More

    ಒಳಉಡುಪು ತಯಾರಿಕೆ ಕಂಪನಿಯ ಷೇರುಗಳಿಗೆ ಬೇಡಿಕೆ: ಐಪಿಒದಲ್ಲಿ ರೂ 395 ಇದ್ದ ಷೇರು ಬೆಲೆ ರೂ. 44000ಕ್ಕೆ ಏರಬಹುದು ಎನ್ನುತ್ತದೆ ಬ್ರೋಕರೇಜ್​

    ಮುಂಬೈ: ಒಳಉಡುಪು ತಯಾರಿಕಾ ಕಂಪನಿ ಪೇಜ್ ಇಂಡಸ್ಟ್ರೀಸ್ ಷೇರುಗಳು ಗುರುವಾರದ ವಹಿವಾಟಿನ ವೇಳೆ ಶೇ. 3ರಷ್ಟು ಅಂದರೆ 991.05 ರೂ ಏರಿಕೆ ಕಂಡವು. ಇಂಟ್ರಾಡೇ ವಹಿವಾಟಿನಲ್ಲಿ ಈ ಕಂಪನಿಯ ಷೇರುಗಳ ಬೆಲೆ ರೂ 34214.45 ತಲುಪಿದ್ದವು. ಮಾರುಕಟ್ಟೆ ತಜ್ಞರ ಪ್ರಕಾರ ಮುಂದಿನ ದಿನಗಳಲ್ಲಿ ಈ ಕಂಪನಿಯ ಷೇರುಗಳು ಮತ್ತಷ್ಟು ಏರಿಕೆಯಾಗಬಹುದು.

    ಯುಬಿಎಸ್ ಬ್ರೋಕರೇಜ್ ಸಂಸ್ಥೆಯು ಪೇಜ್ ಇಂಡಸ್ಟ್ರೀಸ್‌ ಷೇರುಗಳ ಗುರಿ ಬೆಲೆಯನ್ನು 44,000 ರೂಪಾಯಿಗೆ ನಿಗದಿಪಡಿಸಿ ‘ಖರೀದಿ’ ರೇಟಿಂಗ್ ನೀಡಿದೆ. ಇದರ 52 ವಾರಗಳ ಗರಿಷ್ಠ ಬೆಲೆ ರೂ 43,599 ಆಗಿದೆ, ಕಳೆದ ವರ್ಷ ಮೇ 16 ರಂದು ಈ ಬೆಲೆ ಮುಟ್ಟಿತ್ತು. 52 ವಾರಗಳ ಕನಿಷ್ಠ ಬೆಲೆಯು ರೂ 33,100 ಆಗಿದೆ, ಈ ತಿಂಗಳು ಮಾರ್ಚ್ 20 ರಂದು ಈ ಬೆಲೆ ಇತ್ತು.

    ಈ ಕಂಪನಿಯ ಐಪಿಒ ಫೆಬ್ರವರಿ 2007 ರಲ್ಲಿ ಬಂದಿತ್ತು. ಆಗ ಪ್ರತಿ ಷೇರಿಗೆ ರೂ 360- 395 ನಿಗದಿಪಡಿಸಲಾಗಿತ್ತು. ಪೇಜ್ ಇಂಡಸ್ಟ್ರೀಸ್‌ನ ಮಾರುಕಟ್ಟೆ ಮೌಲ್ಯವು 37,822.84 ಕೋಟಿ ರೂಪಾಯಿಯಾಗಿದೆ. ಈ ವರ್ಷದ ಫೆಬ್ರವರಿ 16 ರಂದು, ಪೇಜ್ ಇಂಡಸ್ಟ್ರೀಸ್ ಲಿಮಿಟೆಡ್ ಎಕ್ಸ್-ಡಿವಿಡೆಂಡ್ ವ್ಯಾಪಾರ ಮಾಡಿತು. ಕಂಪನಿಯು ಶೇಕಡಾ 100ರಷ್ಟು ಲಾಭಾಂಶವನ್ನು ಘೋಷಿಸಿದೆ. ಈ ಹಿಂದೆ ಕಂಪನಿಯು 2023 ರಲ್ಲಿ ಲಾಭಾಂಶವನ್ನು ನೀಡಿತ್ತು.

