ಯುವ ಹೀರೋಗೆ ಕಪಾಳಮೋಕ್ಷ ಮಾಡಿದ ಆ್ಯಂಕರ್ ಶ್ರೀಮುಖಿ!

ancar
Published on

ಹೈದರಾಬಾದ್​: ಶ್ರೀಮುಖಿ ತೆಲುಗು ಮನರಂಜನಾ ಉದ್ಯಮದಲ್ಲಿ ಟಾಪ್ ಆಂಕರ್. ತನ್ನದೇ ಶೈಲಿಯಲ್ಲಿ ಹಾಸ್ಯದ ಮಾತುಗಳಿಂದ ಎಲ್ಲರನ್ನೂ ಆಕರ್ಷಿಸುತ್ತಾಳೆ. ಕಳೆದ ಕೆಲವು ವರ್ಷಗಳಿಂದ, ಆಕೆ ತನ್ನ ಬೋಲ್ಡ್ ಲುಕ್‌ನಿಂದ ಸಿನಿಮಾ ಮತ್ತು ಕಿರುತೆರೆಯಲ್ಲಿ ಮಿಂಚುತ್ತಿದ್ದಾಳೆ.

ಇನ್ನು ಈಕೆ ಚಲನಚಿತ್ರದ ಪ್ರೀ-ರಿಲೀಸ್ ಈವೆಂಟ್‌ಗಳು ಮತ್ತು ರಿಯಾಲಿಟಿ ಶೋಗಳನ್ನು ಹೋಸ್ಟ್ ಮಾಡುತ್ತಿದ್ದಾಳೆ. ಇತ್ತೀಚೆಗಷ್ಟೇ ಯುವ ನಾಯಕ ನಟನಿಗೆ ಈಕೆ ಕಪಾಳಮೋಕ್ಷ ಮಾಡಿದ ವಿಡಿಯೋ ವೈರಲ್ ಆಗಿದೆ.

ಇಷ್ಟಕ್ಕೂ ನಾಯಕನಿಗೆ ಕಪಾಳಮೋಕ್ಷ ಮಾಡಲು ಕಾರಣವೇನು? ಎಂದು ನೋಡುವುದಾದರೆ, ನಿರ್ದೇಶಕ ವಿ.ಎಸ್. ಮುಖೇಶ್ ಮಾರುಕಟ್ಟೆ ಮಹಾಲಕ್ಷ್ಮಿ ವಿನೂತನ ಕಥೆ ಮತ್ತು ಕಂಟೆಂಟ್‌ನೊಂದಿಗೆ ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ಹೊಸನಟ ಪಾರ್ವತೀಶಂ ನಾಯಕನಾಗಿ ನಟಿಸುತ್ತಿದ್ದು, ಪ್ರಾಣಿಕಾನ್ವಿಕಾ ನಾಯಕಿಯಾಗಿ ನಟಿಸುತ್ತಿದ್ದಾಳೆ. ಸದ್ಯದಲ್ಲೇ ಈ ಸಿನಿಮಾ ತೆರೆಗೆ ಬರಲಿದೆ.

ತರಕಾರಿ ಮಾರುವ ಯುವತಿ ಮತ್ತು ಸಾಫ್ಟ್‌ವೇರ್ ಹುಡುಗನ ನಡುವಿನ ಭಾವನಾತ್ಮಕ ಪ್ರೇಮಕಥೆ ಇದು. ಇನ್ನು ಮಂಚು ಮನೋಜ್ ಮತ್ತು ಟಾಪ್ ಆಂಕರ್ ಶ್ರೀಮುಖಿ ಈ ಚಿತ್ರದ ಪ್ರಚಾರಕ್ಕೆ ಆಕೆಯನ್ನು ಕರೆತಂದಿತ್ತು. ನಟರು, ನಿರ್ಮಾಪಕರು ಮತ್ತು ನಿರ್ದೇಶಕರೊಂದಿಗೆ ವಿಭಿನ್ನ ಪರಿಕಲ್ಪನೆಯೊಂದಿಗೆ ಆಂಕರ್ ಪ್ರಚಾರದ ವೀಡಿಯೊಗಳನ್ನು ಚಿತ್ರೀಕರಿಸಿದ್ದಾರೆ.

ಇದರೊಂದಿಗೆ ನಾಯಕನ ಜೊತೆ ಪ್ರಚಾರದ ಚಿತ್ರೀಕರಣದಲ್ಲಿ ಶ್ರೀಮುಖಿ ಭಾಗವಹಿಸಿದ್ದರು.ಚಿತ್ರದ ಪ್ರಚಾರದ ವೇಳೆ ಬ್ಯುಸಿಯಾಗಿದ್ದ ಶ್ರೀಮುಖಿ ಬಳಿ ಹೀರೋ ಪಾರ್ವತೀಶಂ ಬಂದು ಲವ್ ಪ್ರಪೋಸಲ್ ಮಾಡಲು ಯತ್ನಿಸಿದ್ದರು. ನಾನು ನಿನ್ನ ತುಂಬಾ ಇಷ್ಟಪಡುವೆ.ಐ ಲವ್ ಯೂ ಎನ್ನುತ್ತಾನೆ. ತಕ್ಷಣ ಆತನನ್ನು ಹಿಡಿದೆಳೆದು ಕೆನ್ನೆಗೆ ಬಾರಿಸಿದಳು. ಇದರಿಂದ ಆತ ಬೆಚ್ಚಿಬಿದ್ದಿದ್ದು ನೀನು ಚೇಷ್ಟೆ ಆಡಿದರೆ ಒಳ್ಳೆಯದಲ್ಲ ಎಂದು ವಾರ್ನಿಂಗ್ ಸಹ ಕೊಟ್ಟಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net