More

    2510ರಿಂದ 265ಕ್ಕೆ ಕುಸಿದ ರಿಲಯನ್ಸ್​ ಷೇರು: ಅನಿಲ್ ಅಂಬಾನಿ ಕಂಪನಿಯ ಸ್ಟಾಕ್​ಗೆ ಈಗ ಎಲ್ಲಿಲ್ಲದ ಬೇಡಿಕೆ ಏಕೆ?

    ಮುಂಬೈ: ಅನಿಲ್ ಅಂಬಾನಿ ಅವರ ಕಂಪನಿ ರಿಲಯನ್ಸ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್​ ಷೇರುಗಳ ಏರಿಕೆಯ ಪ್ರವೃತ್ತಿ ಮುಂದುವರಿದಿದೆ. ವಾರದ ನಾಲ್ಕನೇ ವಹಿವಾಟಿನ ದಿನವಾದ ಗುರುವಾರ ಈ ಷೇರು ಶೇ. 8ರಷ್ಟು ಜಿಗಿದು 268.45 ರೂ. ಮುಟ್ಟಿತು. ಇದು ಈ ಷೇರಿನ 52 ವಾರಗಳ ಗರಿಷ್ಠ ಬೆಲೆಯಾಗಿದೆ. ಮೇ 2023 ರಲ್ಲಿ, ಈ ಷೇರು 52 ವಾರಗಳ ಕನಿಷ್ಠ ಬೆಲೆಯಾಧ 131.40 ರೂ. ತಲುಪಿತ್ತು.

    ಕಳೆದ ಒಂದು ವಾರದಿಂದ ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್ ಷೇರುಗಳಲ್ಲಿ ಬಲವಾದ ಏರಿಕೆ ಕಂಡುಬಂದಿದೆ. ಈ ಅವಧಿಯಲ್ಲಿ, ಈ ಸ್ಟಾಕ್ ಬಿಎಸ್‌ಇ ಸೂಚ್ಯಂಕಕ್ಕೆ ಹೋಲಿಸಿದರೆ 26 ಶೇಕಡಾಕ್ಕಿಂತ ಹೆಚ್ಚಿನ ಆದಾಯವನ್ನು ನೀಡಿದೆ. ಕಳೆದ ಮೂರು ತಿಂಗಳಲ್ಲಿ ಈ ಷೇರು ಬೆಲೆ ಅಂದಾಜು 40 ಪ್ರತಿಶತ ಹೆಚ್ಚಿದೆ. ಒಂದು ವಾರದಲ್ಲಿ 26.58% ಏರಿಕೆ ಕಂಡಿದೆ.

    ಜನವರಿ 2008 ರಲ್ಲಿ ರಿಲಯನ್ಸ್ ಇನ್ಫ್ರಾ ಷೇರುಗಳ ಬೆಲೆ ರೂ 2510.35 ರಷ್ಟಿತ್ತು. ನಂತರ ಈ ಗರಿಷ್ಠ ಮಟ್ಟದ ಬೆಲೆಯಿಂದ 99 ಪ್ರತಿಶತಕ್ಕಿಂತ ಹೆಚ್ಚು ಕುಸಿತ ಕಂಡಿತು. ಆದರೂ, ಕಳೆದ 4 ವರ್ಷಗಳಲ್ಲಿ, ರಿಲಯನ್ಸ್ ಇನ್ಫ್ರಾ ಷೇರುಗಳಲ್ಲಿ ತ್ವರಿತ ಏರಿಕೆ ಕಂಡುಬಂದಿದೆ. ಕಂಪನಿಯ ಷೇರುಗಳ ಬೆಲೆ ಮಾರ್ಚ್ 2020 ರಲ್ಲಿ 10 ರೂ. ಇತ್ತು. ಈಗ ಇದು 265 ರೂ.ಗೆ ತಲುಪಿದೆ.

    ಈಗ ಏಕೆ ಏರುತ್ತಿದೆ?:

    ಇತ್ತೀಚೆಗೆ ಕಂಪನಿಯು ಐಸಿಐಸಿಐ ಬ್ಯಾಂಕ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ರಿಲಯನ್ಸ್ ಇನ್‌ಫ್ರಾಸ್ಟ್ರಕ್ಚರ್ ಪ್ರಕಾರ, ಮಾರ್ಚ್ 14, 2024 ರಂದು ರಿಲಯನ್ಸ್ ಪವರ್‌ ಕಂಪನಿಯು ಐಸಿಐಸಿಐ ಬ್ಯಾಂಕ್‌ನೊಂದಿಗೆ ಸಾಲ ಇತ್ಯರ್ಥ ಒಪ್ಪಂದವನ್ನು ಮಾಡಿಕೊಂಡಿದೆ. ICICI ಬ್ಯಾಂಕ್ ಕಂಪನಿಯಲ್ಲಿ 211 ಈಕ್ವಿಟಿ ಷೇರುಗಳನ್ನು ಹೊಂದಿದೆ ಮತ್ತು ಸಂಬಂಧಿತ ಪಕ್ಷ ಅಥವಾ ಪ್ರವರ್ತಕರ ಗುಂಪಿನ ಭಾಗವಲ್ಲ.

    ರಿಲಯನ್ಸ್ ಇನ್ಫ್ರಾದ ಸಹವರ್ತಿ ಕಂಪನಿಯಾದ ರಿಲಯನ್ಸ್ ಪವರ್ ಲಿಮಿಟೆಡ್ (ಆರ್‌ಪವರ್) ಪಡೆಯುವ ಹಣಕಾಸಿನ ಸೌಲಭ್ಯಕ್ಕೆ ಕಾರ್ಪೊರೇಟ್ ಗ್ಯಾರಂಟರ ಸಾಮರ್ಥ್ಯದಲ್ಲಿ ಆರ್‌ಪವರ್ ಜೊತೆಗೆ ಸೆಟಲ್‌ಮೆಂಟ್ ಒಪ್ಪಂದಕ್ಕೆ ಸಹಿ ಹಾಕಿದೆ. ಮಾರ್ಚ್ 14, 2024 ರಂದು ಐಸಿಐಸಿಐ ಬ್ಯಾಂಕ್​ನೊಂದಿಗೆ ಆರ್​ಪವರ್​ ಎರವಲುಗಳಿಗೆ ಸಂಬಂಧಿಸಿದಂತೆ ಸಂಪೂರ್ಣ ಬಾಧ್ಯತೆಯನ್ನು ಆರ್​ಪವರ್​​ನಿಂದ ಇತ್ಯರ್ಥಪಡಿಸಲಾಗಿದೆ. ಇದರ ಪ್ರಕಾರ ಕಾರ್ಪೊರೇಟ್ ಗ್ಯಾರಂಟಿಗೆ ಸಂಬಂಧಿಸಿದಂತೆ ಕಂಪನಿಯ ಎಲ್ಲ ಸಂಭಾವ್ಯ ಕಟ್ಟುಪಾಡುಗಳು ಕೊನೆಗೊಂಡಿವೆ.

    ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್ ಕಂಪನಿಯು ವಿದ್ಯುತ್, ರಸ್ತೆಗಳು, ಮೆಟ್ರೋ ರೈಲು ಮತ್ತು ಇತರ ಮೂಲಸೌಕರ್ಯ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಎಂಜಿನಿಯರಿಂಗ್ ಮತ್ತು ನಿರ್ಮಾಣ ಸೇವೆಗಳನ್ನು ಒದಗಿಸುವ ವ್ಯವಹಾರದಲ್ಲಿ ತೊಡಗಿಸಿಕೊಂಡಿದೆ.

    ದಾಖಲೆಯ ಗರಿಷ್ಠ ಮಟ್ಟ ಮುಟ್ಟಿದ ಚಿನ್ನದ ಬೆಲೆ : ಬಂಗಾರದ ದರ ಗಗನಕ್ಕೆ ಏರುತ್ತಿರುವುದೇಕೆ?

    ಹೋಳಿ ಹಬ್ಬಕ್ಕೆ 9 ಷೇರುಗಳ ಆಯ್ಕೆ: ಇಬ್ಬರು ಮಾರುಕಟ್ಟೆ ತಜ್ಞರ ಸ್ಟಾಕ್​ ಪಿಕ್​ ಹೀಗಿದೆ…

    499 ರಿಂದ 1 ರೂಪಾಯಿಗೆ ಕುಸಿದಿದ್ದ ಷೇರು: ರಿಲಯನ್ಸ್ ಪವರ್ ಸ್ಟಾಕ್​ಗೆ ಈಗ ಭರ್ಜರಿ ಡಿಮ್ಯಾಂಡು ಏಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts