More

    ಸ್ವಾವಲಂಬಿ ಬದುಕಿಗೆ ಹೊಸ ರೂಪ ನೀಡಿದ ಕೇಂದ್ರದ ಯೋಜನೆಗಳು

    ಕಡೂರು: ಈ ಬಾರಿಯ ಲೋಕಸಭೆ ಚುನಾವಣೆ ರಾಷ್ಟ್ರಭಕ್ತರು ಮತ್ತು ರಾಷ್ಟ್ರಘಾತುಕರ ನಡುವೆ ನಡೆಯಲಿದ್ದು, ಎನ್‌ಡಿಎ 400ಕ್ಕೂ ಹೆಚ್ಚು ಸ್ಥಾನ ಗಳಿಸುವ ಮೂಲಕ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ ಎಂದು ಸಮೀಕ್ಷೆಗಳು ತಿಳಿಸಿವೆ ಎಂದು ಮಾಜಿ ಸಚಿವ ಸಿ.ಟಿ.ರವಿ ತಿಳಿಸಿದರು.
    ಚಿಕ್ಕದೇವನೂರು ಗ್ರಾಮದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಕ್ಸಲ್ ಬೆಂಬಲಿಗರು, ಏಕತೆಯ ವಿರೋಧಿಗಳು, ಸಂವಿಧಾನ ಬದಲಿಸುವ ಹೇಳಿಕೆ ನೀಡುವ ಡಿಎಂಕೆ ಪಕ್ಷದಂತಹ ಸಿದ್ದಾಂತ ರಹಿತ ಪಕ್ಷಗಳು ಇಂಡಿಯಾದ ಒಕ್ಕೂಟದಲ್ಲಿವೆ. ಆದರೆ ಮೋದಿ ಅವರು ಯುವಸಮೂಹ, ರೈತಾಪಿ ವರ್ಗ, ಮಹಿಳೆಯರು ಮತ್ತು ಬಡವರ ಪರ ಅನೇಕ ಕಾರ್ಯಕ್ರಮಗಳನ್ನು ದೇಶಕ್ಕೆ ಕೊಡುಗೆಯಾಗಿ ನೀಡುವ ಮೂಲಕ ಸ್ವಾವಲಂಬಿ ಬದುಕಿಗೆ ಹೊಸ ರೂಪ ನೀಡಿದ್ದಾರೆ ಎಂದರು.
    ಜಿಲ್ಲೆಯಲ್ಲಿಯೂ ಕೇಂದ್ರ ಸರ್ಕಾರದ ಸಹಯೋಗದಲ್ಲಿ ಮೆಡಿಕಲ್ ಕಾಲೇಜು, ಸೂಪರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ರೈಲ್ವೆ ಅಭಿವೃದ್ಧಿ ,ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಪಿಎಂ ವಿಶ್ವಕರ್ಮ ಯೋಜನೆಯಡಿ ವಿವಿಧ ಕುಶಲಕರ್ಮಿಗಳಿಗೆ ಆರ್ಥಿಕ ನೆರವು ನೀಡಲಾಗಿದೆ. ಅಧುನಿಕ ತಂತ್ರಜ್ಞಾನದ ಜತೆಗೆ ಕೌಶಲ್ಯದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದೆ. ರಾಷ್ಟ್ರ ಭಕ್ತರ ನೇತೃತ್ವವನ್ನು ಎನ್‌ಡಿಎ ವಹಿಸಿಕೊಂಡರೆ ಕಾಂಗ್ರೆಸ್ ರಾಷ್ಟ್ರಘಾತಕರ ನೇತೃತ್ವವನ್ನು ಇಂಡಿಯಾ ಒಕ್ಕೂಟಗಳು ವಹಿಸಿಕೊಂಡಿದೆ ಎಂದು ಕಿಡಿಕಾರಿದರು.
    ಉಡುಪಿ-ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದ ಬಿಜೆಪಿ ನಿಯೋಜಿತ ಅಭ್ಯರ್ಥಿ ಕೋಟಾ ಶ್ರೀ ನಿವಾಸ ಪೂಜಾರಿ ಮಾತನಾಡಿ, ರಾಜ್ಯದ 7 ಕೋಟಿ ಜನರ ಆತ್ಮವಾದ ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ್ದು ದೇಶ ಪ್ರೇಮಿಗಳಲ್ಲಿ ಬೇಸರ ಮೂಡಿಸಿದೆ. ಹಾಗಾಗಿ ದೇಶದದಲ್ಲಿ ಭದ್ರತೆ ಸೃಷ್ಟಿಸಲು ಮತ್ತು ಭಯೋತ್ಪಾದನೆಯನ್ನು ದೇಶದಿಂದ ಹೋಗಲಾಡಿಸಲು ಸಮರ್ಥ ಸರ್ಕಾರದ ಅಗತ್ಯವಿದೆ. 10 ವರ್ಷಗಳಲ್ಲಿ ನರೇಂದ್ರ ಮೋದಿ ಸರ್ಕಾರ ಜಾರಿಗೆ ತಂದ ಕಾರ್ಯಕ್ರಮಗಳು ಜನರ ಮನಸ್ಸಿನಲ್ಲಿವೆ ಎಂದರು.
    ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ ಶೆಟ್ಟಿ, ಮಾಜಿ ಅಧ್ಯಕ್ಷ ಎಚ್.ಸಿ.ಕಲ್ಮುರುಡಪ್ಪ, ಜಿಲ್ಲಾ ವಕ್ತಾರ ಕೆ.ಆರ್. ಮಹೇಶ್ ಒಡೆಯರ್, ಮುಖಂಡರಾದ ಚಿಕ್ಕದೇವನೂರು ರವಿ, ಜಿ.ಎನ್. ವಿಜಯಕುಮಾರ್, ಸೋಮಶೇಖರ್, ಈಶ್ವರಹಳ್ಳಿ ಮಹೇಶ್, ಶಾಮಿಯಾನ ಚಂದ್ರು, ಎ.ಮಣಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts