More

    ಬಣ್ಣ ಬದಲಾಗಿದೆ, ಕಪ್​ ಬೇಕಾಗಿದೆ; 16 ವರ್ಷಗಳ ಫ್ಯಾನ್ಸ್​ ಕನಸು ಈ ಸಲ ಆದ್ರೂ ಈಡೇರಲಿದ್ಯಾ?

    ಬೆಂಗಳೂರು: ಭಾನುವಾರ (ಮಾರ್ಚ್​ 17) ರಾಷ್ಟ್ರ ರಾಜಧಾನಿ ದೆಹಲಿಯ ಅರುಣ್​ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ವುಮೆನ್ಸ್ ಪ್ರೀಮಿಯರ್ ಲೀಗ್ (WPL) ಎರಡನೇ ಆವೃತ್ತಿಯ ಫೈನಲ್​ ಪಂದ್ಯದಲ್ಲಿ ಸ್ಮೃತಿ ಮಂದಾನ ಕ್ಯಾಪ್ಟನ್ಸಿಯ ಆರ್​ಸಿಬಿ ತಂಡ ಭರ್ಜರಿ ಜಯ ದಾಖಲಿಸುವ ಮೂಲಕ ಚೊಚ್ಚಲ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಈ ಗೆಲವು ವುಮೆನ್ಸ್​ ಪ್ರೀಮಿಯರ್​ ಲೀಗ್​​ನಲ್ಲಿ​​ ಹೊಸ ಇತಿಹಾಸ ಬರೆಯುವುದರ ಜತೆಗೆ ಆರ್​ಸಿಬಿ ಅಭಿಮಾನಿಗಳಲ್ಲಿ ಹೊಸ ಚೈತನ್ಯ ತಂದಿದೆ.

    ಇದನ್ನೂ ಓದಿ: ಮಳೆಗಾಗಿ ಲಾಳನಕೆರೆ ಗ್ರಾಮ ದೇವತೆಗೆ ನವ ಚಂಡಿಕಾ ಹೋಮ

    ಇನ್ನು ಇದರ ಬೆನ್ನಲ್ಲೇ ಭಾರೀ ಸಂತಸದಲ್ಲಿರುವ ಆರ್​ಸಿಬಿ ಅಭಿಮಾನಿಗಳು ಇದು ನಮಗೆ ಅತ್ಯಂತ ಖುಷಿಯ ಸಂದರ್ಭ ಎಂದು ವ್ಯಕ್ತಪಡಿಸಿದ್ದಾರೆ. ಐಪಿಎಲ್​ನಲ್ಲಿ ಪುರುಷರ ತಂಡವು ಇಲ್ಲಿಯವರೆಗೆ ಒಂದು ಬಾರಿಯೂ ಕಪ್​ ಗೆದ್ದಿರಲಿಲ್ಲ. ಇದರಿಂದ ಫ್ಯಾನ್ಸ್ ಭಾರೀ ನಿರಾಸೆಯಲ್ಲಿದ್ದರು. ಆದರೆ, ಇದೀಗ ಮಹಿಳಾ ಮಣಿಯರು ಟ್ರೋಫಿ ಗೆದ್ದಿದ್ದು, ಆರ್​ಸಿಬಿಗೆ ಅಭಿಮಾನಿ ಬಳಗಕ್ಕೆ ಆನೆಬಲ ಬಂದಂತಾಗಿದೆ.

    ನಾಳೆಯಿಂದ ಐಪಿಎಲ್​ 2024ರ ಆವೃತ್ತಿಗೆ ಚೆನ್ನೈನ ಚೆಪಾಕ್​ ಸ್ಟೇಡಿಯಂನಲ್ಲಿ ಅದ್ದೂರಿ ಚಾಲನೆ ಸಿಗಲಿದ್ದು, ಕಿಕ್​ಸ್ಟಾರ್ಟ್​ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಮತ್ತು ನೂತನವಾಗಿ ಕ್ಯಾಪ್ಟನ್ ಪಟ್ಟ ಅಲಂಕರಿಸಿರುವ ರುತುರಾಜ್ ಗಾಯಕ್ವಾಡ್​ ಕ್ಯಾಪ್ಟನ್ಸಿಯ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯ ಬಹಳ ರೋಚಕವಾಗುವುದರಲ್ಲಿ ಅನುಮಾನವೇ ಇಲ್ಲ.

    ಇದನ್ನೂ ಓದಿ: “ನಾನು ಹಾಗೆ ಹೇಳಿಲ್ಲ..”:  ‘ಬಿಗ್ ಬಾಸ್’ ವಿಚಾರವಾಗಿ ಯು-ಟರ್ನ್ ಹೊಡೆದ ಕಿರುತೆರೆ ನಟ!

    ಮೊದಲ ಪಂದ್ಯದ ಬೆನ್ನಲ್ಲೇ ಆರ್​ಸಿಬಿ ಹೊಸ ಜೆರ್ಸಿ ಸದ್ಯ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದು, ಅಭಿಮಾನಿಗಳು ಕೂಡ ಬಹಳ ಉತ್ಸಾಹ ವ್ಯಕ್ತಪಡಿಸಿದ್ದಾರೆ. ಹೊಸ ಬಣ್ಣದ ಜತೆಗೆ ಹೊಸ ದಾಖಲೆ ಬೇಕಾಗಿದೆ. ನಮ್ಮ ನೆಚ್ಚಿನ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಈ ಬಾರಿ ಕಪ್ ಎತ್ತಲೇಬೇಕು. ಆರ್​ಸಿಬಿ ಮಹಿಳೆಯರ ತಂಡ ಹೇಗೆ ಡಬ್ಲ್ಯೂಪಿಎಲ್ ಟ್ರೋಫಿ ಗೆದ್ದು ದಾಖಲೆ ನಿರ್ಮಿಸಿತೋ, ಅದೇ ರೀತಿ ಇದೇ ವರ್ಷವೇ ವಿರಾಟ್​ ನಾಯಕತ್ವದಲ್ಲಿ ಆರ್​ಸಿಬಿ ಗೆಲ್ಲಲೇಬೇಕು. ಆಗ ಮೂಡುವ ಸಂಭ್ರಮ ಮತ್ತಷ್ಟು ಜೋರಿರಲಿದೆ ಎಂಬ ಅಭಿಪ್ರಾಯಗಳು ಹರಿದುಬಂದಿವೆ.

    ಈಗಾಗಲೇ ಸೃತಿ ಮಂದಾನ ಹೇಳಿದಂತೆ ಈ ಸಲ ಕಪ್ ನಮ್ದೇ ಅಲ್ಲ ನಮ್ದು. ಈ ಸಲ ಕಪ್​ ನಮ್ದು ಎಂಬ ಅಭಿಮಾನಿಗಳ 16 ವರ್ಷಗಳ ಕನಸನ್ನು ಈ ವರ್ಷವಾದರೂ ಆರ್​ಸಿಬಿ ಪುರಷರ ತಂಡ ನನಸು ಮಾಡಲಿದೆಯಾ ಎಂಬುದನ್ನು ಸದ್ಯ ಕಾದು ನೋಡಬೇಕಿದೆ,(ಏಜೆನ್ಸೀಸ್).

    ಶ್ರೀಲೀಲಾ ಜತೆ ನಟಿಸಲು ಸ್ಟಾರ್​ ನಟರಿಗೆ ಚಿಂತೆ! ಇದು ಮುಂದುವರಿದ್ರೆ ‘ಕಿಸ್’​ ಬೆಡಗಿಗೆ ಸಂಕಷ್ಟ

    ಕೂದಲು ಸೊಂಪಾಗಿ, ದಟ್ಟವಾಗಿ ಬೆಳೆಯಬೇಕಾ? ಹಾಗಾದ್ರೆ ಇದನ್ನು ಟ್ರೈ ಮಾಡುವುದೇ ಬೆಸ್ಟ್​​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts