More

  ಜನರೇ ಎಚ್ಚರ! ನೀವು ಈ ಗುಂಪಿನಲ್ಲಿದ್ರೆ ಈಗಲೇ ಎಚ್ಚೆತ್ತುಕೊಳ್ಳಿ ಇಲ್ಲದಿದ್ರೆ ಪಶ್ಚಾತಾಪ ಪಡುವ ದಿನ ದೂರವಿಲ್ಲ

  ಒಳ್ಳೆಯ ನಿದ್ರೆಯನ್ನು ಯಾರು ತಾನೇ ಬಯಸುವುದಿಲ್ಲ. ನಿದ್ರೆ ನಮ್ಮ ದೇಹಕ್ಕೆ ತುಂಬಾ ಅವಶ್ಯಕ. ಕೊರತೆಯಾದಲ್ಲಿ ದೇಹದಲ್ಲಿ ನಾನಾ ಸಮಸ್ಯೆಗಳು ಕಾಣಿಸಿಕೊಳ್ಳಲು ಆರಂಭಿಸುತ್ತದೆ. ದಿನನಿತ್ಯದ ಕೆಲಸ ಮತ್ತು ಓದಿನ ನಂತರ ಎಲ್ಲರು ರಾತ್ರಿಯ ನಿದ್ರೆಯನ್ನು ಬಯಸುತ್ತಾರೆ. ಕೆಲವರಿಗೆ ಮಲಗಿದ ತಕ್ಷಣ ನಿದ್ರೆ ಬಂದರೆ, ಇನ್ನು ಕೆಲವರು ನಿದ್ರೆಗಾಗಿ ಒದ್ದಾಡಿ ಕೊನೆಗೆ ಕಣ್ಣು ಮುಚ್ಚುತ್ತಾರೆ. ಕೆಲವರಿಗಂತೂ ಎಷ್ಟೇ ಒದ್ದಾಡಿದರೂ ನಿದ್ರೆಯೇ ಬುರುವುದಿಲ್ಲ. ತಜ್ಞರ ಪ್ರಕಾರ ಯುವಕರು ಪ್ರತಿದಿನ 7 ರಿಂದ 9 ಗಂಟೆಗಳ ಕಾಲ ಮಲಗಬೇಕು. ಆದರೆ ಇತ್ತೀಚಿನ ಅಧ್ಯಯನವೊಂದರಲ್ಲಿ ಆಘಾತಕಾರಿ ಮಾಹಿತಿ ಹೊರಬಂದಿದೆ. ಶೆ. 61 ಕ್ಕಿಂತ ಹೆಚ್ಚಿನ ಭಾರತೀಯರು ಆರು ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡುತ್ತಾರೆ ಎಂದು ಕಂಡುಬಂದಿದೆ.

  ಈ ಅಧ್ಯಯನಕ್ಕೆ ಭಾರತದ ಒಂದು ಪ್ರದೇಶದ ಜನರನ್ನು ಬಳಸಿಕೊಳ್ಳಲಾಗಿದೆ. ಅವರಲ್ಲಿ 61 ಪ್ರತಿಶತದಷ್ಟು ಜನರು ಆರು ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡುತ್ತಾರೆ ಎಂದು ತಿಳಿದುಬಂದಿದೆ. ವರದಿಯ ಪ್ರಕಾರ, ಶೇ. 38 ರಷ್ಟು ಜನರು ಕೇವಲ ನಾಲ್ಕರಿಂದ ಆರು ಗಂಟೆಗಳ ನಿದ್ದೆ ಮಾಡುತ್ತಾರೆ. 23 ರಷ್ಟು ಜನರು ನಾಲ್ಕು ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡುತ್ತಾರೆ.

  ಇದೇ ಅಧ್ಯಯನದಲ್ಲಿ ಮಹಾಮಾರಿ ಕೋವಿಡ್ -19 ಮತ್ತು ನಿದ್ರೆಯ ನಡುವಿನ ಸಂಬಂಧವನ್ನು ಸಹ ಕಂಡುಹಿಡಿಯಲಾಗಿದೆ. ಅಧ್ಯಯನಕ್ಕೆ ಆಯ್ಕೆಯಾದ ಶೇ. 26 ರಷ್ಟು ಜನರು ಕೋವಿಡ್ ನಂತರ ಕಡಿಮೆ ನಿದ್ರೆ ಹೊಂದಿದ್ದಾರೆ ಎಂದು ಹೇಳಿದ್ದಾರೆ. ಆದರೆ 59 ಪ್ರತಿಶತ ಜನರು ಸಾಂಕ್ರಾಮಿಕ ರೋಗದ ಮೊದಲಿನಂತೆಯೇ ಚೆನ್ನಾಗಿ ನಿದ್ರಿಸುತ್ತಿದ್ದಾರೆ. ಕೋವಿಡ್ ನಂತರ ತಮ್ಮ ನಿದ್ರೆ ಸುಧಾರಿಸಿದೆ ಎಂದು ಶೇ.5 ಮಂದಿ ಹೇಳಿದ್ದಾರೆ.

  ನಿದ್ರೆಯ ಕೊರತೆ ಏಕೆ?
  ಅಧ್ಯಯನದಲ್ಲಿ ಭಾಗವಹಿಸಿದವರಲ್ಲಿ 72 ಪ್ರತಿಶತದಷ್ಟು ಜನರು ಮಲಗುವ ಸಮಯದ ನಡುವೆ ಒಂದು ಅಥವಾ ಹೆಚ್ಚು ಬಾರಿ ಶೌಚಾಲಯಕ್ಕೆ ಹೋಗುತ್ತಾರೆ. ಇದು ಅವರ ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ. ಪ್ರತಿಕ್ರಿಯಿಸಿದವರಲ್ಲಿ ಶೇ. 43 ರಷ್ಟು ಜನರು ತಡವಾಗಿ ಮಲಗುತ್ತಾರೆ ಮತ್ತು ಮನೆಕೆಲಸಗಳನ್ನು ಮಾಡಲು ಬೆಳಿಗ್ಗೆ ಬೇಗನೆ ಏಳುತ್ತಾರೆ. ಇದರಿಂದ ಅವರಿಗೆ ಸರಿಯಾಗಿ ನಿದ್ದೆ ಬರುವುದಿಲ್ಲ. ಸೊಳ್ಳೆಗಳು, ಇತರ ಶಬ್ದಗಳು, ಫೋನ್ ಕರೆಗಳು ಇತ್ಯಾದಿಗಳು ನಿದ್ರೆಯ ಸಮಯದಲ್ಲಿ ಅಡ್ಡಿಪಡಿಸಬಹುದು ಎಂದು ಅಧ್ಯಯನವು ಕಂಡುಹಿಡಿದಿದೆ.

  ಒಬ್ಬ ವ್ಯಕ್ತಿಯು ದಿನಕ್ಕೆ 7-9 ಗಂಟೆಗಳ ಕಾಲ ಮಲಗಬೇಕು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಇಷ್ಟು ಸಮಯ ನಿದ್ದೆ ಮಾಡದಿದ್ದರೆ ಅನೇಕ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಗಮನ ಕೊರತೆ, ಶಕ್ತಿಯ ಕೊರತೆ ಸೇರಿದಂತೆ ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು. ನೀವು ರಾತ್ರಿಯ ನಿದ್ರೆಯನ್ನು ಸರಿಯಾಗಿ ಮಾಡದಿದ್ದರೆ, ನೀವು ರಕ್ತದೊತ್ತಡ ಮತ್ತು ಮಧುಮೇಹದಂತಹ ಜೀವನಶೈಲಿ ಕಾಯಿಲೆಗಳಿಂದ ಬಳಲುವ ಸಾಧ್ಯತೆಯಿದೆ. ಒಂದು ವೇಳೆ ನೀವು ಉತ್ತಮ ನಿದ್ರೆಯನ್ನು ಪಡೆಯದಿದ್ದರೆ, ನಿಮ್ಮ ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ. ಆತಂಕ ಮತ್ತು ಖಿನ್ನತೆ ಉಂಟಾಗುವ ಸಾಧ್ಯತೆ ಹೆಚ್ಚು. (ಏಜೆನ್ಸೀಸ್​)

  ಒಂದು ಕಾಲದಲ್ಲಿ ಬ್ಯೂಟಿ ಸ್ಟಾರ್​ ಆಗಿದ್ದ ಈ ನಟಿ ಇಂದು 100 ರೂಪಾಯಿಗೂ ಪರದಾಟ!

  ಸಾವಿನ ದಿನ ಹೇಳಬಲ್ಲ ಕೃತಕ ಬುದ್ಧಿಮತ್ತೆ ಅಭಿವೃದ್ಧಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts