲ್ಕು ದಿನಗಳ‌ ಕಾಲ ನ್ಯಾಯಾಂಗ ಬಂಧನ ಒಪ್ಪಿಸಿದ್ದಾರೆ. 

    ನಡೆದಿದ್ದೇನು?:  ಪುಟ್ಟ ಬಾಲಕಿಯನ್ನು ಅನಧಿಕೃತವಾಗಿ ತಮ್ಮ ಮನೆಯಲ್ಲಿ ಇಟ್ಟುಕೊಂಡಿರುವ ಆರೋಪ ಸೋನು ವಿರುದ್ಧ ಕೇಳಿಬಂದಿತ್ತು. ಈ ಸಂಬಂಧ ರಾಜ್ಯ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಗೀತಾ ದೂರು ನೀಡಿದ್ದರು.

    ಸೋನು ಶ್ರೀನಿವಾಸ ಗೌಡ ಅವರು ಪುಟ್ಟ ಮಗುವನ್ನು ಕಾನೂನು ಬಾಹಿರವಾಗಿ ದತ್ತು ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಡರಹಳ್ಳಿ ಠಾಣಾ ಪೊಲೀಸರು ಇಂದು (ಮಾರ್ಚ್​ 22) ಬೆಳಗ್ಗೆ ಸೋನು ಶ್ರೀನಿವಾಸ್ ಗೌಡಳನ್ನು ಬಂಧಿಸಿದ್ದರು. ಆ ಬಳಿಕ ಈ ಪ್ರಕರಣದಲ್ಲಿ ಅವರನ್ನು ನಾಲ್ಕು ದಿನ ಪೊಲೀಸ್ ಕಸ್ಟಡಿಗೆ ವಹಿಸಲಾಗಿತ್ತು. ಈ ವೇಳೆ ಪೊಲೀಸರು ವಿಚಾರಣೆ ನಡೆಸಿದ್ದರು.

    ಬೆಂಗಳೂರಿನ ಬ್ಯಾಡರಳ್ಳಿ ಪೊಲೀಸರು ನಿನ್ನೆ (ಮಾ.24) ರಾಯಚೂರಿನ ಮಸ್ಕಿ ತಾಲೂಕಿನ ಕಾಚಾಪುರಕ್ಕೆ ಕರೆದುಕೊಂಡು ಬಂದ ಸ್ಥಳ ಮಹಜರು ಮಾಡಿದ್ದರು. ಬಾಲಕಿ ಚಿಕ್ಕಪ್ಪನ ಮನೆಗೆ ಬಂದ ಪೊಲೀಸರು ಕೆಲವೇ ಕ್ಷಣದಲ್ಲಿ ಮಾಹಿತಿ ಕಲೆಹಾಕಿ ಅವಸರದಲ್ಲಿ ಗ್ರಾಮದಿಂದ ಹೊರನಡೆದಿದ್ದರು. ಈ ವೇಳೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಸೋನು ಗೌಡ ಇದ್ದ ಕಾರಿಗೆ ಗ್ರಾಮಸ್ಥರು ಮುತ್ತಿಗೆ ಹಾಕಿದ್ದರು.

    ಸೋನು ಮಾತನಾಡಿ, ನಾನು ವಾಸವಿರುವ ಅಪಾರ್ಟ್​ಮೆಂಟ್​ ಕೆಳಗೆ ಗಾರೆ ಕೆಲಸ ಮಾಡುತ್ತಿದ್ದ ರಾಯಚೂಡು ಮೂಲದ ದಂಪತಿ ಮಗಳು ಆಕೆ. ನಾನು ನಾಯಿಗೆ ಬಿಸ್ಕೆಟ್​ ಹಾಕುವಾಗ ಆಕೆ ನನ್ನ ಬಳಿ ಬಂದಳು. ಬಳಿಕ ನಾನು ಆಕೆಗೆ ಚಾಕೋಲೆಟ್​ ಕೊಡಿಸಿದೆ. ಬಳಿಕ ನಮ್ಮ ಮನೆಗೆ ಬಂದು ಆಟವಾಡುತ್ತಿದ್ದಳು. ಇದರಿಂದ ನನಗೆ ತುಂಬಾ ಹತ್ತಿರವಾಗಿಬಿಟ್ಟಳು. ಇಬ್ಬರು ಒಬ್ಬರೊನ್ನೊಬ್ಬರು ಬಿಟ್ಟಿರಲಾರದಷ್ಟು ಹಚ್ಚಿಕೊಂಡೆವು  ಹೀಗಾಗಿ ದತ್ತು ಪಡೆಯಬೇಕು ಎಂದು ಕೊಂಡಿದ್ದೆ. ನಾನು ಮದುವೆಯಾಗದೇ ಆಕೆಯನ್ನು ನೋಡಿಕೊಂಡು ಇರಲು ಮತ್ತು ನಾನು ಸಂಪಾದಿಸಿದ ಹಣವನ್ನು ಆಕೆಗೆ ಒಳ್ಳೆಯ ಜೀವನವನ್ನು ರೂಪಿಸಲು ಬಯಸಿದ್ದೆ. ಆದರೆ, ದತ್ತು ಪಡೆಯುವುದು ಇಷ್ಟೊಂದು ದೊಡ್ಡ ಪ್ರಕ್ರಿಯೆ ಎಂದು ನನಗೆ ಗೊತ್ತೇ ಇರಲಿಲ್ಲ. ಗೊತ್ತಿದ್ದಾರೆ ಈ ರೀತಿ ಆಗಲು ನಾನು ಬಿಡುತ್ತಿರಲಿಲ್ಲ. ಕಾನೂನಿನ ಪ್ರಕ್ರಿಯೆಯ ಮೂಲಕವೇ ದತ್ತು ಪಡೆಯುತ್ತಿದೆ ಎಂದು ಸೋನು ಶ್ರೀನಿವಾಸ್​ ಗೌಡ ವಿಚಾರಣೆ ವೇಳೆ ಹೇಳಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.

    ಈಗ ನ್ಯಾಯಾಂಗ ಬಂಧನ ವಿಧಿಸಿ CJM ನ್ಯಾಯಾಲಯ ಆದೇಶ ಹೊರಡಿಸಿದೆ.

    ಬಾಲಕಿ ದತ್ತು ಪ್ರಕರಣ: ರೀಲ್ಸ್​ ರಾಣಿ ಸೋನು ಶ್ರೀನಿವಾಸ್​ ಗೌಡ ಪೊಲೀಸ್​ ವಿಚಾರಣೆ ವೇಳೆ ಹೇಳಿದ್ದಿಷ್ಟು…

    ಗುಟ್ಟಾಗಿ ಮದುವೆಯಾದ್ರಾ ತಾಪ್ಸಿ ಪನ್ನು; ಫೋಟೋ ವೈರಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts