ಐಶ್ವರ್ಯ ರೈ ತಾಯಿ ಕೂಡಾ ಅಪ್ರತಿಮ ಚೆಲುವೆ; ಮಗಳನ್ನೇ ಮೀರಿಸುವ ಸುಂದರಿ ಐಶ್​​ ತಾಯಿ

aishwarya rai
Published on

ಮುಂಬೈ: ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಚಿತ್ರರಂಗವನ್ನು ಹೊರತುಪಡಿಸಿ ಹಲವಾರು ಉದ್ಯಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಐಶ್ವರ್ಯಾ ರೈ ಬಚ್ಚನ್ ಪ್ರಪಂಚದಾದ್ಯಂತ ಹಲವಾರು ಅಭಿಮಾನಿಗಳನ್ನು ಹೊಂದಿರುವ ನಟಿಯರಲ್ಲಿ ಒಬ್ಬರಾಗಿದ್ದಾರೆ.

Aishwarya Rai

ಐಶ್ವರ್ಯಾ 50ರ ಹರೆಯದಲ್ಲೂ ಹೊಸ ನಾಯಕಿಯರಿಗೆ ಪೈಪೋಟಿ ನೀಡುತ್ತಾರೆ. ಐಶ್ವರ್ಯಾ ಇಷ್ಟ ಸುಂದರವಾಗಿದ್ದಾರೆ. ಇಕೆ ತಾಯಿ ಇನ್ನೆಷ್ಟು ಚಂದ ಇರುಬಹುದು ಎನ್ನುವ ಪ್ರಶ್ನೆ ಕೆಲವು ಅಭಿಮಾನಿಗಳಿಗೆ ಬಂದಿರಬಹುದು.  ಈ ಪ್ರಶ್ನೆ ಇದ್ದವರಿಗೆ ನಾವು ಇಂದು ಅವರ ತಾಯಿ ಪರಿಚಯ ಮಾಡಿಕೊಡುತ್ತೇವೆ.

ಐಶ್ವರ್ಯಾ ರೈ ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಅನೇಕ ಸೂಪರ್ ಹಿಟ್ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ನಟಿಯಾಗಿ ಚಿತ್ರರಂಗ ಪ್ರವೇಶಿಸುವ ಮುನ್ನ 1994ರಲ್ಲಿ ವಿಶ್ವಸುಂದರಿ ಆದರು. 50ರ ಹರೆಯದಲ್ಲೂ ಹೊಸ ನಾಯಕಿಯರಿಗೆ ಪೈಪೋಟಿ ನೀಡುತ್ತಾರೆ. ಐಶ್ವರ್ಯಾ ತನ್ನ ಪೋಷಕರ ಥ್ರೋಬ್ಯಾಕ್ ಫೋಟೋವನ್ನು ಇನ್​ಸ್ಟಾಗ್ರಾಮ್​​ನಲ್ಲಿ ಹಂಚಿಕೊಂಡಿದ್ದಾರೆ. ಐಶ್ವರ್ಯಾ ತಾಯಿ ಹೆಸರು ಬೃಂದಾ ರಾಯ್ ರೇಷ್ಮೆ ಸೀರೆಯಲ್ಲಿ, ಚಿನ್ನದ ಆಭರಣಗಳನ್ನು ಧರಿಸಿ, ಸಾಂಪ್ರದಾಯಿಕ ಭಾರತೀಯ ಶೈಲಿಯಲ್ಲಿ ಸೀರೆಯುಟ್ಟು ಸುಂದರವಾಗಿ ಕಾಣಿಸಿಕೊಂಡಿರುವುದನ್ನು ನಾವು ನೋಡಬಹುದಾಗಿದೆ.

ಐಶ್ವರ್ಯಾ ತಾಯಿ ಬೃಂದಾರಾಯ್ ಅವರ ಫೋಟೋ ನೋಡಿ ನೆಟ್ಟಿಗರು ಅಚ್ಚರಿಗೊಂಡಿದ್ದಾರೆ. ಯಾಕೆಂದರೆ.. ಅದರಲ್ಲಿ ಮಗಳು ಐಶ್ವರ್ಯಾಳಿಗಿಂತ ಹೆಚ್ಚು ಸುಂದರಿ.. ಮುದ್ದಾಗಿ ಕಾಣಿಸುತ್ತಾರೆ ಎಂದು ನೆಟ್ಟ್ಇಗರು ಕಾಮೆಂಟ್​​ ಮಾಡುತ್ತಿದ್ದಾರೆ.

aishwaryarai

ಐಶ್ವರ್ಯಾ ಹುಟ್ಟಿದ್ದು ಕರ್ನಾಟಕದ ಮಂಗಳೂರಿನಲ್ಲಿ. ತಂದೆ ಕೃಷ್ಣರಾಜ್ ರೈ ಮತ್ತು ತಾಯಿ ಬೃಂದಾ ರೈ. ಐಶ್ವರ್ಯಾ ರೈ ಬಚ್ಚನ್ ಅವರ ತಂದೆ ಕೃಷ್ಣರಾಜ್ ರೈ  ಸಮುದ್ರ ಜೀವಶಾಸ್ತ್ರಜ್ಞರಾಗಿದ್ದರು. ಈ ಹಿಂದೆ ಮಂಗಳೂರಿನಲ್ಲಿ ನೆಲೆಸಿದ್ದ ರಾಯರು ಐಶ್ವರ್ಯಾ ಹುಟ್ಟಿದ ಕೂಡಲೇ ಮುಂಬೈಗೆ ತೆರಳಿದ್ದರು. ಐಶ್ವರ್ಯಾ ನಾಯಕಿಯಾಗಿ ಪಾದಾರ್ಪಣೆ ಮಾಡಿದ ಆರಂಭದ ದಿನಗಳಲ್ಲಿ ಬೃಂದಾ ರಾಯ್ ತಮ್ಮ ಮಗಳ ಜೊತೆ ಚಿತ್ರದ ಸೆಟ್‌ಗೆ ಬರುತ್ತಿದ್ದರು.

ಐಶ್ವರ್ಯಾ ರೈ ಅವರ ಕಷ್ಟ- ಸುಖಃದಲ್ಲಿ ಅವರ ತಾಯಿ ಬೆನ್ನೆಲುಬಾಗಿ ನಿಂತಿದ್ದಾರೆ. ಕೃಷ್ಣರಾಜ್ ರೈ ಮಾರ್ಚ್ 2017 ರಲ್ಲಿ ನಿಧನರಾದರು. ನಂತರ ಬೃಂದಾ ರೈ ಅವರು ಮಗಳ ಕುಟುಂಬದ ಜತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ.

aishwaryarai

ಐಶ್ವರ್ಯಾ ರೈ ಬಚ್ಚನ್ ಅವರ ಹೆಚ್ಚಿನ ಸಾರ್ವಜನಿಕ  ಕಾರ್ಯಕ್ರಮ ಮತ್ತು ಇನ್‌ಸ್ಟಾಗ್ರಾಮ್​ನಲ್ಲಿ ನಟಿ ತನ್ನ ತಾಯಿ ಬೃಂದಾ ರೈಗೆ ಅವರ ಜತೆ ಕಾಣಿಸಿಕೊಳ್ಳುತ್ತಾರೆ. ಐಶ್ವರ್ಯ ರೈ ಸಹೋದರ ಆದಿತ್ಯ ರೈ  ಜೊತೆ ನಿಕಟ ಬಾಂಧವ್ಯವನ್ನು ಹಂಚಿಕೊಂಡಿದ್ದಾರೆ.

ಐಶ್ವರ್ಯಾ ಅವರ ಮಗಳು ಆರಾಧ್ಯ ಬಚ್ಚನ್ ಕೂಡ ತಾಯಿಯಂತೆ ಕಾಣುತ್ತಿದ್ದಾರೆ. ಇತ್ತೀಚೆಗೆ  ಅಂಬಾನಿ ಕುಟುಂಬದ ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ಆರಾಧ್ಯ ಬಚ್ಚನ್ ಕಾಣಿಸಿಕೊಂಡಿದ್ದರು. ಆರಾಧ್ಯ ನ್ಯೂ ಲುಕ್​ ಅಭಿಮಾನಿಗಳಿಗೆ ಸಖತ್​ ಇಷ್ಟವಾಗಿತ್ತು. ಐಶ್ವರ್ಯಾ ನಂತರ ಆರಾಧ್ಯ ಕೂಡ ಒಳ್ಳೆಯ ಮನ್ನಣೆ ಪಡೆಯಲಿದ್ದಾರೆ ಅನ್ನೋದು ಅಭಿಮಾನಿಗಳ ಮಾತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net