More

    ಸಾವಿನ ದಿನ ಹೇಳಬಲ್ಲ ಕೃತಕ ಬುದ್ಧಿಮತ್ತೆ ಅಭಿವೃದ್ಧಿ

    ಕಾಂಗೆನ್ಸ್ ಲಿಂಗ್ಬಿ (ಡೆನ್ಮಾರ್ಕ್): ಕೃತಕ ಬುದ್ಧಿಮತ್ತೆ ಲೆಕ್ಕಾಚಾರ (ಎಐ ಅಲ್ಗಾರಿದಂ) ಬಳಸಿ ವ್ಯಕ್ತಿಯೊಬ್ಬರ ಆಯಸ್ಸಿನ ಭವಿಷ್ಯ ನುಡಿಯುವ ತಂತ್ರಜ್ಞಾನವನ್ನು ರೂಪಿಸಲು ಡೆನ್ಮಾರ್ಕ್​ನ ಸಂಶೋಧಕರು ಪ್ರಯತ್ನಿಸುತ್ತಿದ್ದಾರೆ. ಅದಕ್ಕಾಗಿ ಅವರು ಸುಮಾರು 60 ಲಕ್ಷ ಅನಾಮಿಕ ದತ್ತಾಂಶಗಳ ವಿಶ್ಲೇಷಣೆ ನಡೆಸಿದ್ದಾರೆ. ಆಯಸ್ಸಿನ ಭವಿಷ್ಯ ಹೇಳುವ ತಂತ್ರಜ್ಞಾನಕ್ಕೆ ಲೈಫ್2ವೆಕ್ ಮಾದರಿ ಎಂದು ಹೆಸರಿಸಲಾಗಿದೆ.

    ವ್ಯಕ್ತಿಯೊಬ್ಬರ ಜೀವನದ ನಾನಾ ಹಂತಗಳನ್ನು ಹಾಗೂ ಸಾವಿನ ಬಗ್ಗೆ ಭವಿಷ್ಯ ಹೇಳಲು ಇದು ನೆರವಾಗುತ್ತದೆ. ಈ ತಂತ್ರಜ್ಞಾನದಲ್ಲಿ ಅಪಾಯವೂ ಅಡಗಿರುವುದು ಆತಂಕಕ್ಕೆ ಕಾರಣವಾಗಿದೆ. ಯಾವುದೇ ಕಲ್ಪನಾಲೋಕವನ್ನೂ ಮೀರಿದ ಲೈಫ್2ವೆಕ್​ನ ಸೃಷ್ಟಿಕರ್ತರು, ಜೀವನದ ಆರೋಗ್ಯ ಹಾಗೂ ಸಾಮಾಜಿಕ ‘ಜೀವನ-ಘಟನಾವಳಿ’ಗಳ ಬಗ್ಗೆ ಭವಿಷ್ಯ ನುಡಿಯುವುದನ್ನು ಆವಿಷ್ಕರಿಸುವ ಹಂಬಲದಲ್ಲಿದ್ದಾರೆ. ‘ಮಾನವ ಜೀವನದ ಬಗ್ಗೆ ಭವಿಷ್ಯ ನುಡಿಯುವ ಅತಿ ಸಾಮಾನ್ಯ ಚೌಕಟ್ಟು ಇದಾಗಿದೆ. ಅದು ಯಾವುದರ ಬಗ್ಗೆಯೂ ಭವಿಷ್ಯ ಹೇಳಬಲ್ಲದು’ ಎಂದು ಡೆನ್ಮಾರ್ಕ್ ಟೆಕ್ನಿಕಲ್ ವಿಶ್ವವಿದ್ಯಾಲಯದ (ಡಿಟಿಯು) ಪ್ರೊಫೆಸರ್ ಸುನೇ ಲೆಹ್​ವ್ಯಾನ್ ಹೇಳಿದ್ದಾರೆ.

    ಕ್ಯಾನ್ಸರ್ ಎಚ್ಚರಿಕೆ ನೀಡಬಲ್ಲದು: ‘ನೇಚರ್ ಕಂಪ್ಯುಟೇಶನಲ್ ಸೈನ್ಸ್’ ಪತ್ರಿಕೆಯಲ್ಲಿ ಈ ಸಂಶೋಧನೆಯ ವರದಿ ಪ್ರಕಟವಾಗಿದೆ. ಸಂಶೋಧನೆಯ ಫಲಿತಾಂಶದ ಸಾಧ್ಯತೆಗಳು ಅಪರಿಮಿತವಾಗಿವೆ ಎಂದು ಲೆಹ್​ವ್ಯಾನ್ ಅಭಿಪ್ರಾಯ ಪಟ್ಟಿದ್ದಾರೆ. ‘ಅದು ಆರೋಗ್ಯದ ಭವಿಷ್ಯ ನುಡಿಯಬಲ್ಲದು. ಹಾಗಾಗಿ, ಫಲವಂತಿಕೆ ಅಥವಾ ಬೊಜ್ಜಿನ ಬಗ್ಗೆ ಭವಿಷ್ಯ ಹೇಳಬಲ್ಲದು. ಯಾರಿಗೆ ಕ್ಯಾನ್ಸರ್ ಬರಬಹುದು ಅಥವಾ ಯಾರಿಗೆ ಅದು ಬರುವುದಿಲ್ಲ ಎಂದೂ ಹೇಳಬಲ್ಲದು. ಆದರೆ, ನೀವು ಸಾಕಷ್ಟು ಹಣವನ್ನು ಸಂಪಾದಿಸುತ್ತೀರಿ ಎಂದು ಕೂಡ ಅದು ಭವಿಷ್ಯ ಹೇಳಬಲ್ಲದು’ ಎಂದು ಲೆಹ್​ವ್ಯಾನ್ ಅದರ ವಿಶೇಷತೆಯನ್ನು ಹೇಳಿದ್ದಾರೆ.

    ಮಿದುಳು ಮೂಲಕವೇ ಕಂಪ್ಯೂಟರ್ ನಿಯಂತ್ರಣ: ಪಾರ್ಶ್ವವಾಯು ಪೀಡಿತ ಯುವಕನೊಬ್ಬ ಮಿದುಳಿನಲ್ಲಿ ಅಳವಡಿಸಲಾದ ಎಲನ್ ಮಸ್ಕ್​ರ ನ್ಯೂರಾಲಿಂಕ್ ಕಾರ್ಪೆರೇಷನ್​ನ ಚಿಪ್ ನೆರವಿನಿಂದ ಚೆಸ್ ಆಟವಾಡಿದ ಮಹತ್ವದ ಸಾಧನೆಯ ದೃಶ್ಯವನ್ನು ಬುಧವಾರ ಲೈವ್​ಸ್ಟ್ರೀಮ್ ಮಾಡಲಾಗಿದೆ. ನ್ಯೂರಾಲಿಂಕ್, ಮಸ್ಕ್ ಸ್ಥಾಪಿಸಿರುವ ಮಿದುಳು ತಂತ್ರಜ್ಞಾನ ಸ್ಟಾರ್ಟಪ್ ಆಗಿದೆ. ಚಿಪ್ ಕಸಿ ಮಾಡಲಾದ ರೋಗಿಯು ಕಂಪ್ಯೂಟರ್​ಅನ್ನು ನಿಯಂತ್ರಿಸಲು ತಮ್ಮ ಯೋಚನೆಗಳನ್ನು ಬಳಸಲು ಈ ತಂತ್ರಜ್ಞಾನ ನೆರವಾಗುತ್ತದೆ. ಎರಡೂ ಕೈ ಮತ್ತು ಕಾಲುಗಳಲ್ಲಿ ಪಾರ್ಶ್ವವಾಯು ಹೊಂದಿರುವುದನ್ನು ಕ್ವಾಡ್ರಿಪ್ಲೇಜಿಯಾ ಎನ್ನುತ್ತಾರೆ. ಮಿದುಳಿನಲ್ಲಿ ನ್ಯೂರಾಲಿಂಕ್ ಅಳವಡಿಸಲಾದ ಕ್ವಾಡ್ರಿಪ್ಲೇಜಿಕ್ ವ್ಯಕ್ತಿ, ತನ್ನ ಮಿದುಳನ್ನು ಬಳಸಿ ವಿಡಿಯೋ ಗೇಮ್ ಮತ್ತು ಚೆಸ್ ಆಟವಾಡಿದ್ದನ್ನು ಬುಧವಾರ ನೇರ ಪ್ರಸಾರ ಮಾಡಲಾಯಿತು.

    ಒಂದೇ ದಿನದಲ್ಲಿ ಮನೆಗೆ: ಇದೇ ವರ್ಷದ ಜನವರಿಯಲ್ಲಿ ನ್ಯೂರಾಲಿಂಕ್ ಪ್ರಕ್ರಿಯೆ ನಡೆದ ನಂತರ ಆಸ್ಪತ್ರೆಯಿಂದ ಒಂದೇ ದಿನದಲ್ಲಿ ಡಿಸ್ಚಾರ್ಜ್ ಮಾಡಲಾಗಿತ್ತು ಎಂದೂ ಅರಾಬೋ ತಿಳಿಸಿದ್ದಾರೆ. ‘ಈ ತಂತ್ರಜ್ಞಾನವನ್ನು ಇನ್ನಷ್ಟು ಸುಧಾರಿಸಬೇಕಾಗಿದೆ’ ಎಂದಿದ್ದಾರೆ. ಕಂಪ್ಯೂಟರ್​ನೊಂದಿಗೆ ಸಂರ್ಪತ ಮಿದುಳು ಸಾಧನಗಳೊಂದಿಗೆ ಕೆಲಸ ಮಾಡುವ ಕಂಪನಿ ನ್ಯೂರಾಲಿಂಕ್ ಒಂದೇ ಅಲ್ಲ. ಬೇರೆ ಮನುಷ್ಯರಲ್ಲಿ ಕೂಡ ಆಲೋಚನೆಗಳನ್ನು ಬಳಸಿಕೊಂಡು ಕರ್ಸರ್ ನಿಯಂತ್ರಿಸಿದ ಪ್ರಕರಣ ಈಗಾಗಲೇ ದಾಖಲಾಗಿದೆ. ಸಂಶೋಧನಾ ಸಂಸ್ಥೆಗಳು ಹಾಗೂ ಆಸ್ಪತ್ರೆಗಳ ಬ್ರೇಯ್್ನೇಟ್ ಸಮೂಹ ಇಂಥ ಸಾಧನಗಳನ್ನು ನಿಯೋಜಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts