ಮುಂಬೈ: ನಟಿ ತಾಪ್ಸಿ ಪನ್ನು ಬ್ಯಾಡ್ಮಿಂಟನ್ ಆಟಗಾರ ಮಥಾಯಸ್ ಬೋ ಜತೆ ಮದುವೆ ಆಗಿದ್ದಾರೆ ಎನ್ನುವ ಸುದ್ದಿಯೊಂದು ವೈರಲ್ ಆಗಿದೆ.
ಕಳೆದ 10 ವರ್ಷಗಳಿಂದ ತಾಪ್ಸಿ ಪನ್ನು ಮತ್ತು ಮಥಾಯಸ್ ಬೋ ಪ್ರೀತಿಸುತ್ತಿದ್ದಾರೆ. ಮಥಾಯಸ್ ಬೋ ಅವರು ಕ್ರೈಸ್ತ ಧರ್ಮಕ್ಕೆ ಸೇರಿದವರು. ತಾಪ್ಸಿ ಪನ್ನು ಅವರದ್ದು ಸಿಖ್ ಧರ್ಮ. ಹಾಗಾಗಿ ಅವರಿಬ್ಬರ ಮದುವೆಯನ್ನು ಎರಡೂ ಧರ್ಮದ ಸಂಪ್ರದಾಯದ ಪ್ರಕಾರ ನಡೆಸಲು ನಿರ್ಧರಿಸಲಾಗಿದೆ ಎನ್ನುವ ಸುದ್ದಿಯೊಂದು ಇತ್ತೀಚೆಗೆ ಅಷ್ಟೆ ವದರಿಯಾಗಿತ್ತು. ಆದರೆ ಈ ಸುದ್ದಿ ಬೆನ್ನಲ್ಲೆ ನಟಿ ತಾಪ್ಸಿ ಇದೀಗ ಗುಟ್ಟಾಗಿ ಮದುವೆಯಾಗಿದ್ದಾರೆ ಎನ್ನುವ ಗುಸುಗುಸು ಸುದ್ದಿಯೊಂದು ಹರಿದಾಡುತ್ತಿದೆ.
ವಿಶೇಷವಾಗಿ ಲೇಡಿ ಓರಿಯೆಂಟೆಡ್ ಚಲನಚಿತ್ರಗಳೊಂದಿಗೆ ಜನಪ್ರಿಯತೆಯನ್ನು ಗಳಿಸಿದ ತಾಪ್ಸಿ ಕೆಲವು ಸಮಯದಿಂದ ಡ್ಯಾನಿಶ್ ಬ್ಯಾಡ್ಮಿಂಟನ್ ಆಟಗಾರ ಮ್ಯಾಥ್ಯೂಸ್ ಬೋನ್ ಅವರೊಂದಿಗೆ ಸಂಬಂಧದಲ್ಲಿದ್ದರು. ಇವರಿಬ್ಬರು ಹಲವು ಬಾರಿ ಮಾಧ್ಯಮಗಳ ಕಣ್ಣಿಗೆ ಬಿದ್ದಿದ್ದರು. ಆದರೆ ಈಗ ಇವರಿಬ್ಬರೂ ಗುಟ್ಟಾಗಿ ಮದುವೆಯಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಇದೇ ತಿಂಗಳ 23ರಂದು ಈ ಮದುವೆ ನಡೆದಿದೆ. ಅವರ ಮದುವೆ ಉದಯಪುರದಲ್ಲಿ ಕೆಲವು ಸಂಬಂಧಿಕರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ನಡೆದಿದೆಯಂತೆ. ಆದರೆ ತಾಪ್ಸಿಯ ಸ್ನೇಹಿತರಾದ ಪಾವೈಲ್ ಗುಲಾಟಿ, ಕನಿಕಾ ಧಿಲ್ಲೋನ್ ಮತ್ತು ಅನುರಾಗ್ ಕಶ್ಯಪ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಕೆಲವು ಫೋಟೋಗಳು ಈಗ ವೈರಲ್ ಆಗಿವೆ. ತಾಪ್ಸಿ ಮತ್ತು ಮ್ಯಾಥ್ಯೂಸ್ ಬಾನ್ ಎಲ್ಲಿಯೂ ಕಾಣಿಸದಿದ್ದರೂ, ಅವರು ಮದುವೆಯಲ್ಲಿದ್ದಾರೆ ಎನ್ನಲಾಗಿದೆ. ಈ ಮದುವೆಗೆ ಖ್ಯಾತ ಬಾಲಿವುಡ್ ಮಂದಿಗೆ ಆಹ್ವಾನ ನೀಡಿಲ್ಲ ಎನ್ನಲಾಗಿದೆ. ತಾಪ್ಸಿಯ ಮದುವೆ ಮುಗಿಯಿತು ಎಂದು ನೆಟಿಜನ್‌ಗಳು ಅಭಿಪ್ರಾಯಪಟ್ಟಿದ್ದಾರೆ. ತಾಪ್ಸಿ ಮದುವೆಗೆ ಹಾರೈಸಿದ್ದಾರೆ.
ತಾಪ್ಪಿ – ಮಥಿಯಾಸ್ ಅವರ ವಿವಾಹವು ರಾಜಸ್ಥಾನದ ಉದಯ್ ಪುರದಲ್ಲಿ ನಡೆದಿದೆ. ವಿವಾಹ ಸಮಾರಂಭ ಕೆಲವೇ ಕೆಲ ಆತ್ಮೀಯರ ಸಮ್ಮುಖದಲ್ಲಿ ನೆರವೇರಿದೆ. ಮಾರ್ಚ್ 20 ರಂದು ಮದುವೆಯ ಪೂರ್ವ ಸಂಭ್ರಮಗಳು ಪ್ರಾರಂಭವಾಗಿದ್ದವು ಎಂದು ವರದಿಯಾಗಿದೆ.
ತಾಪ್ಸಿ ಶೀಘ್ರದಲ್ಲೇ ತಮ್ಮ ಮದುವೆಯ ವಿಷಯವನ್ನು ಬಹಿರಂಗಪಡಿಸಲಿದ್ದಾರೆ ಎಂದು ಹೇಳಲಾಗಿದೆ. ತಾಪ್ಸಿ ನಿಜವಾಗಿಯೂ ಮದುವೆಯಾಗಿದ್ದಾಳಾ? ಅದನ್ನೇಕೆ ಗೌಪ್ಯವಾಗಿಟ್ಟಿದ್ದೀರಿ? ಈ ಸುದ್ದಿಯಲ್ಲಿ ಅಸಲಿ ಸತ್ಯ ಏನು? ಎಂದು ತಿಳಿಯಬೇಕಿದೆ.
ತಾಪ್ಸಿ ಪನ್ನು ಅವರಿಗೆ ಈಗ 36 ವರ್ಷ ವಯಸ್ಸು. 2010ರಿಂದಲೂ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಸಿನಿಮಾಗಳಲ್ಲಿ ನಟಿಸಿ ಅವರು ಫೇಮಸ್ ಆಗಿದ್ದಾರೆ.