    ಕಳೆದ ಒಂದು ತಿಂಗಳಲ್ಲಿ ಕಂಪನಿಯ ಷೇರುಗಳು ಶೇ.6ರಷ್ಟು ಕುಸಿದಿವೆ. ಕಳೆದ ಆರು ತಿಂಗಳಲ್ಲಿ 13% ಮತ್ತು ಈ ವರ್ಷ ಇಲ್ಲಿಯವರೆಗೆ 12% ರಷ್ಟು ಕಡಿಮೆಯಾಗಿದೆ. ಆದಾರೂ, 2007 ರಿಂದ ಇಲ್ಲಿಯವರೆಗೆ ಈ ಷೇರಿನ ಬೆಲೆ ಶೇಕಡಾ 12,396 ರಷ್ಟು ಹೆಚ್ಚಾಗಿದೆ.

    ಈ ಕಂಪನಿಯು ಒಳ ಉಡುಪು ಸೇರಿದಂತೆ ವಿವಿಧ ರೀತಿಯ ಉಡುಪುಗಳ ವ್ಯವಹಾರದಲ್ಲಿ ಸಕ್ರಿಯವಾಗಿದೆ. ಪೇಜ್ ಇಂಡಸ್ಟ್ರೀಸ್ ಲಿಮಿಟೆಡ್ ಜಾಕಿ ಉತ್ಪನ್ನಗಳ ತಯಾರಕ, ಮಾರಾಟಗಾರ ಮತ್ತು ವಿತರಕನಾಗಿದೆ. ಕಂಪನಿಯು ಈಜುಡುಗೆಗಾಗಿ ಅಂತರರಾಷ್ಟ್ರೀಯ ಬ್ರಾಂಡ್ ಸ್ಪೀಡೋಗೆ ವ್ಯಾಪಾರ ಪರವಾನಗಿಯನ್ನು ಸಹ ಹೊಂದಿದೆ. ಪೇಜ್ ಇಂಡಸ್ಟ್ರೀಸ್ ಲಿಮಿಟೆಡ್‌ನ ವ್ಯವಹಾರವು ನೇಪಾಳ, ಬಾಂಗ್ಲಾದೇಶ, ಶ್ರೀಲಂಕಾ ಸೇರಿದಂತೆ ಹಲವು ದೇಶಗಳಲ್ಲಿ ಹರಡಿದೆ. ಕಂಪನಿಯ ಆದಾಯವು ಡಿಸೆಂಬರ್ ತ್ರೈಮಾಸಿಕದಲ್ಲಿ ವಾರ್ಷಿಕ ಆಧಾರದ ಮೇಲೆ 2.4 ಪ್ರತಿಶತದಷ್ಟು ಹೆಚ್ಚಾಗಿದ್ದು, 1,228.8 ಕೋಟಿ ರೂಪಾಯಿ ಮುಟ್ಟಿದೆ.

    ಅಮೆರಿಕ ಕೇಂದ್ರೀಯ ಬ್ಯಾಂಕ್​ ನೀತಿ ಪ್ರಕಟಿಸುತ್ತಿದ್ದಂತೆಯೇ ಭಾರತೀಯ ಷೇರುಪೇಟೆಯಲ್ಲಿ ಚೇತರಿಕೆ: ಮಿಡ್​ಕ್ಯಾಪ್​, ಸ್ಮಾಲ್​ಕ್ಯಾಪ್​ಗಳಿಗೆ ಮರಳಿತು ಜೀವ

    ಕೆಲ ದಿನಗಳಲ್ಲಿಯೇ 58%ರವರೆಗೂ ಕುಸಿದ ಮಿಡ್​ ಕ್ಯಾಪ್​ ಷೇರುಗಳು: ಸ್ಟಾಕ್​ ದರ ಕುಸಿದಾಗಲೇ ಹೂಡಿಕೆ ಮಾಡುವುದು ಉತ್ತಮ ತಂತ್ರಗಾರಿಕೆ

    ಮಾರ್ಚ್​ ತಿಂಗಳಲ್ಲಿ ಮಾರುಕಟ್ಟೆ ಮಹಾಕುಸಿತ: 3,018 ಷೇರುಗಳಲ್ಲಿ ಕರಗಿತು ಹೂಡಿಕೆದಾರರ ಸಂಪತ್ತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts