More

  ಮನೇಲಿ ಕಂಬೈನ್ಡ್‌ ಸ್ಟಡಿ ಮಾಡಿ SSLC ಪರೀಕ್ಷೆ ಬರೆದ ತಾಯಿ, ಮಗ

  ಬೆಂಗಳೂರು:  ಸಾಮಾನ್ಯ ಅರ್ಥದಲ್ಲಿ ಶಿಕ್ಷಣ, ಎಂದರೆ ಜ್ಞಾನ, ಕೌಶಲ್ಯ ಮತ್ತು ಜನರು ಒಂದು ಗುಂಪಿನ ಪದ್ಧತಿ ಬೋಧನೆ, ತರಬೇತಿ ಅಥವಾ ಸಂಶೋಧನೆಯ ಮೂಲಕ ಮುಂದಿನ ಪೀಳಿಗೆಗೆ ವರ್ಗಾಯಿಸುವ ವ್ಯವಸ್ಥೆ. ಇದರಲ್ಲಿ ಕಲಿಕೆಯು ಒಂದು ರೂಪ. ಶಿಕ್ಷಣ ಆಗಾಗ್ಗೆ ಇತರರ ಮಾರ್ಗದರ್ಶನದಲ್ಲಿ ನಡೆಯುತ್ತದೆ. ವಿದ್ಯಾಭ್ಯಾಸ ಯಾರೋಬ್ಬರ ಸ್ವತ್ತು ಆಗಿರುವುದಿಲ್ಲ. ಯಾರು ಯಾವಾಗ ಬೇಕಾದ್ರೂ ತಮಗೆ ಇಷ್ಟವಾಗಿರುವ ಶಿಕ್ಷಣವನ್ನು ಪಡೆಯಬಹುದು. ಓದುವ ಹಂಬಲ ಇರುವವರಿಗೆ ವಯಸ್ಸು ಸಂಖ್ಯೆ ಮಾತ್ರ, ಇದನ್ನು ಸಾಕಷ್ಟು ಮಂದಿ ನಿರೂಪಿಸಿದ್ದಾರೆ. ಇಂಥಹದ್ದೆ ಒಂದು ಸ್ಟೋರಿಯನ್ನು ನಾವು ಇಂದು ನಿಮಗೆ ಹೇಳಲಿದ್ದೇವೆ.

  ಇಂದಿನಿಂದ 2023-24ನೇ ಸಾಲಿನ SSLC ವಾರ್ಷಿಕ ಪರೀಕ್ಷೆಗಳು ರಾಜ್ಯದಲ್ಲಿ ಆರಂಭಗೊಳ್ಳಲಿವೆ. ಶಿಕ್ಷಣ ಇಲಾಖೆ ಪರೀಕ್ಷೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದು, ರಾಜ್ಯದ 2,750 ಕೇಂದ್ರಗಳಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆಗಳು ನಡೆಯಲಿವೆ. ಆದರೆ ಯಾದಗಿರಿಯ ಎಕ್ಸಾಮ್​ ಸೆಂಟರ್​​ವೊಂದರಲ್ಲಿ ಯಾತಿ-ಮಗ ಇಬ್ಬರು ಒಟ್ಟಿಗೆ ಪರೀಕ್ಷೆ ಬರೆಯುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

  ಯಾದಗಿರಿಯ ಶಹಾಪೂರ ತಾಲೂಕಿನ ಸಗರ ಗ್ರಾಮದ 32 ವರ್ಷದ ಗಂಗಮ್ಮ ಹಾಗೂ ಮಗ ಮಲ್ಲಿಕಾರ್ಜುನ ಇಂದು ಒಟ್ಟಿಗೇ ಪರೀಕ್ಷೆ ಬರೆಯುತ್ತಿದ್ದಾರೆ. ಇಬ್ಬರೂ ಒಂದೇ ಸೆಂಟರ್‌ನಲ್ಲಿ ಪರೀಕ್ಷೆ ಬರೆಯುತ್ತಿದ್ದಾರೆ.

  ಮಗ ಮಲ್ಲಿಕಾರ್ಜುನ ಇದೇ ಮೊದಲ ಬಾರಿಗೆ ಪರೀಕ್ಷೆ ಬರೆಯುತ್ತಿದ್ದು, ಶಹಾಪುರ ತಾಲೂಕಿನ ಸಗರ ಪರೀಕ್ಷಾ ಕೇಂದ್ರದಲ್ಲಿ ತಾಯಿಯೊಡನೆ ಪರೀಕ್ಷೆ ಬರೆಯುತ್ತಿದ್ದಾನೆ. ಪ್ರಥಮ ಭಾಷೆ ಪರೀಕ್ಷೆಯಾಗಿದ್ದು, ಸರತಿ ಸಾಲಿನಲ್ಲಿ ನಿಂತು ತಾಯಿ ಗಂಗಮ್ಮ ಪರೀಕ್ಷಾ ನೋಂದಣಿ ಸಂಖ್ಯೆಯನ್ನು ಹುಡುಕಿ, ಪರೀಕ್ಷಾ ಕೊಠಡಿಗೆ ತೆರಳಿದರು.

  ಮನೆಯಲ್ಲಿ ಮಗನ ಜತೆ ಕೂತು ಗಂಗಮ್ಮ ಕಂಬೈನ್ಸ್ ಸ್ಟಡಿ ಮಾಡಿದ್ದು, ಇಬ್ಬರೂ ಒಂದೇ ಸೆಂಟರ್‌ನಲ್ಲಿ ಪರೀಕ್ಷೆ ಬರೆಯುತ್ತಿದ್ದಾರೆ.ಮಗನ ಜತೆ ನಾನೂ ಎಕ್ಸಾಂ ಬರೀತಿದ್ದೀನಿ ಅನ್ನೋಕೆ ಬೇಸರ ಇಲ್ಲ, ಖುಷಿ ಇದೆ ನಾನು ಪರೀಕ್ಷೆ ಬರೆಯುತ್ತಿದ್ದೇನೆ ಎಂದು ಗಂಗಮ್ಮ ಹೇಳಿದ್ದಾರೆ.

  ಈ ಮಹಿಳೆ ವಿದ್ಯಾಭ್ಯಾಸ ಕಾರಣಾಂತರಗಳಿಂದ ಕುಟಿಂತ ಆಗಿರಬಹುದು. ಆದರೆ  ಈಕೆ ಮಗನನ್ನು ಓದಿಸುವುದರ ಜತೆ ತಾನೂ ಶಿಕ್ಷಣ ಪಡೆಯ ಬೇಕು ಎನ್ನುವ ಹಂಬ ಇದ್ಯಲ್ಲ ಅದು ಎಷ್ಟೋ ತಾಯಂದಿರಿಗೆ ಮಾದರಿಯಾಗಲಿ, ವಯಸ್ಸಿನ ಹಂಗು ತೊರೆದು ಓದುವ ಹಂಬಲ ಎಲ್ಲರಲ್ಲೂ ಮೂಡಲಿ, ಬೇಸಿಕ್ ಓದು ಬರಹ ಎಲ್ಲರಿಗೂ ಬರುವಂತಾಗಲಿ ಎನ್ನುವುದೆ ಎಲ್ಲರ ಆಶಯವಾಗಿದೆ.

  ಮದುವೆಯಾಗದೆ ತಾಯಿಯಾದೆ, 23ರ ಹರೆಯದಲ್ಲಿ ಎಲ್ಲವನ್ನೂ ನೋಡಿದೆ ಎಂದ್ರು ಶಕೀಲಾ

  ಐಶ್ವರ್ಯ ರೈ ತಾಯಿ ಕೂಡಾ ಅಪ್ರತಿಮ ಚೆಲುವೆ; ಮಗಳನ್ನೇ ಮೀರಿಸುವ ಸುಂದರಿ ಐಶ್​​ ತಾಯಿ

  SSLC ಪರೀಕ್ಷಾ ದಿನವೇ ಶಿವಮೊಗ್ಗದ ಇಬ್ಬರು ವಿದ್ಯಾರ್ಥಿಗಳ ದುರಂತ ಅಂತ್ಯ

  SSLC ಪರೀಕ್ಷಾ ದಿನವೇ ಶಿವಮೊಗ್ಗದ ಇಬ್ಬರು ವಿದ್ಯಾರ್ಥಿಗಳ ದುರಂತ ಅಂತ್ಯ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts