ಇಂದು ರಕ್ತದಾನ ಶಿಬಿರ, ವೆಬ್‌ಸೈಟ್ ಅನಾವರಣ

blood camp 1
Published on

ಕಾರ್ಕಳ: ಕೊಳಕೆ ಇರ್ವತ್ತೂರು ಬೆಳಕು ಚಾರಿಟೆಬಲ್ ಟ್ರಸ್ಟ್ ನೇತೃತ್ವದಲ್ಲಿ ರೋಟರಿ ಕ್ಲಬ್ ಕಾರ್ಕಳ ಸಿಟಿ, ಸ.ಪ.ಪೂ ಕಾಲೇಜು ಸಾಣೂರು, ಯುವವಾಹಿನಿ ಕಾರ್ಕಳ ಘಟಕದ ಆಶ್ರಯದಲ್ಲಿ ಜಿಲ್ಲಾ ಆಸ್ಪತ್ರೆ ರಕ್ತನಿಧಿ ವಿಭಾಗ ಅಜ್ಜರಕಾಡು ಉಡುಪಿ ಸಹಯೋಗದಲ್ಲಿ ರಕ್ತದಾನ ಶಿಬಿರ ಹಾಗೂ ವೆಬ್‌ಸೈಟ್ ಅನಾವರಣ ಕಾರ್ಯಕ್ರಮ ಏ.28ರಂದು ಬೆಳಗ್ಗೆ 9.30ರಿಂದ ಸರ್ಕಾರಿ ಪದವಿಪೂರ್ವ ಕಾಲೇಜು ಸಾಣೂರಲ್ಲಿ ನಡೆಯಲಿದೆ.

10.30ಕ್ಕೆ ನಡೆಯುವ ಸಭಾ ಕಾರ್ಯಕ್ರಮವನ್ನು ಹವಾಲ್ದಾರ್ ತಿಲಕ್ ಎಸ್.ಪಿ ಉದ್ಘಾಟಿಸುವರು. ಬೆಳಕು ಚಾರಿಟೆಬಲ್ ಟ್ರಸ್ಟ್ ಟ್ರಸ್ಟಿ ಅಕ್ಷತಾ ಅಧ್ಯಕ್ಷತೆ ವಹಿಸಲಿದ್ದಾರೆ. ಸಾಣೂರು ಸ.ಪ.ಪೂ. ಕಾಲೇಜು ಪ್ರಾಂಶುಪಾಲೆ ಸುಜೇತಾ ಕಾಮತ್ ವೆಬ್‌ಸೈಟ್ ಅನಾವರಣಗೊಳಿಸುವರು. ರೋಟರಿ ಕ್ಲಬ್ ಕಾರ್ಕಳ ರಾಕ್‌ಸಿಟಿ ಅಧ್ಯಕ್ಷ ಸುರೇಶ್ ನಾಯಕ್, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಅಶೋಕ್ ಶೆಟ್ಟಿ, ಅಜ್ಜರಕಾಡು ಜಿಲ್ಲಾಸ್ಪತ್ರೆ ರಕ್ತನಿಧಿ ವಿಭಾಗ ಮುಖ್ಯಸ್ಥೆ ಡಾ.ವೀಣಾಕುಮಾರಿ, ಉದ್ಯಮಿ ಶಶಿಕಾಂತ್ ಶೆಟ್ಟಿಗಾರ್, ಪತ್ರಕರ್ತ ಬಾಲಕೃಷ್ಣ ಭೀಮಗುಳಿ, ಯುವವಾಹಿನಿ ಘಟಕ ಅಧ್ಯಕ್ಷ ಅರುಣ್ ಕುಮಾರ್ ಭಾಗವಹಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net