More

    ಅಮೆರಿಕ ಕೇಂದ್ರೀಯ ಬ್ಯಾಂಕ್​ ನೀತಿ ಪ್ರಕಟಿಸುತ್ತಿದ್ದಂತೆಯೇ ಭಾರತೀಯ ಷೇರುಪೇಟೆಯಲ್ಲಿ ಚೇತರಿಕೆ: ಮಿಡ್​ಕ್ಯಾಪ್​, ಸ್ಮಾಲ್​ಕ್ಯಾಪ್​ಗಳಿಗೆ ಮರಳಿತು ಜೀವ

    ಮುಂಬೈ, ಮಾ.21 (ಪಿಟಿಐ) ಅಮೆರಿಕದ ಕೇಂದ್ರೀಯ ಬ್ಯಾಂಕ್​ ಆಗಿರುವ ಫೆಡರಲ್​ ರಿಸರ್ವ್​ ಈ ವರ್ಷ ಮೂರು ಬಾರಿ ಬ್ಯಾಂಕ್​ ಬಡ್ಡಿ ದರ ಕಡಿತ ಮಾಡಲು ಯೋಜಿಸಿದೆ. ಈ ಹಿನ್ನೆಲೆಯಲ್ಲಿ ಗುರುವಾರ ಭಾರತೀಯ ಷೇರು ಪೇಟೆಯಲ್ಲಿ ಲೋಹ, ವಿದ್ಯುತ್ ಮತ್ತು ಇಂಧನ ಷೇರುಗಳ ಖರೀದಿ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ಏರುಗತಿಯಿಂದಾಗಿ ಬಿಎಸ್​ಇ ಬೆಂಚ್‌ಮಾರ್ಕ್ ಸೂಚ್ಯಂಕ 539 ಅಂಕಗಳಷ್ಟು ಜಿಗಿದರೆ, ನಿಫ್ಟಿ ಸೂಚ್ಯಂಕ 22,000 ಮಟ್ಟವನ್ನು ದಾಟಿತು.

    ಮಿಡ್​ ಕ್ಯಾಪ್​ ಮತ್ತು ಸ್ಮಾಲ್​ ಕ್ಯಾಪ್ ಷೇರುಗಳಲ್ಲಿ ಗುರುವಾರ ಭಾರೀ ಏರಿಕೆ ಕಂಡುಬಂದಿತು. ಬಿಎಸ್‌ಇ ಮಿಡ್‌ಕ್ಯಾಪ್ ಸೂಚ್ಯಂಕ ಶೇಕಡಾ 2.36 ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕವು ಶೇಕಡಾ 2.01 ರಷ್ಟು ಏರಿತು.

    ಸತತ ಎರಡನೇ ದಿನ ಏರಿಕೆ ಕಂಡ 30-ಷೇರುಗಳ ಬಿಎಸ್‌ಇ ಸೂಚ್ಯಂಕವು ಗುರುವಾರ 539.50 ಅಂಕಗಳು ಅಥವಾ ಶೇಕಡಾ 0.75 ರಷ್ಟು ಜಿಗಿದು 72,641.19 ಕ್ಕೆ ಸ್ಥಿರವಾಯಿತು. ದಿನದ ವಹಿವಾಟಿನ ನಡುವೆ ಇದು 780.77 ಅಂಕಗಳು ಅಥವಾ ಶೇಕಡಾ 1.08 ರಷ್ಟು ಹೆಚ್ಚಳವಾಗಿ 72,882.46 ಗೆ ಏರಿಕೆ ಕಂಡಿತ್ತು.

    ಎನ್‌ಎಸ್‌ಇ ನಿಫ್ಟಿ ಸೂಚ್ಯಂಕವು 172.85 ಅಂಕಗಳು ಅಥವಾ ಶೇಕಡಾ 0.79 ರಷ್ಟು ಏರಿಕೆಯಾಗಿ 22,011.95 ಕ್ಕೆ ತಲುಪಿತು.

    ಪ್ರಮುಖ ಷೇರುಗಳ ಪೈಕಿ, ಎನ್‌ಟಿಪಿಸಿ, ಪವರ್ ಗ್ರಿಡ್, ಇಂಡಸ್‌ಇಂಡ್ ಬ್ಯಾಂಕ್, ಟಾಟಾ ಸ್ಟೀಲ್, ಟಾಟಾ ಮೋಟಾರ್ಸ್, ಜೆಎಸ್‌ಡಬ್ಲ್ಯೂ ಸ್ಟೀಲ್, ಟೆಕ್ ಮಹೀಂದ್ರಾ ಮತ್ತು ಲಾರ್ಸೆನ್ ಆಂಡ್ ಟೂಬ್ರೊ ಅತಿ ಹೆಚ್ಚು ಲಾಭ ಗಳಿಸಿದವು. ಭಾರ್ತಿ ಏರ್‌ಟೆಲ್, ಮಾರುತಿ, ಐಸಿಐಸಿಐ ಬ್ಯಾಂಕ್ ಮತ್ತು ಏಷ್ಯನ್ ಪೇಂಟ್ಸ್ ನಷ್ಟ ಅನುಭವಿಸಿದವು.

    ಏಷ್ಯಾದ ಮಾರುಕಟ್ಟೆಗಳ ಪೈಕಿ, ಸಿಯೋಲ್, ಟೋಕಿಯೋ ಮತ್ತು ಹಾಂಗ್ ಕಾಂಗ್ ಗಮನಾರ್ಹವಾಗಿ ಏರಿಕೆ ಕಂಡರೆ ಶಾಂಘೈ ಕುಸಿತ ಕಂಡಿತು. ಐರೋಪ್ಯ ಮಾರುಕಟ್ಟೆಗಳು ಸಕಾರಾತ್ಮಕ ವಹಿವಾಟು ನಡೆಸಿದವು. ಅಮೆರಿಕದ ವಾಲ್ ಸ್ಟ್ರೀಟ್ ಬುಧವಾರ ಗಮನಾರ್ಹ ಲಾಭ ಕಂಡು, ಅದರ ಸೂಚ್ಯಂಕ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಜಿಗಿಯಿತು.
    .
    “ಹಣದುಬ್ಬರವು ದೀರ್ಘಾವಧಿಯ ಗುರಿಗಿಂತ ಹೆಚ್ಚಿದ್ದರೂ ಫೆಡರಲ್ ರಿಸರ್ವ್ ಈ ವರ್ಷ ಮೂರು ಬಡ್ಡಿದರ ಕಡಿತದ ಹಾದಿಯಲ್ಲಿ ಉಳಿಯಲು ಸೂಚಿಸಿರುವುದರಿಂದ ದೇಶೀಯ ಮಾರುಕಟ್ಟೆಯು ಜಾಗತಿಕ ಮಾರುಕಟ್ಟೆಯಿಂದ ಆಶಾವಾದವನ್ನು ತುಂಬುತ್ತಿದೆ” ಎಂದು ಜಿಯೋಜಿತ್ ಫೈನಾನ್ಷಿಯಲ್ ಸರ್ವೀಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದರು.

    ಫೆಡರಲ್ ರಿಸರ್ವ್ ಈ ವರ್ಷದ ಕೊನೆಯಲ್ಲಿ ಬ್ಯಾಂಕ್​ ಬಡ್ಡಿ ದರ ಕಡಿತ ಮಾಡಲು ನಿರೀಕ್ಷಿಸುತ್ತದೆ. ಅಲ್ಲದೆ, ಈ ವರ್ಷ ಮೂರು ಬಡ್ಡಿದರ ಕಡಿತದ ಸಾಧ್ಯತೆಗಳನ್ನು ಮುಂದಿಟ್ಟಿದೆ. ಅಮೆರಿಕದ ಸ್ಟಾಕ್‌ಗಳು ದಾಖಲೆಯ ಏರುಗತಿ ಕಂಡ ನಂತರ ಜಾಗತಿಕ ಸೂಚ್ಯಂಕಗಳು ಗುರುವಾರ ಹೆಚ್ಚಾಗಿವೆ ಎಂದು HDFC ಸೆಕ್ಯುರಿಟೀಸ್‌ನ ಚಿಲ್ಲರೆ ಸಂಶೋಧನೆಯ ಮುಖ್ಯಸ್ಥ ದೀಪಕ್ ಜಸಾನಿ ಹೇಳಿದರು.

    ಎಲ್ಲಾ ವಲಯದ ಸೂಚ್ಯಂಕಗಳು ಲಾಭ ಕಂಡವು, ಅಲ್ಲಿ ವಿದ್ಯುತ್ 3.06 ಶೇಕಡಾ, ರಿಯಾಲ್ಟಿ 2.96 ಶೇಕಡಾ, ಕೈಗಾರಿಕೆಗಳು (2.81 ಶೇಕಡಾ), ಬಂಡವಾಳ ಸರಕುಗಳು (2.77 ಶೇಕಡಾ), ಲೋಹ (2.73 ಶೇಕಡಾ), ಸೇವೆಗಳು (1.99 ಶೇಕಡಾ), ಸರಕುಗಳು (ಶೇ. 1.98) ಮತ್ತು ಗ್ರಾಹಕ ವಿವೇಚನೆ (ಶೇ. 1.67) ಹೆಚ್ಚಳ ಕಂಡವು. ಒಟ್ಟು 2,758 ಷೇರುಗಳು ಹೆಚ್ಚಳ ಸಾಧಿಸಿದರೆ 1,061 ಕುಸಿತ ಕಂಡವು. 107 ಬದಲಾಗದೆ ಉಳಿದಿವು. .

    ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಬುಧವಾರ 2,599.19 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ ಎಂದು ವಿನಿಮಯ ಕೇಂದ್ರ ತಿಳಿಸಿದೆ.

    30-ಷೇರುಗಳ ಬಿಎಸ್‌ಇ ಸೂಚ್ಯಂಕವು 89.64 ಅಂಕಗಳು ಅಥವಾ ಶೇಕಡಾ 0.12 ರಷ್ಟು ಚೇತರಿಕೆ ಕಂಡು ಬುಧವಾರ 72,101.69 ಕ್ಕೆ ಸ್ಥಿರವಾಗಿತ್ತು. ಎನ್‌ಎಸ್‌ಇ ನಿಫ್ಟಿ ಸೂಚ್ಯಂಕವು 21.65 ಅಂಕಗಳು ಅಥವಾ ಶೇಕಡಾ 0.10 ರಷ್ಟು ಏರಿಕೆಯಾಗಿ 21,839.10 ಕ್ಕೆ ತಲುಪಿತ್ತು.

    ವಿವಿಧ ಸೂಚ್ಯಂಕಗಳು

    ಬಿಎಸ್​ಇ ಮಿಡ್​ಕ್ಯಾಪ್​ ಸೂಚ್ಯಂಕ: 38,652.42 (2.36% ಏರಿಕೆ)
    ಬಿಎಸ್​ಇ ಸ್ಮಾಲ್​​ಕ್ಯಾಪ್​ ಸೂಚ್ಯಂಕ: 42,321.99 (2.01% ಏರಿಕೆ)
    ನಿಫ್ಟಿ ಮಿಡ್​ಕ್ಯಾಪ್​ 100 ಸೂಚ್ಯಂಕ: 47,033.55 (2.43% ಏರಿಕೆ)
    ನಿಫ್ಟಿ ಸ್ಮಾಲ್​​ಕ್ಯಾಪ್​ 100 ಸೂಚ್ಯಂಕ: 14,960.30 (2.51% ಏರಿಕೆ)

    ಕೆಲ ದಿನಗಳಲ್ಲಿಯೇ 58%ರವರೆಗೂ ಕುಸಿದ ಮಿಡ್​ ಕ್ಯಾಪ್​ ಷೇರುಗಳು: ಸ್ಟಾಕ್​ ದರ ಕುಸಿದಾಗಲೇ ಹೂಡಿಕೆ ಮಾಡುವುದು ಉತ್ತಮ ತಂತ್ರಗಾರಿಕೆ

    ಮಾರ್ಚ್​ ತಿಂಗಳಲ್ಲಿ ಮಾರುಕಟ್ಟೆ ಮಹಾಕುಸಿತ: 3,018 ಷೇರುಗಳಲ್ಲಿ ಕರಗಿತು ಹೂಡಿಕೆದಾರರ ಸಂಪತ್ತು

    2510ರಿಂದ 265ಕ್ಕೆ ಕುಸಿದ ರಿಲಯನ್ಸ್​ ಷೇರು: ಅನಿಲ್ ಅಂಬಾನಿ ಕಂಪನಿಯ ಸ್ಟಾಕ್​ಗೆ ಈಗ ಎಲ್ಲಿಲ್ಲದ ಬೇಡಿಕೆ ಏಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts