More

    ಚೆಪಾಕ್‌ನಲ್ಲಿ ಯಾರಿಗೆ ಜಯದ ಸಿಹಿ: ಆರ್‌ಸಿಬಿ-ಸಿಎಸ್‌ಕೆ ತಂಡಗಳ ಬಲಾಬಲ ಹೇಗಿದೆ ? ಇಲ್ಲಿದೆ ಮಾಹಿತಿ!

    ಚೆನ್ನೈ: ಕ್ರೀಡಾಭಿಮಾನಿಗಳು ಕಾತರದಿಂದ ಕಾಯುತ್ತಿರುವ ಐಪಿಎಲ್ 17ನೇ ಆವೃತ್ತಿಗೆ ಶುಕ್ರವಾರ ಚಾಲನೆ ಸಿಗಲಿದೆ. ಹಾಲಿ ಚಾಂಪಿಯನ್ ಹಾಗೂ ಆತಿಥೇಯ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಪ್ರಶಸ್ತಿ ಬರ ನೀಗಿಸುವ ಹಂಬಲದಲ್ಲಿರುವ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡಗಳು ಕಡಲ ತೀರದ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿ ಆಗಲಿವೆ. ಕೊನೇಕ್ಷಣದಲ್ಲಿ ಎಂಎಸ್ ಧೋನಿ ಪದತ್ಯಾಗದಿಂದ, ಸಿಎಸ್‌ಕೆ ತಂಡ ನೂತನ ನಾಯಕ ಋತುರಾಜ್ ಗಾಯಕ್ವಾಡ್‌ಗೆ ಪ್ರಶಸ್ತಿ ಉಳಿಸಿಕೊಳ್ಳುವ ಹೊಸ ಜವಾಬ್ದಾರಿ ಒಪ್ಪಿಸಿದೆ. ಇತ್ತ ಹೊಸ ಲಾಂಛನ, ಜೆರ್ಸಿ, ಹೆಸರು ಬದಲಾವಣೆ ಜತೆಗೆ ನೂತನ ಕೋಚ್ ಮಾರ್ಗದರ್ಶನದಲ್ಲಿ ಹೊಸ ಅಧ್ಯಾಯ ಆರಂಭಿಸಲು ್ಾ ಡು ಪ್ಲೆಸಿಸ್ ಬಳಗ ಸಜ್ಜಾಗಿದೆ.

    ಸಿಎಸ್‌ಕೆಗೆ ಗಾಯಾಳುಗಳ ಹಿನ್ನಡೆ: ಕಳೆದ ಆವೃತಿಯಲ್ಲಿ ಸಿಎಸ್‌ಕೆಗೆ ಉತ್ತಮ ಆರಂಭ ಒದಗಿಸಿದ್ದ ಕಿವೀಸ್‌ನ ಡೆವೊನ್ ಕಾನ್‌ವೇ ಈ ಬಾರಿ ಗಾಯದ ಕಾರಣಕ್ಕೆ ಆರಂಭಿಕ ಪಂದ್ಯಗಳಿಂದ ಹೊರಗುಳಿದಿದ್ದಾರೆ. ಇದು ಸಿಎಸ್‌ಕೆಗೆ ಪ್ರಮುಖ ಹಿನ್ನಡೆ ಎನಿಸಿದೆ. ಆಲ್ರೌಂಡರ್ ಶಿವಂ ದುಬೆ, ಮುಸ್ತಾಫಿಜುರ್ ರೆಹಮಾನ್ ಸಹ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು ಮೊದಲ ಪಂದ್ಯ ಆಡುವುದು ಅನುಮಾನ ಎನಿಸಿದೆ. ಕಳೆದ ಬಾರಿ ಸಿಎಸ್‌ಕೆ ಗೆಲುವಿನಲ್ಲಿ ಇಂಪ್ಯಾಕ್ಟ್ ಮಾಡಿದ್ದ ಲಂಕಾ ವೇಗಿ ಮಥೀಷ ಪಥಿರಣ ಇನ್ನೂ ತಂಡ ಸೇರಿಕೊಂಡಿಲ್ಲ. ಇದರಿಂದ ಸಿಎಸ್‌ಕೆ ದೇಶೀಯ ವೇಗಿಗಳನ್ನು ಅವಲಂಬಿಸುವಂತಾಗಿದೆ. ಆಲ್ರೌಂಡರ್ ಹಾಗೂ ಸ್ಪಿನ್ನರ್‌ಗಳು ತವರಿನಲ್ಲಿ ಸಿಎಸ್‌ಕೆಯ ನಿಜವಾದ ಶಕ್ತಿ ಆಗಿದ್ದಾರೆ.

    ಅನುಭವಿ ವಿದೇಶಿ ವೇಗಿ ಕೊರತೆ: ವೇಗಿ ಮೊಹಮದ್ ಸಿರಾಜ್‌ಗೆ ಸಮರ್ಥ ನೀಡಲಬಲ್ಲ ಅನುಭವಿ ದೇಶೀಯ ವೇಗಿಯ ಕೊರತೆ ಆರ್‌ಸಿಬಿ ತಂಡಕ್ಕಿದೆ. ಕನ್ನಡಿಗ ವೈಶಾಕ್ ವಿಜಯ್‌ಕುಮಾರ್ ಪದಾರ್ಪಣೆ ಆವೃತ್ತಿಯಲ್ಲಿ ಮಿಂಚಿದ್ದರೆ, ಈ ಬಾರಿಯ ದೇಶೀಯ ಟೂರ್ನಿಯಲ್ಲಿ ಬೌಲಿಂಗ್ ಜತೆಗೆ ಬ್ಯಾಟಿಂಗ್‌ನಲ್ಲೂ ಉತ್ತಮ ಪ್ರದರ್ಶನ ನೀಡಿರುವುದು ಆರ್‌ಸಿಬಿಗೆ ಬಲ ತಂದುಕೊಟ್ಟಿದೆ. ಲಾಕಿ ಫರ್ಗುಸನ್, ಅಲ್ಜಾರಿ ಜೋಸೆಫ್, ಆಕಾಶ್ ದೀಪ್ ಮತ್ತು ರೀಸ್ ಟಾಪ್ಲೆ ಅಂಥ ಬೌಲರ್‌ಗಳಿದ್ದರೂ ಹನ್ನೊಂದರ ಬಳಗದ ಸಂಯೋಜನೆ ಕಷ್ಟವೆನಿಸಿದೆ. ಜತೆಗೆ ಚೆಪಾಕ್ ಅಂಗಣ ಸ್ಪಿನ್ನರ್‌ಗಳಿಗೆ ಹೆಚ್ಚಿನ ನೆರವು ಒದಗಿಸುವುದರಿಂದ ಅನುಭವಿ ಸ್ಪಿನ್ನರ್ ಕೊರತೆ ಆರ್‌ಸಿಬಿ ಕಾಡಲಿದೆ.

    ಬೆಂಗಳೂರಿಗೆ ಈ ಬಾರಿ ಗ್ರೀನ್ ಬಲ:ಸಿಎಸ್‌ಕೆ ಎದುರು ವಿರಾಟ್ ಕೊಹ್ಲಿ ಉತ್ತಮ ದಾಖಲೆ ಹೊಂದಿದ್ದಾರೆ, ಆದರೆ ಚೆನ್ನೈನಲ್ಲಿ ಆರ್‌ಸಿಬಿ ಗೆಲುವಿನ ದಾಖಲೆ ಆಶಾದಾಯಕವಾಗಿಲ್ಲ. 2008ರ ಬಳಿಕ ಆರ್‌ಸಿಬಿ ತಂಡ ಸಿಎಸ್‌ಕೆ ತಂಡವನ್ನು ತವರಿನಲ್ಲಿ ಮಣಿಸಲು ವಿಲವಾಗಿದೆ. ನಾಯಕ ್ಾ ಡು ಪ್ಲೆಸಿಸ್ ಜತೆಗೆ ಕೊಹ್ಲಿ ಇನಿಂಗ್ಸ್ ಆರಂಭಿಸಲಿದ್ದು, ಮುಂಬೈ ತಂಡದಿಂದ ವರ್ಗಾವಣೆಗೊಂಡಿರುವ ಯುವ ಆಲ್ರೌಂಡರ್ ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿಯುವ ನಿರೀಕ್ಷೆ ಇದೆ. ಜತೆಗೆ ಗ್ಲೆನ್ ಮ್ಯಾಕ್ಸ್‌ವೆಲ್ ಬಲವಿದೆ. ಆದರೆ ಅನುಭವಿ ದಿನೇಶ್ ಕಾರ್ತಿಕ್ ಕಳೆದ ಆವೃತ್ತಿ ವೈಲ್ಯ ಮರೆತು ತವರಿನ ಅಂಗಣದಲ್ಲಿ ಕಂಬ್ಯಾಕ್ ಮಾಡಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts