More

  ಬಾಲಕಿ ದತ್ತು ಪ್ರಕರಣ: ರೀಲ್ಸ್​ ರಾಣಿ ಸೋನು ಶ್ರೀನಿವಾಸ್​ ಗೌಡ ಪೊಲೀಸ್​ ವಿಚಾರಣೆ ವೇಳೆ ಹೇಳಿದ್ದಿಷ್ಟು…

  ಬೆಂಗಳೂರು: ಬಾಲಕಿಯನ್ನು ದತ್ತು ತೆಗೆದುಕೊಳ್ಳುವ ಪ್ರಕ್ರಿಯೆ ಅಷ್ಟಾಗಿ ಗೊತ್ತಿರಲಿಲ್ಲ. ಗೊತ್ತಿದ್ದರೆ ಅದರ ಪ್ರಕಾರವೇ ನಡೆದುಕೊಳ್ಳುತ್ತಿದ್ದೆ ಎಂದು ಬಿಗ್​ಬಾಸ್ ಕನ್ನಡ ಒಟಿಟಿ ಸೀಸನ್​ 1ರ ಸ್ಪರ್ಧಿ ಹಾಗೂ ರೀಲ್ಸ್​ ಸ್ಟಾರ್​ ಸೋನು ಶ್ರೀನಿವಾಸ್​ ಗೌಡ, ಪೊಲೀಸ್​ ವಿಚಾರಣೆ ವೇಳೆ ಹೇಳಿದ್ದಾಳೆ.

  ಪುಟ್ಟ ಹುಡುಗಿಯನ್ನು ದತ್ತು ಪಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಡರಹಳ್ಳಿ ಠಾಣಾ ಪೊಲೀಸರು ಇಂದು (ಮಾರ್ಚ್​ 22) ಬೆಳಗ್ಗೆ ಸೋನು ಶ್ರೀನಿವಾಸ್ ಗೌಡಳನ್ನು ಬಂಧಿಸಿದ್ದಾರೆ. ಪುಟ್ಟ ಬಾಲಕಿಯನ್ನು ಅನಧಿಕೃತವಾಗಿ ತಮ್ಮ ಮನೆಯಲ್ಲಿ ಇಟ್ಟುಕೊಂಡಿರುವ ಆರೋಪ ಸೋನು ವಿರುದ್ಧ ಕೇಳಿಬಂದಿದೆ. ಈ ಸಂಬಂಧ ರಾಜ್ಯ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಗೀತಾ ದೂರು ನೀಡಿದ್ದರು.

  ಹಿನ್ನೆಲೆಯಲ್ಲಿ ಮಕ್ಕಳ ರಕ್ಷಣಾ ಇಲಾಖೆ ಅಧಿಕಾರಿಗಳು ಮತ್ತು ಬ್ಯಾಡರಹಳ್ಳಿ ಠಾಣಾ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ, ಸೋನು ಶ್ರೀನಿವಾಸ್​ ಗೌಡಳನ್ನು ಬಂಧಿಸಿದ್ದಾರೆ. ಸೋನು ವಿರುದ್ಧ ರಾಜ್ಯ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಗೀತಾ ದೂರು ನೀಡಿದ್ದರು. ಬಳಿಕ ಬಾಲಾಪರಾಧ ಕಾಯ್ದೆ ಹಾಗೂ ಜೆ.ಜೆ.ಆ್ಯಕ್ಟ್ ಅಡಿ ಎಫ್​ಐಆರ್​ ದಾಖಲಿಸಿ ಸೋನು ಶ್ರೀನಿವಾಸ್​ ಗೌಡಳನ್ನು ಬಂಧಿಸಲಾಗಿದೆ.

  ಪೊಲೀಸ್​ ವಿಚಾರಣೆ ವೇಳೆ ದತ್ತು ಪಡೆದುಕೊಳ್ಳುವುದು ಇಷ್ಟು ದೊಡ್ಡ ಪ್ರಕ್ರಿಯೆ ಎನ್ನುವುದು ಗೊತ್ತಿರಲಿಲ್ಲ ಎಂದು ಸೋನು ಹೇಳಿದ್ದಾಳೆ. ನಾನು ವಾಸವಿರುವ ಅಪಾರ್ಟ್​ಮೆಂಟ್​ ಕೆಳಗೆ ಗಾರೆ ಕೆಲಸ ಮಾಡುತ್ತಿದ್ದ ರಾಯಚೂಡು ಮೂಲದ ದಂಪತಿ ಮಗಳು ಆಕೆ. ನಾನು ನಾಯಿಗೆ ಬಿಸ್ಕೆಟ್​ ಹಾಕುವಾಗ ಆಕೆ ನನ್ನ ಬಳಿ ಬಂದಳು. ಬಳಿಕ ನಾನು ಆಕೆಗೆ ಚಾಕೋಲೆಟ್​ ಕೊಡಿಸಿದೆ. ಬಳಿಕ ನಮ್ಮ ಮನೆಗೆ ಬಂದು ಆಟವಾಡುತ್ತಿದ್ದಳು. ಇದರಿಂದ ನನಗೆ ತುಂಬಾ ಹತ್ತಿರವಾಗಿಬಿಟ್ಟಳು. ಇಬ್ಬರು ಒಬ್ಬರೊನ್ನೊಬ್ಬರು ಬಿಟ್ಟಿರಲಾರದಷ್ಟು ಹಚ್ಚಿಕೊಂಡೆವು ಎಂದು ಸೋನು ಶ್ರೀನಿವಾಸ್​ ಗೌಡ ಹೇಳಿದ್ದಾಳೆ.

  ದಂಪತಿ ತಮ್ಮ ಮಗಳನ್ನು ರಾಯಚೂರಿನಲ್ಲಿರುವ ಹುಟ್ಟೂರಿಗೆ ಕರೆದೊಯ್ದ ಬಳಿಕವೂ ಆಕೆ ನನ್ನ ಬಗ್ಗೆಯೇ ಮಾತನಾಡುತ್ತಿದ್ದಳಂತೆ. ನನ್ನನ್ನು ಕೇಳಿತ್ತಿದ್ದಳಂತೆ. ಅಲ್ಲದೆ, ನನ್ನದೇ ನೆನಪಿನಲ್ಲಿ ಹುಷಾರಿರಲಿಲ್ಲವಂತೆ. ಅಕ್ಕನ್ನು ನೋಡಬೇಕು ಅನ್ನುತ್ತಿದ್ದಳಂತೆ. ಈ ವಿಚಾರವನ್ನು ಬಾಲಕಿಯ ತಾಯಿ ನನಗೆ ತಿಳಿಸಿದಾಗ ನನಗೆ ತುಂಬಾ ಬೇಸರವಾಯಿತು. ಕೂಡಲೇ ಅವರ ಮನೆಗೆ ತೆರಳಿ, ನಾನೇ ಸಾಕಿಕೊಳ್ಳುತ್ತೇನೆಂದು ಹೇಳಿ ಕರೆದುಕೊಂಡು ಬಂದೆ.

  ಆಕೆಯನ್ನು ದತ್ತು ಪಡೆಯಲು ತಯಾರಿ ಮಾಡಿಕೊಳ್ಳುತ್ತಿದ್ದೆ. ಆಕೆಯನ್ನು ತುಂಬಾ ಹಚ್ಚಿಕೊಂಡಿದ್ದರಿಂದ ಅವಳನ್ನು ಜೀವನಪೂರ್ತಿ ನನ್ನೊಂದಿಗೆ ಇರಿಸಿಕೊಳ್ಳಲು ಬಯಸಿದ್ದೇನೆ. ನಾನು ಮದುವೆಯಾಗದೇ ಆಕೆಯನ್ನು ನೋಡಿಕೊಂಡು ಇರಲು ಮತ್ತು ನಾನು ಸಂಪಾದಿಸಿದ ಹಣವನ್ನು ಆಕೆಗೆ ಒಳ್ಳೆಯ ಜೀವನವನ್ನು ರೂಪಿಸಲು ಬಯಸಿದ್ದೆ. ಆದರೆ, ದತ್ತು ಪಡೆಯುವುದು ಇಷ್ಟೊಂದು ದೊಡ್ಡ ಪ್ರಕ್ರಿಯೆ ಎಂದು ನನಗೆ ಗೊತ್ತೇ ಇರಲಿಲ್ಲ. ಗೊತ್ತಿದ್ದಾರೆ ಈ ರೀತಿ ಆಗಲು ನಾನು ಬಿಡುತ್ತಿರಲಿಲ್ಲ. ಕಾನೂನಿನ ಪ್ರಕ್ರಿಯೆಯ ಮೂಲಕವೇ ದತ್ತು ಪಡೆಯುತ್ತಿದೆ ಎಂದು ಸೋನು ಶ್ರೀನಿವಾಸ್​ ಗೌಡ ವಿಚಾರಣೆ ವೇಳೆ ಹೇಳಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.

  ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಸೋನು ಶ್ರೀನಿವಾಸ್​ ಗೌಡ, ಕೆಲ ತಿಂಗಳುಗಳ ಹಿಂದಷ್ಟೇ ಬಡ ಬಾಲಕಿಯನ್ನು ದತ್ತು ಪಡೆದಿರುವ ಬಗ್ಗೆ ವಿಡಿಯೋ ಮೂಲಕ ಸ್ವತಃ ಅವರೇ ತಿಳಿಸಿದ್ದರು. ಈ ವೇಳೆ ಸಾಕಷ್ಟು ಟ್ರೋಲ್​ ಕೂಡ ಆಗಿತ್ತು. ಅನುಕಂಪ ಗಿಟ್ಟಿಸಲು ದತ್ತು ಪಡೆದಿದ್ದಾಳೆ. ತನ್ನ ವಿರುದ್ಧ ಜನರಿಗೆ ಇರುವ ಕೆಟ್ಟ ಅಭಿಪ್ರಾಯವನ್ನು ತೊಡೆದುಹಾಕಲು ದತ್ತು ಪಡೆದಿರುವ ನಾಟಕ ಆಡುತ್ತಿದ್ದಾಳೆ ಎಂದು ನೆಟ್ಟಿಗರು ಸೋನು ಶ್ರೀನಿವಾಸ ಗೌಡಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದರು.

  ಆದರೆ, ನೆಟ್ಟಿಗರು ಏನೇ ಅಂದರು ಅದರ ಬಗ್ಗೆ ತಲೆ ಕೆಡಿಸಿಕೊಳ್ಳದ ಸೋನು ಶ್ರೀನಿವಾಸ ಗೌಡ 7 ರಿಂದ 8 ವರ್ಷದ ಪುಟ್ಟ ಬಾಲಕಿಯನ್ನು ತನ್ನ ಜತೆಯಲ್ಲೇ ಇರಿಸಿಕೊಂಡಿದ್ದಳು. ಬಾಲಕಿಯೊಂದಿಗೆ ಶಾಪಿಂಗ್​ ಹಾಗೂ ರೀಲ್ಸ್​ ಮಾಡುವ ವಿಡಿಯೋ ಪೋಸ್ಟ್​ ಮಾಡುತ್ತಿದ್ದಳು. ಆಕೆಗೆ ಆಕೈರೆ ಮಾಡುವ ವಿಡಿಯೋ ಸಹ ಹಂಚಿಕೊಳ್ಳುತ್ತಿದ್ದಳು. ಇದರಿಂದ ಕೆಲವರ ಅಭಿಪ್ರಾಯವೂ ಸಹ ಬದಲಾಗಿತ್ತು. ಕಳೆದ ಮೂರು ತಿಂಗಳಿಂದ ನನಗೆ ಪಾಸಿಟಿವ್​ ಕಾಮೆಂಟ್​​ಗಳು ಹೆಚ್ಚಾಗಿ ಬರುತ್ತಿವೆ. ಬಹುಶಃ ಈಕೆಯನ್ನು ದತ್ತು ಪಡೆದುಕೊಂಡಿದ್ದಕ್ಕೆ ಇರಬಹುದು ಎಂದು ಸ್ವತಃ ಸೋನು ಶ್ರೀನಿವಾಸ್​ ಗೌಡ ವಿಡಿಯೋವೊಂದರಲ್ಲಿ ಹೇಳಿಕೊಂಡಿದ್ದಳು.

  ಚುನಾವಣೆ ವೇಳೆ ಈ ವಸ್ತುವನ್ನು ನೋಡಿದ್ರೆ ಸೂಪರ್​ಸ್ಟಾರ್​ ರಜಿನಿಗೆ ಉಸಿರಾಡಲು ಕೂಡ ಭಯವಾಗುತ್ತಂತೆ!

  ನಿಜಕ್ಕೂ ಅವರನ್ನು ಪತಿಯನ್ನಾಗಿ ಪಡೆಯಲು ನಾನು ಪುಣ್ಯ ಮಾಡಿದ್ದೆ: ನಟಿ ಮಹಾಲಕ್ಷ್ಮೀ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts