ರಾಯಲ್ಸ್ ಓಟಕ್ಕೆ ಬ್ರೇಕ್ ಹಾಕುವುದೇ ಲಖನೌ?: ಇಂದು ಗೆಲುವಿನ ಲಯದಲ್ಲಿರುವ ತಂಡಗಳ ಮುಖಾಮುಖಿ

ಲಖನೌ: ಹ್ಯಾಟ್ರಿಕ್ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿರುವ ಮಾಜಿ ಚಾಂಪಿಯನ್ ರಾಜಸ್ಥಾನ ರಾಯಲ್ಸ್ ತಂಡ ಪ್ಲೇಆ್ ಸ್ಥಾನ ಖಾತ್ರಿಪಡಿಸಿಕೊಳ್ಳಲು ಐಪಿಎಲ್-17ರ ತನ್ನ 9ನೇ ಪಂದ್ಯದಲ್ಲಿ ಶನಿವಾರ ಲಖನೌ ಸೂಪರ್‌ಜೈಂಟ್ಸ್ ತಂಡವನ್ನು ಎದುರಿಸಲಿದೆ. ಇತ್ತ ಹಾಲಿ ಚಾಂಪಿಯನ್ ಸಿಎಸ್‌ಕೆ ತಂಡವನ್ನು ಸತತವಾಗಿ ಮಣಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಕೆಎಲ್ ರಾಹುಲ್ ಬಳಗ ಗೆಲುವಿನ ಲಯ ಕಾಯ್ದುಕೊಳ್ಳುವ ನಿರೀಕ್ಷೆಯಲ್ಲಿದೆ.
ಮೊದಲ ಮುಖಾಮುಖಿಯಲ್ಲಿ ರಾಜಸ್ಥಾನ ಎದುರು ಮುಗ್ಗರಿಸಿದ್ದ ಲಖನೌ, ತವರಿನಲ್ಲಿ ತಿರುಗೇಟು ನೀಡುವ ತವಕದಲ್ಲಿದ್ದು, ಆಡಿರುವ 8 ಪಂದ್ಯಗಳಲ್ಲಿ 5 ಗೆಲುವು, 3 ಸೋಲಿನೊಂದಿಗೆ 10 ಅಂಕ ಕಲೆಹಾಕಿದೆ. ಮತ್ತೊಂದೆಡೆ ಟೂರ್ನಿಯಲ್ಲಿ ಭರ್ಜರಿ ಲಯದಲ್ಲಿರುವ ರಾಜಸ್ಥಾನ ಇಷ್ಟೇ ಪಂದ್ಯಗಳಲ್ಲಿ 7 ಗೆಲುವು, 1 ಸೋಲಿನೊಂದಿಗೆ 14 ಅಂಕದೊಂದಿಗೆ ಬಲಿಷ್ಠ ನಿರ್ವಹಣೆ ತೋರಿದೆ. ಮಾರ್ಚ್ 24ರಂದು ನಡೆದ ಉಭಯ ತಂಡಗಳ ಮೊದಲ ಮುಖಾಮುಖಿಯಲ್ಲಿ ರಾಜಸ್ಥಾನ ರಾಯಲ್ಸ್ 20 ರನ್‌ಗಳ ಜಯ ಕಂಡಿತ್ತು. ಲಖನೌ ಎದುರು ಸ್ಯಾಮ್ಸನ್ ಬಳಗವೇ ೇವರಿಟ್ ಎನಿಸಿದೆ.

ಪ್ಲೇಆಫ್ ಸನಿಹ ರಾಯಲ್ಸ್:ರಾಜಸ್ಥಾನ ಇನ್ನೊಂದು ಗೆಲುವು ದಾಖಲಿಸಿದರೆ ಟೂರ್ನಿಯಲ್ಲಿ 16 ಅಂಕದೊಂದಿಗೆ ಪ್ಲೇಆ್ ಸ್ಥಾನವನ್ನು ಬಹುತೇಕ ಖಾತ್ರಿ ಪಡಿಸಿಕೊಳ್ಳಲಿದೆ. ಕಳೆದ ವರ್ಷ ಪ್ಲೇಆ್ಗೇರಿದ್ದ 4 ತಂಡಗಳು ಕ್ರಮವಾಗಿ 20, 17, 17 ಹಾಗೂ 16 ಅಂಕ ಕಲೆಹಾಕಿದ್ದವು. ಇದರನ್ವಯ ರಾಜಸ್ಥಾನ ತಂಡ ತನ್ನ ಬಾಕಿ 6 ಲೀಗ್ ಪಂದ್ಯಗಳಲ್ಲಿ ಕನಿಷ್ಠ 2 ಗೆಲುವು ದಾಖಲಿಸಿದರೆ, ಪ್ರಶಸ್ತಿ ರೇಸ್‌ನಲ್ಲಿ ಉಳಿಯಲಿದೆ. ಇನ್ನು ಲಖನೌ ತಂಡ ಅಂಕಪಟ್ಟಿಯಲ್ಲಿ ಸದ್ಯ4ನೇ ಸ್ಥಾನದಲ್ಲಿದ್ದು, ಇನ್ನು ಕನಿಷ್ಠ 3 ಜಯ ಬೇಕಾಗುತ್ತದೆ. ಆದರೆ ಇದು ಪ್ಲೇಆ್ ಸ್ಥಾನದ ಗ್ಯಾರಂಟಿ ನೀಡುವುದಿಲ್ಲ, ಜತೆಗೆ ರನ್‌ರೇಟ್ ಸಹ ಪ್ರಮುಖ ಅಂಶ ಎನಿಸಲಿದೆ. ಅಂಕಪಟ್ಟಿಯ 4ನೇ ಸ್ಥಾನಕ್ಕೆ ಸದ್ಯ 4 ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿದೆ. 3 ತಂಡಗಳು 8 ಅಂಕ ಸಂಪಾದಿಸಿವೆ. ಆದ್ದರಿಂದ ಕೆಎಲ್ ರಾಹುಲ್ ಬಳಗ ತನ್ನ 6 ಲೀಗ್ ಪಂದ್ಯಗಳ ಪೈಕಿ 4ರಲ್ಲಿ ಗೆಲುವು ಕಂಡರೆ ಪ್ಲೇಆ್ ಸ್ಥಾನ ಪಡೆಯಲಿದೆ. ಜತೆಗೆ ಇದರ ಪಂದ್ಯಗಳ ಲಿತಾಂಶವೂ ವರವಾಗಬೇಕು.

ಾರ್ಮ್‌ಗೆ ಮರಳಿದ ಜೈಸ್ವಾಲ್
ರಾಜಸ್ಥಾನಗೆ ಹಾಲಿ ಆವೃತ್ತಿಯಲ್ಲಿ ಪ್ರಮುಖ ಹಿನ್ನಡೆ ಎನಿಸಿದ್ದ ಯಶಸ್ವಿ ಜೈಸ್ವಾಲ್ ಹಿಂದಿನ ಪಂದ್ಯದಲ್ಲಿ ಮುಂಬೈ ಎದುರು ಭರ್ಜರಿ ಶತಕದೊಂದಿಗೆ ಾರ್ಮ್‌ಗೆ ಮರಳಿದ್ದಾರೆ. ಬಟ್ಲರ್, ಸಂಜು ಸ್ಯಾಮ್ಸನ್ ಹಾಗೂ ರಿಯಾನ್ ಪರಾಗ್ ಟೂರ್ನಿಯ ಆರಂಭದಿಂದಲೂ ಲಯದಲ್ಲಿ ಕಾಣಿಸಿಕೊಂಡಿದ್ದಾರೆ. ಮುಂಬೈ ವಿರುದ್ಧ ಗೆಲುವು ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ. ಬೌಲಿಂಗ್‌ನಲ್ಲಿ ಸಂದೀಪ್ ಶರ್ಮ, ಯಜುವೇಂದ್ರ ಚಾಹಲ್ (13 ವಿಕೆಟ್) ತಂಡಕ್ಕೆ ಬಲ ತುಂಬಿದ್ದಾರೆ. ಮಧ್ಯಮ ಕ್ರಮಾಂಕ ಬ್ಯಾಟಿಂಗ್‌ಗೆ ಇದುವರೆಗೂ ನೈಜ ಸವಾಲು ಎದುರಾಗಿಲ್ಲ. ಲಖನೌ ಅಂಗಣ ನಿಧಾನಗತಿಯ ಬೌಲರ್‌ಗಳಿಗೆ ಸೂಕ್ತವಾಗಿದ್ದು, ಸಂದೀಪ್ ಶರ್ಮ ಜತೆಗ ಚಾಹಲ್ ಬ್ಯಾಟರ್‌ಗಳಿಗೆ ಸವಾಲೊಡ್ಡಬಹುದು.

ಆತ್ಮವಿಶ್ವಾಸದಲ್ಲಿ ಲಖನೌ: ಐದು ಬಾರಿ ಹಾಗೂ ಹಾಲಿ ಚಾಂಪಿಯನ್ ಸಿಎಸ್‌ಕೆ ತಂಡವನ್ನು ಸತತವಾಗಿ ಮಣಿಸಿ ಬೀಗುತ್ತಿರುವ ಲಖನೌ ಪಾಲಿಗೆ ಈ ಪಂದ್ಯವೂ ಪ್ರಮುಖ ಎನಿಸಿದೆ. ಸತತ 2 ಆವೃತ್ತಿಯಲ್ಲಿ ಪ್ಲೇ ಆ್ಗೇರಿರುವ ಲಖನೌ ತವರಿನ ಅಂಗಣದಲ್ಲಿ ಉತ್ತಮ ದಾಖಲೆ ಹೊಂದಿದೆ. ರಾಹುಲ್ ವಿಕೆಟ್ ಕೀಪಿಂಗ್ ಜತೆಗೆ ನಾಯಕತ್ವವನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಮಾರ್ಕಸ್ ಸ್ಟೋಯಿನಿಸ್ ಾರ್ಮ್‌ಗೆ ಮರಳಿರುವುದು ತಂಡದ ಆತ್ಮಬಲ ಹೆಚ್ಚಿಸಿದೆ. ಗಾಯದಿಂದ ಚೇತರಿಸಿಕೊಂಡಿರುವ ಸೆನ್ಸೆಷನ್ ವೇಗಿ ಮಯಾಂಕ್ ಯಾದವ್ ಮರಳಿ ಕಣಕ್ಕಿಳಿಯುವ ಸಾಧ್ಯತೆಗಳಿದ್ದು ಬೌಲಿಂಗ್‌ಗೆ ಶಕ್ತಿ ತುಂಬಲಿದ್ದಾರೆ. ಮೊಹ್ಸಿನ್ ಖಾನ್, ಯಶ್ ಠಾಕೂರ್ ಉತ್ತಮ ಲಯದಲ್ಲಿದ್ದಾರೆ.

ಮುಖಾಮುಖಿ: 4
ರಾಜಸ್ಥಾನ:3
ಲಖನೌ: 1
ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಟೋರ್ಟ್ಸ್, ಜಿಯೋ ಸಿನಿಮಾ

Share This Article

ನೀವಿದನ್ನು ನಿತ್ಯವೂ ಚಾಚೂ ತಪ್ಪದೇ ಅನುಸರಿಸಿದರೆ ನೀವು ಖಂಡಿತ ಶ್ರೀಮಂತರಾಗ್ತೀರಿ! Rich Person

ಇಂದು ಪ್ರತಿಯೊಬ್ಬರು ಶ್ರೀಮಂತರಾಗಲು ( Rich Person ) ಬಯಸುತ್ತಾರೆ. ತಾವು ದುಡಿದ ಹಣವನ್ನು ಸರಿಯಾದ…

ಈ ಸಲಹೆಗಳನ್ನು ಪಾಲಿಸಿದ್ರೆ..ಮಾತ್ರೆ ನುಂಗದೆ ಕ್ಷಣ ಮಾತ್ರದಲ್ಲೇ ತಲೆ ನೋವು ಮಾಯ! Headache Health Tips

 ಬೆಂಗಳೂರು: ಇಂದಿನ ಬಿಡುವಿಲ್ಲದ ಜೀವನದಲ್ಲಿ ತಲೆನೋವು ( Headache Health Tips ) ಸಾಮಾನ್ಯವಾಗಿದೆ. ಈ…

ಪೇರಲೆ ಹಣ್ಣಿನಲ್ಲಿ ಮಾತ್ರವಲ್ಲ ಎಲೆಗಳಲ್ಲೂ ಇದೆ ಔಷಧೀಯ ಗುಣ; ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಎಲೆಗಳನ್ನು ಜಗಿದ್ರೆ ಸಾಕು.. Guava Leaves Benefits

ಬೆಂಗಳೂರು:  ಸೀಸನಲ್ ಹಣ್ಣುಗಳಲ್ಲಿ ಪೇರಲ ಕೂಡ ಒಂದು. ಪೇರಲ ಹಣ್ಣುಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಅದಕ್ಕೇ…